ಸಡನ್ನಾಗಿ ಮಾಜಿ ಲವರ್ ಸಿಕ್ಕರೆ? ಸಾರಾ ಅಲಿ ಖಾನ್​ ಕಂಡು ಕಾರ್ತಿಕ್​ ಆರ್ಯನ್​ ಏನ್​ ಮಾಡಿದ್ರು ನೋಡಿ.. | Sara Ali Khan Kartik Aaryan meet and hug each other in an award function


ಸಡನ್ನಾಗಿ ಮಾಜಿ ಲವರ್ ಸಿಕ್ಕರೆ? ಸಾರಾ ಅಲಿ ಖಾನ್​ ಕಂಡು ಕಾರ್ತಿಕ್​ ಆರ್ಯನ್​ ಏನ್​ ಮಾಡಿದ್ರು ನೋಡಿ..

ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್

Sara Ali Khan | Kartik Aaryan: ಸಾರಾ ಅಲಿ ಖಾನ್​ ಮತ್ತು ಕಾರ್ತಿಕ್ ಆರ್ಯನ್​ ಅವರನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಇದೊಂದು ಮುಜುಗರದ ಪ್ರಸಂಗ’ ಎಂದು ಕೆಲವರು ಹೇಳಿದ್ದಾರೆ.

ಬಣ್ಣದ ಲೋಕದಲ್ಲಿ ಸೆಲೆಬ್ರಿಟಿಗಳ ಪ್ರೇಮ್​ ಕಹಾನಿಗಳಿಗೆ ಕೊರತೆ ಇಲ್ಲ. ಅದೇ ರೀತಿ ಬ್ರೇಕಪ್​ಗಳಿಗೂ ಬರಗಾಲ ಇಲ್ಲ. ಬಾಲಿವುಡ್​ (Bollywood) ಮಂದಿಗೆ ಆಗಾಗ ಲವ್​ ಆಗುತ್ತದೆ. ಅಷ್ಟೇ ಬೇಗ ಬ್ರೇಕಪ್​ ಕೂಡ ಆಗುತ್ತದೆ. ನಟ ಕಾರ್ತಿಕ್​​ ಆರ್ಯನ್​ (Kartik Aaryan) ಮತ್ತು ನಟಿ ಸಾರಾ ಆಲಿ ಖಾನ್ ಅವರ ನಡುವೆಯೂ ಅಂಥ ಅಲ್ಪಾವಧಿ ಪ್ರೀತಿ ಸಿಗುರಿತ್ತು. ‘ಲವ್​ ಆಜ್​ ಕಲ್​ 2’ ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿ ನಟಿಸಿದ್ದರು. ಆಗ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಈ ಜೋಡಿ ಸಾರ್ವಜನಿಕವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಹಾಗಂತ ಗಾಸಿಪ್​ ಮಂದಿ ಸುಮ್ಮನೆ ಇರುತ್ತಾರಾ? ಖಂಡಿತಾ ಇಲ್ಲ. ಸಾರಾ ಅಲಿ ಖಾನ್​ (Sara Ali Khan) ಮತ್ತು ಕಾರ್ತಿಕ್​ ಆರ್ಯನ್​ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬ ಮಾತು ಎಲ್ಲೆಡೆ ಹಬ್ಬಿತ್ತು. ಆದರೆ ನಂತರದ ದಿನಗಳಲ್ಲಿ ಈ ಜೋಡಿ ಹಕ್ಕಿಗಳು ದೂರಾದವು. ಈಗ ಆಕಸ್ಮಿಕವಾಗಿ ಇಬ್ಬರ ಭೇಟಿ ಆಗಿದೆ. ಅದರ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದಕ್ಕೆ ಕಾರ್ತಿಕ್​ ಆರ್ಯನ್ ಬಂದಿದ್ದರು. ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಾ, ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್​ ನೀಡುತ್ತಿರುವಾಗ ಅವರಿಗೆ ಸಡನ್ನಾಗಿ ಸಾರಾ ಅಲಿ ಖಾನ್​ ಎದುರಾದರು. ಇನ್ನೇನು ಮಾಡೋದು? ನಗು ನಗುತ್ತಲೇ ಮಾತನಾಡಿಸೋದು ಇಬ್ಬರಿಗೂ ಅನಿವಾರ್ಯ ಆಯಿತು. ಕಾರ್ತಿಕ್​ ಆರ್ಯನ್​ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಪ್ರೇಯಸಿಯನ್ನು ತಬ್ಬಿಕೊಂಡರು.

TV9 Kannada


Leave a Reply

Your email address will not be published.