ಸತತ ಸೋಲಿನ ಬೆನ್ನಲ್ಲೇ ಹಾದಿ ಬದಲಿಸಿದ ನಟ ಅಕ್ಷಯ್ ಕುಮಾರ್; ಹೊಸ ಚಿತ್ರಕ್ಕೆ ಹಳೆಯ ಥಿಯರಿ | Akshay Kumar to act in movie that is based on Indian Air Force officer


ಸತತ ಸೋಲಿನ ಬೆನ್ನಲ್ಲೇ ಹಾದಿ ಬದಲಿಸಿದ ನಟ ಅಕ್ಷಯ್ ಕುಮಾರ್; ಹೊಸ ಚಿತ್ರಕ್ಕೆ ಹಳೆಯ ಥಿಯರಿ

ಅಕ್ಷಯ್ ಕುಮಾರ್

ನೂರಾರು ಕೋಟಿ ಬಜೆಟ್​ನಲ್ಲಿ ರೆಡಿ ಆದ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಲಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟ ಉಂಟಾಗಿದೆ. ಹೀಗಾಗಿ, ಹಳೆಯ ಥಿಯರಿ ಫಾಲೋ ಮಾಡಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ.

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ (Bollywood) ಖ್ಯಾತ ನಾಮರಲ್ಲಿ ಒಬ್ಬರು. ಅವರ ಸಿನಿಮಾಗಳಿಗೆ ದುಡ್ಡು ಹಾಕಿದರೆ ಲಾಸ್ ಆಗುವುದೇ ಇಲ್ಲ ಎನ್ನುವ ಕಾಲ ಒಂದು ಇತ್ತು. ಆದರೆ, ಇತ್ತೀಚೆಗೆ ಈ ಥಿಯರಿ ಯಾಕೋ ಕೆಲಸ ಮಾಡುತ್ತಿಲ್ಲ. ಅಕ್ಷಯ್ ಕುಮಾರ್(Akshay Kumar) ಸಿನಿಮಾಗಳು ಸತತ ಸೋಲು ಕಾಣುತ್ತಿವೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡ ಚಿತ್ರಗಳು ಕೆಲವೇ ಕೋಟಿ ಕಲೆಕ್ಷನ್ ಮಾಡಿ ಪ್ರದರ್ಶನ ನಿಲ್ಲಿಸುತ್ತಿವೆ. ಇದು ನಿರ್ಮಾಪಕರ ಚಿಂತೆಗೆ ಕಾರಣವಾಗಿದೆ. ಈಗ ಸತತ ಸೋಲಿನ ಬೆನ್ನಲ್ಲೇ ಅಕ್ಷಯ್ ಟ್ರ್ಯಾಕ್ ಬದಲಿಸಿದ್ದಾರೆ. ಈ ಮೊದಲು ಗೆಲುವು ಕಂಡಿದ್ದ ಸಿನಿಮಾಗಳ ರೀತಿಯ ಪ್ರಾಜೆಕ್ಟ್​​ಗಳನ್ನು ಅವರು ಒಪ್ಪಿಕೊಳ್ಳಲು ಮುಂದಾಗಿದ್ದಾರೆ.

ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ‘ಅತ್ರಂಗಿ ರೇ’ ವಿಮರ್ಶಕರಿಂದ ನೆಗೆಟಿವ್ ವಿಮರ್ಶೆ ಪಡೆಯಿತು. ಚಿತ್ರಮಂದಿರದಲ್ಲಿ ರಿಲೀಸ್ ಆದ ‘ಬಚ್ಚನ್​ ಪಾಂಡೆ’ ಸಿನಿಮಾ ಸೋಲು ಕಂಡಿತು. ನೂರಾರು ಕೋಟಿ ಬಜೆಟ್​ನಲ್ಲಿ ರೆಡಿ ಆದ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಲಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟ ಉಂಟಾಗಿದೆ. ಹೀಗಾಗಿ, ಹಳೆಯ ಥಿಯರಿ ಫಾಲೋ ಮಾಡಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ.

ಈಗಾಗಲೇ ಅಕ್ಷಯ್ ಕುಮಾರ್ ಅವರು ಸೇನಾಧಿಕಾರಿ ಹಾಗೂ ನೌಕಾಪಡೆಯ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಜನರು ಇಷ್ಟಪಟ್ಟಿದ್ದರು. ಈ ಬಾರಿ ಅವರು ವಾಯುಪಡೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಅನ್ನೋದು ವಿಶೇಷ.

TV9 Kannada


Leave a Reply

Your email address will not be published.