ಸತ್ತ ಸ್ನೇಹಿತ ಕರೆ ಮಾಡುತ್ತಿದ್ದಾನೆ..ನಾನು ಹೋಗುತ್ತಿದ್ದೇನೆ..ಎಂದು ಸೆಲ್ ಟವರ್ ಹತ್ತಿದ ಯುವಕ | Young man climb cell tower for suicide with calling his friend from heaven


ಸತ್ತ ಸ್ನೇಹಿತ ಕರೆ ಮಾಡುತ್ತಿದ್ದಾನೆ..ನಾನು ಹೋಗುತ್ತಿದ್ದೇನೆ..ಎಂದು ಸೆಲ್ ಟವರ್ ಹತ್ತಿದ ಯುವಕ

ಸಾಂದರ್ಭಿಕ ಚಿತ್ರ

ಪ್ರತಿ ಫ್ರೆಂಡ್ ಬೇಕೇ ಬೇಕು ಕಣೋ…ಜೀವನದಲ್ಲಿ ಎಲ್ಲರಿಗೂ ಒಬ್ಬನಾದರೂ ಫ್ರೆಂಡ್ ಇದ್ದೇ ಇರುತ್ತಾನೆ. ತನ್ನೆಲ್ಲಾ ನೋವು ನಲಿವುಗಳನ್ನು ಹಂಚಿಕೊಳ್ಳಲು ಗೆಳೆತನ ಬೇಕೇ ಬೇಕು. ಗೆಳೆಯನಿಲ್ಲದಿದ್ದರೆ ಸ್ವರ್ಗ ಕೂಡ ನರಕವಾಗುತ್ತೆ ಎಂಬ ಮಾತಿದೆ. ಆದರೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗೆಳೆಯನೊಬ್ಬ ಇದಕ್ಕಿದ್ದಂತೆ ಇಲ್ಲದಾದರೆ ಏನಾಗಬಹುದು? ಅಂತಹದೊಂದು ಸಂದಿಗ್ಧ ಸ್ಥಿತಿಯಲ್ಲಿದ್ದಾನೆ ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂನಲ್ಲಿನ ಯುವಕ ಡೇವಿಡ್. ಡೇವಿಡ್​ಗೂ ಒಬ್ಬ ಗೆಳೆಯನಿದ್ದ ಹೆಸರು ರಂಜಿತ್ ರಮ್ಮ. ಆದರೆ ಕುಚುಕು ಗೆಳೆಯ ಕೆಲ ಮೃತಪಟ್ಟಿದ್ದಾನೆ. ಇತ್ತ ಡೇವಿಡ್​ಗೂ ಗೆಳೆಯನ ನೆನಪುಗಳು ಕಾಡಲಾರಂಭಿಸಿದೆ.

ಅದೆಷ್ಟರ ಮಟ್ಟಿಗೆ ಎಂದರೆ ನನಗೆ ಪ್ರತಿನಿತ್ಯ ಗೆಳೆಯ ರಂಜಿತ್ ರಮ್ಮ ಕರೆ ಮಾಡುತ್ತಿದ್ದಾನೆ ಎಂದು ಕೆಲವರಲ್ಲಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ನಾನು ಕೂಡ ಗೆಳೆಯನ ಬಳಿ ಹೋಗುತ್ತಿದ್ದೇನೆ ಎಂದೇಳಿ ನೇರವಾಗಿ ಮೊಬೈಲ್ ಟವರ್ ಹತ್ತಿದ್ದಾನೆ. ನಾವಿಬ್ಬರೂ ಪ್ರತಿನಿತ್ಯ ಮಾಡುತ್ತೇವೆ. ಅವನು ಯಾವಾಗಲೂ ನನಗೆ ಕರೆ ಮಾಡಿ ಬರಲು ಹೇಳುತ್ತಾನೆ. ಹೀಗಾಗಿ ನಾನು ಅವನೊಂದಿಗೆ ಇರುತ್ತೇನೆ ಎಂದು ಡೇವಿಡ್ ಸೆಲ್ ಟವರ್ ಹತ್ತಿದ್ದಾನೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಟವರ್ ಮೇಲೆ ನಿಂತಿದ್ದ ಡೇವಿಡ್​ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ. ಆತನನ್ನು ಕೆಳಗಿಳಿಸಲು ಪೊಲೀಸರು ಶತಪ್ರಯತ್ನ ನಡೆಸಿದರು. ಆತನ ಮಗನನ್ನು ತೋರಿಸಿ ಕೆಳಗೆ ಬರುವಂತೆ ತೋರಿಸಲಾಯಿತು. ಮಗನ ಮುಖ ನೋಡಿದ ಬಳಿಕ ಡೇವಿಡ್ ಟವರ್​ನಿಂದ ಕೆಳಗಿಳಿದಿದ್ದ. ಇದಾದ ಬಳಿಕ ವಶಕ್ಕೆ ಪಡೆದ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ಹೇಳಿದ್ದ ಪ್ರತಿ ಮಾತುಗಳು ಕೇಳಿ ಪೊಲೀಸರು ದಂಗಾದರು.

ಏಕೆಂದರೆ ಡೇವಿಡ್ ಹೇಳಿದ್ದು ಅದನ್ನೇ, ನನ್ನ ಮೃತ ಸ್ನೇಹಿತ ರಂಜಿತ್ ರಮ್ಮ ಕರೆ ಮಾಡುತ್ತಿದ್ದಾನೆ. ನಾನು ಕೂಡ ಅವನ ಬಳಿ ಹೋಗಬೇಕು. ಅವನನ್ನು ಒಬ್ಬಂಟಿಯಾಗಿ ಬಿಡಬಾರದು ಎಂದೆಲ್ಲಾ ಹೇಳುತ್ತಾ ಕೂತಿದ್ದ. ಇದನ್ನು ಕೇಳಿಸಿಕೊಂಡ ಪೊಲೀಸರಿಗೆ ಯುವಕ ಸ್ಥಿಮಿತ ಕಳೆದುಕೊಂಡಿರುವುದು ಖಚಿತವಾಗಿದೆ. ಗೆಳೆಯ ಅಗಲಿಕೆಯಿಂದಾಗಿ ಡೇವಿಡ್ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾನೆ. ಹೀಗಾಗಿ ಕೂಡಲೇ ಈತನನ್ನು ವೈದ್ಯರ ಬಳಿ ಕೌನ್ಸೆಲಿಂಗ್ ನಡೆಸಿ ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂ ಪೊಲೀಸ್ ಇನ್​ಸ್ಪೆಕ್ಟರ್ ಡೇವಿಡ್​ನನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

TV9 Kannada


Leave a Reply

Your email address will not be published.