ಬೆಂಗಳೂರು: ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇತ್ತೀಚೆಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಕಟುವಾಗಿ ಟೀಕಿಸಿದ್ದರು. ಈಗ ಮತ್ತೊಂದು ಪೋಸ್ಟ್​ ಹಾಕಿರುವ ಐಪಿಎಎಸ್ ಅಧಿಕಾರಿ ಡಿ. ರೂಪಾ ರೋಹಿಣಿ ಸಿಂಧೂರಿ ವಿರುದ್ಧ ಫೇಸ್​​ಬುಕ್​​ ವಾರ್​​ ಮುಂದುವರಿಸಿದ್ದಾರೆ.

ಅಪರಿಚಿತ ವ್ಯಕ್ತಿಯೋರ್ವ ತನ್ನೊಂದಿಗೆ ಚಾಟ್​​ ಮಾಡಿದ ವಾಟ್ಸ್​ಆ್ಯಪ್ ಸ್ಕ್ರೀನ್​​ ಶಾಟ್​​ ಫೇಸ್ಬುಕ್​​ನಲ್ಲಿ ಶೇರ್​ ಮಾಡಿರುವ ರೂಪಾ ಹೀಗೆ ಬರೆದುಕೊಂಡಿದ್ದಾರೆ. ಈ ಸಂಭಾಷಣೆ ಜೂನ್​​ 25ನೇ ತಾರೀಕು ನಡೆದದ್ದು. ಸಂಭಾಷಣೆ ಸ್ವಯಂ ವೇದ್ಯ. ನನಗೆ ಹೆಚ್ಚಾಗಿ ತಿಳಿಯದ ಈ ವ್ಯಕ್ತಿ ಹೇಳಿದ್ದು ನಿಜ ಇದ್ದರೆ, ನಾನು ಹಾಕುವ ನನ್ನ ಅಭಿಪ್ರಾಯ ಪೈಡ್​​ ಟ್ರಾಲ್​​ ಮಾಡಿಸಿದರೆ; ಅದು ಅನಾಗರಿಕ ರೀತಿಯಲ್ಲಿ ಪ್ರತಿಕ್ರಿಯಿಸಿದವರ ಹಿಂದೆ ಇರುವವರ ವಿಕೃತ ಮನೋಭಾವ ಎದ್ದು ತೋರುತ್ತದೆ ಎಂದು ಪೋಸ್ಟ್​ ಮಾಡಿದ್ದಾರೆ.

ನೀವು ರೋಹಿಣಿ ಸಿಂಧೂರಿ ವಿರುದ್ಧ ಬರೆಯಬೇಡಿ. ಒಂದು ವೇಳೆ ನೀವು ಬರೆದರೆ ನಿಮ್ಮ ಪೋಸ್ಟ್​ ಅನ್ನು ಟ್ರಾಲ್​ ಮಾಡಿಸಲಾಗುತ್ತದೆ. ಇದರ ಹಿಂದೆ ರೋಹಿಣಿ ಸಿಂಧೂರಿ ಪತ್ನಿ ಇದ್ದಾರೆ. ಇವರು ಟ್ರಾಲ್​ ಮಾಡಿಸಲೆಂದೇ ಒಂದು ಕಂಪನಿ ಏಜೆನ್ಸಿ ಹೈಯರ್​​ ಮಾಡಿಕೊಂಡಿದ್ದಾರೆ ಎಂದು ಅಪರಿಚಿತ ವ್ಯಕ್ತಿ ಮೆಸೇಜ್​​ ಮಾಡಿದ್ದಾರೆ. ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ ಎಂದಿದ್ದಾರೆ ರೂಪಾ.

ಇನ್ನು, ಪೈಡ್​​ ಟ್ರಾಲ್ಸ್ ಒಬ್ಬ ಅಧಿಕಾರಿಯ ಪರ ಕೆಲಸ ಮಾಡುತ್ತಾ, ಇನ್ನೊಬ್ಬ ಅಧಿಕಾರಿಯ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಹೊಸದ್ದು. ಇದು ದುಃಖಕರ ವಿಚಾರ. ಆದರೆ, ಅದೇ ಪೈಡ್​ ಟ್ರಾಲ್​ ಗೊತ್ತಿಲ್ಲವೇ ನಾಯಿ ಬೊಗಳಿದರೆ ಅಂಬಾರಿ ಹೋಗೋದು ನಿಲ್ಲಲ್ಲ. ಹಾಗೇ ಈ ವ್ಯಕ್ತಿ ಹೇಳಿದ ವಿಷಯ ಸತ್ಯವೇ, ತನಿಖೆ ಆಗಲಿ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆಯೂ ‘ನನ್ನ ಸಂಬಂಧಿಕರೊಬ್ಬರು ಒಂದು ಪೇಪರ್​ ಕ್ಲಿಪಿಂಗ್ ಕಳಿಸಿದರು. ಅದರಲ್ಲಿ ಈಜುಕೊಳ ನಿರ್ಮಾಣಕ್ಕೆ ಪರ್ಮಿಷನ್ ಇದೆಯಲ್ಲ’ ಎಂದು ಪ್ರಶ್ನಿಸಿದ್ದರು. ಬಹುಶಃ ಸಾಮಾನ್ಯ ಜನರಿಗೆ ಇದರಲ್ಲಿ ಇರುವ ಸಮಜಾಯಿಷಿ ಅರ್ಥ ಆಗಿಲ್ಲ. ಇದನ್ನು ಗೋಲ್ಗೋಲ್ ಆಗಿ ಹೇಳಿ ಅಧಿಕಾರಿಯು ಜನರ ದಾರಿ ತಪ್ಪಿಸುತ್ತಿರುವ ಸಾಧ್ಯತೆಯಿದೆ ಎಂದು ರೋಹಿಣಿ ಸಿಂಧೂರಿಗೆ ರೂಪಾ ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ:ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಕಿಡಿ: ‘ನೈತಿಕ ಪತನ’ ಎಂದ ಐಪಿಎಸ್​ ಅಧಿಕಾರಿ

The post ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ- ಸಿಂಧೂರಿ ವಿರುದ್ಧ ಡಿ.ರೂಪಾ ಮತ್ತೆ ಗರಂ appeared first on News First Kannada.

Source: newsfirstlive.com

Source link