ಬೆಂಗಳೂರು: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.‌‌ ರೇಣುಕಾಚಾರ್ಯ ಅವರ ಹೊನ್ನಾಳಿ ಕ್ಷೇತ್ರದ ಹೆಸರು ಪ್ರತಿಧ್ವನಿಸಿದೆ.

ಹೊನ್ನಾಳಿ ಕ್ಷೇತ್ರದ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪಡೆಯುವಾಗ ನಡೆಯುತ್ತಿದ್ದ ಚರ್ಚೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮೋದನೆ ಸಂಬಂಧ ಕೇವಲ ತಾಲ್ಲೂಕು ಹೆಸರು ಹೇಳಿದ್ದಾರಂತೆ.

ಈ ವೇಳೆ ಕೆಣಕಿದ ಸಚಿವ ಸಿ.ಪಿ. ಯೋಗೇಶ್ವರ್ ಸಾಸಿವೆಹಳ್ಳಿ ಯಾವ ತಾಲೂಕು ಎಂದು‌ ಗೊತ್ತಾಗಲಿಲ್ಲ ಎಂದು ಯೋಗೀಶ್ವರ್ ಜೋರಾಗಿ ಕೇಳಿದ್ದಾರೆ.. ಆಗ ಮಧ್ಯಪ್ರವೇಶಿಸಿದ ಸಿಎಂ ಯಡಿಯೂರಪ್ಪ.. ರವಿಕುಮಾರ್ ಅದು ಯಾವ ತಾಲೂಕು ಅಂತಾ ಹೇಳ್ರೀ ಎಂದಿದ್ದಾರೆ. ಇದಕ್ಕೆ ಅದು ಹೊನ್ನಾಳಿ ತಾಲೂಕಿನ ಯೋಜನೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ನಿನ್ನ ಉದ್ದೇಶ ಈಡೇರಿತಲ್ವಾ, ಯಾವ ತಾಲೂಕು ಅಂತಾ ಗೊತ್ತಾಯಿತಲ್ವಾ ಎಂದು ಯೋಗೇಶ್ವರ್ ಗೆ ಉಳಿದ ಸಚಿವರು ಕಿಚಾಯಿಸಿದ್ದಾರೆ ಎನ್ನಲಾಗಿದೆ.

The post ಸಚಿವ ಸಂಪುಟ ಸಭೆಯಲ್ಲಿ ಹೊನ್ನಾಳಿ ಕ್ಷೇತ್ರದ್ದೇ ಸದ್ದು: ಯಾಕೆ ಗೊತ್ತಾ..? appeared first on News First Kannada.

Source: newsfirstlive.com

Source link