ಸದಾ ಬಂಗಾರ ಧರಿಸುವುದು ಈ ಐದು ರಾಶಿಯವರಿಗೆ ಅದೃಷ್ಟವಂತೆ | Get luck who are wear the gold ring etc spiritual news


ಸದಾ ಬಂಗಾರ ಧರಿಸುವುದು ಈ ಐದು ರಾಶಿಯವರಿಗೆ ಅದೃಷ್ಟವಂತೆ

ಸಾಂದರ್ಭಿಕ ಚಿತ್ರ

ಹಿಂದೂ ಧರ್ಮದಲ್ಲಿ ರಾಶಿ ಭವಿಷ್ಯಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ಭವಿಷ್ಯ ಹೇಗಿರುತ್ತದೆ ಅಂತ ತಿಳಿಯಲು ಸದಾ ಕಾತುರರಾಗಿರುತ್ತಾರೆ. ಒಬ್ಬ ವ್ಯಕ್ತಿ ಏನು ಧರಿಸಿದರೆ ಶುಭ, ಏನು ಧರಿಸಿದರೆ ಅಶುಭ ಎಂದು ಜ್ಯೋತಿಷಿಗಳು ತಿಳಿಸುತ್ತಾರೆ. ಅದೃಷ್ಟ (Luck) ಪಡೆಯಬೇಕಾದರೆ ಏನು ಮಾಡಬೇಕು ಅಂತನೂ ಅವರು ಸೂಚಿಸುತ್ತಾರೆ. ಅವರವರ ರಾಶಿಗೆ ಅನುಗುಣವಾಗಿ (Zodiac sign) ಯಾರು ಏನು ಧರಿಸಿದರೆ ಅದೃಷ್ಟ ಎನ್ನುವುದನ್ನು ಹೇಳುತ್ತಾರೆ. ಕೆಲವು ರಾಶಿಯವರು ಚಿನ್ನ ಧರಿಸಿದರೆ ಅದೃಷ್ಟ ಸದಾ ಅವರ ಜೊತೆಗಿರುತ್ತದೆ ಎಂದು ವೈದಿಕ ಜ್ಯೋತಿಷಿಗಳಾದ ಡಾ.ಬಸವರಾಜ್ ಗುರೂಜಿ ಹೇಳಿದ್ದಾರೆ. ಹಾಗಿದ್ದರೆ ಯಾವ ರಾಶಿಯವರುಗೆ ಚಿನ್ನ ಅದೃಷ್ಟ ಇದೆ ಅಂತ ಇಲ್ಲಿ ತಿಳಿಸಲಾಗಿದೆ. ಗಮನಿಸಿ.

* ಮೇಷ:
ಮೇಷ ರಾಶಿಯವರಿಗೆ (Aries) ಚಿನ್ನವನ್ನು ಧರಿಸುವುದು ಶುಭ. ವಿಶೇಷವಾಗಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಅದೃಷ್ಟ ಹೆಚ್ಚಾಗುತ್ತದೆ. ಸಂಬಂಧಗಳು ಬಲವಾಗಿರುತ್ತವೆ. ಸಾಲವಿದ್ದರೂ ಕೂಡಾ ಕೆಲವೇ ದಿನಗಳಲ್ಲಿ ಸಾಲದ ಸಮಸ್ಯೆ ಪರಿಹಾರವಾಗುತ್ತದೆ.

* ಸಿಂಹ:
ಸಿಂಹ ರಾಶಿಯವರಿಗೆ (Leo) ಚಿನ್ನವು ಅದೃಷ್ಟ ತರುತ್ತದೆ. ಈ ರಾಶಿಯವರು ಚಿನ್ನದ ಆಭರಣಗಳನ್ನು ಅದರಲ್ಲೂ ವಿಶೇಷವಾಗಿ ಚಿನ್ನದ ಉಂಗುರಗಳನ್ನು ಧರಿಸಬೇಕು. ಇದು ಅವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ. ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.

* ಕನ್ಯಾ ರಾಶಿ:
ಬುಧ ಅಧಿಪತಿ. ಚಿನ್ನದ ಉಂಗುರವಲ್ಲದೆ ಕನ್ಯಾ ರಾಶಿಯವರಿಗೆ (Virgo) ಚಿನ್ನದ ಸರ ಅಥವಾ ಬಳೆ ಧರಿಸುವುದು ತುಂಬಾ ಒಳ್ಳೆಯದು. ಇದರೊಂದಿಗೆ, ಜೀವನದ ಸಮಸ್ಯೆಗಳು ಒಂದೊಂದಾಗಿ ಕೊನೆಗೊಳ್ಳುತ್ತವೆ. ಮತ್ತು ಪ್ರತಿ ಕೆಲಸದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಜೀವನದಲ್ಲಿ ಸಂಪತ್ತು ಮತ್ತು ಐಶ್ವರ್ಯ ಹೆಚ್ಚಾಗುತ್ತದೆ.

* ಧನು ರಾಶಿ:
ಇವರ ರಾಶ್ಯಾಧಿಪತಿ ಗುರು. ಇವರ ಧಾತು ಬಂಗಾರ ಚಿನ್ನವನ್ನು ಧರಿಸುವುದು ತುಂಬಾ ಮಂಗಳಕರ. ಇದು ಅವರಿಗೆ ಎಲ್ಲದರಲ್ಲೂ ಯಶಸ್ಸನ್ನು ನೀಡುತ್ತದೆ. ಗುರು ಗ್ರಹವು (Jupiter) ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದರಿಂದಾಗಿ ಅವರು ಸಾಕಷ್ಟು ಹೆಸರು-ಪ್ರಸಿದ್ಧಿಯನ್ನು ಗಳಿಸುತ್ತಾರೆ. ಅಪಾರ ಸಂಪತ್ತಿನ ಒಡೆಯನಾಗುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನಮಾನ ಮತ್ತು ಸಂತೋಷದ ಜೀವನವನ್ನು ಪಡೆಯುತ್ತಾರೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಸದಾ ಸುಖಿಗಳಾಗಿರುತ್ತಾರೆ.

* ಮೀನ ರಾಶಿ:
ಮೀನರಾಶಿಯವರು, ಸಾಧ್ಯವಾದಷ್ಟರ ಮಟ್ಟಿಗೆ ಚಿನ್ನ ಧಾರಣೆ ಮಾಡಿರುತ್ತಾರೆ. ಶುಭ ನಿಮ್ಮ ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳೂ ಪೂರ್ಣಗೊಳ್ಳುತ್ತವೆ. ಕೋಪ ಕಡಿಮೆಯಾಗುತ್ತದೆ. ಆಲೋಚನಾ ಲಹರಿ ಉತ್ತಮವಾಗಿರುತ್ತದೆ.

ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
ವಾಸ್ತುಶಾಸ್ತ್ರಜ್ಞ
9972848937

TV9 Kannada


Leave a Reply

Your email address will not be published. Required fields are marked *