ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ಮುಂದುವರೆಸಿದ್ದಾರೆ.

ನ್ಯೂಸ್​​ಫಸ್ಟ್​ನೊಂದಿಗೆ ಮಾತನಾಡಿದ ಜಮೀರ್, ನಾನು ಎಷ್ಟು ಕಳೆದುಕೊಂಡಿದ್ದೇನೆ, ಸದಾಶಿವನಗರ ಗೆಸ್ಟ್ ಹೌಸ್ ದೊಡ್ಡದಲ್ಲ ಎಂಬ ಕುಮಾರಸ್ವಾಮಿ ಮಾತಿಗೆ ತೀಕ್ಷ್ಣ ತಿರುಗೇಟು ಕೊಟ್ಟರು. ಸದಾಶಿವನಗರದ ಗೆಸ್ಟ್ ಹೌಸ್ ಕುಮಾರಸ್ವಾಮಿ ಅಪ್ಪನ ಮನೆ ಆಸ್ತಿ ಅಲ್ಲ. ದಾಖಲೆಗಳನ್ನು ತೆಗೆದು ನೋಡಿ ಗೊತ್ತಾಗುತ್ತೆ. ನಾನು ಕೇಸ್ ಹಾಕಿದರೆ ಕುಮಾರಸ್ವಾಮಿ ಮೇಲೆ ಡಕಾಯಿತಿ ಕೇಸ್ ದಾಖಲಾಗುತ್ತೆ ಎಂದರು.

ಇದನ್ನೂ ಓದಿ: ಹೆಚ್​ಡಿಕೆ 20 ವರ್ಷದಿಂದ ಇದ್ದ ಗೆಸ್ಟ್​ ಹೌಸ್ ನನ್ನದು.. ಪಲ್ಟಿ ಗಿರಾಕಿ ಅಂದಿದ್ದಕ್ಕೆ ಗಲಾಟೆ ಮಾಡಿದ್ದಾರೆ

ಕುಮಾರಸ್ವಾಮಿ ನಿನ್ನೆ ಮಾಡಿಸಿರೋದು ಡಕಾಯಿತಿ, ಇದಕ್ಕೆ ಡಕಾಯಿತಿ ಅಂತಾರೆ. ನಾನು ನನ್ನ ಆಸ್ತಿಗೆ ಬೀಗ ಹಾಕಿಕೊಂಡಿದ್ದೀನಿ, ಜೆ.ಪಿ ನಗರದ ಕುಮಾರಸ್ವಾಮಿ ಮನೆಗೋ ಅಥವಾ ಬಿಡದಿಯ ತೋಟದ ಮನೆಗೆ ಬೀಗ ಹಾಕಿಕೊಂಡಿಲ್ಲ. ಸದಾಶಿವನಗರದ ಗೆಸ್ಟ್ ಹೌಸ್ ಕುಮಾರಸ್ವಾಮಿ ಅಪ್ಪನ ಮನೆ ಆಸ್ತಿ ಅಲ್ಲ ಎಂದು ಜಮೀರ್ ತೀವ್ರ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ: ಹಳೇ ಕೆಟ್ಟ ಅಭ್ಯಾಸ ಎಲ್ಲಾ ಬಿಟ್ಟು ತೋಟದ ಮನೆ ಸೇರ್ಕೊಂಡಿದ್ದೀನಿ: ಜಮೀರ್​ಗೆ ಹೆಚ್​ಡಿಕೆ ತಿರುಗೇಟು

The post ‘ಸದಾಶಿವನಗರ ಗೆಸ್ಟ್​​​ಹೌಸ್ ಕುಮಾರಸ್ವಾಮಿ ಅಪ್ಪನ ಮನೆ ಆಸ್ತಿ ಅಲ್ಲ’ -ಜಮೀರ್ ಕಿಡಿ appeared first on News First Kannada.

Source: newsfirstlive.com

Source link