ಸದಾ ಬಡವರಿಗಾಗಿ ಮಿಡಿಯುವ ಹೃದಯ ಹೊಂದಿರುವ ಸುಧಾಮೂರ್ತಿಯವರಿಂದ ಹೃದ್ರೋಗಿಗಳಿಗೆ ಮಹೋನ್ನತ ಕೊಡುಗೆ | Additional heart care centre built by philanthropist Sudha Murthy at Jayadeva premises is almost ready


ಭಾರತದ ಲಿವಿಂಗ್ ಲೆಜೆಂಡ್ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮವನ್ನು ನಿಯಮಿತವಾಗಿ ವೀಕ್ಷಿಸುವವರಲ್ಲಿ ನೀವೊಬ್ಬರಾಗಿದ್ದರೆ, ಕೆಲ ಸಮಯದ ಹಿಂದೆ, ಸೆಲೆಬ್ರಿಟಿ ಕಾಂಟೆಸ್ಟಂಟ್ ಆಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಆಗಮಿಸಿದ್ದು ನಿಮಗೆ ನೆನಪಿರಬಹುದು. ಅಂದಿನ ಕಾರ್ಯಕ್ರಮದಲ್ಲಿ ಒಂದು ವಿಶಿಷ್ಟ ಸಂಗತಿ ಸಂಭವಿಸಿತು. ಕೆಬಿಸಿಗೆ ಬರುವ ಕಾಂಟೆಸ್ಟಂಟ್ ಗಳು ಸಾಮಾನ್ಯವಾಗಿ ಅಮಿತಾಬ್ ಅವರನ್ನು ಕಂಡಾಕ್ಷಣ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಅವರನ್ನು ಅರ್ಧಕ್ಕೆ ತಡೆದು, ‘ದಯವಿಟ್ಟು ಹಾಗೆ ಮಾಡಬೇಡಿ,’ ಅಂತ ವಿನಂತಿಸಿಕೊಳ್ಳುತ್ತಾರೆ. ಆದರೆ, ವಯಸ್ಸಿನಲ್ಲಿ ತಮಗಿಂತ ಕಿರಿಯರಾದ ಸುಧಾಮೂರ್ತಿ ಅವರು ಬಂದಾಗ ಖುದ್ದು ಅಮಿತಾಭ್ ಕಾಲುಮುಟ್ಟಿ ನಮಸ್ಕರಿಸಿದರು!

ಸುಧಾಮೂರ್ತಿಯವರು ಜನರಿಗಾಗಿ ಏನೆಲ್ಲ ಮಾಡಿದ್ದಾರೆ, ಮಾಡುತ್ತಿದ್ದಾರೆ ಅನ್ನೋದು ಬಿಗ್ ಬಿ ಗೆ ಚೆನ್ನಾಗಿ ಗೊತ್ತಿದೆ. ಸುಧಾಮೂರ್ತಿಯವರ ಮೇರು ವ್ಯಕ್ತಿತಕ್ಕೆ ಅಮಿತಾಭ್ ಅಂದು ಗೌರವ ಸಲ್ಲಿಸಿದರು. ಸಮಾಜ ಕಲ್ಯಾಣಕ್ಕಾಗಿ, ಸಾರ್ವಜನಿಕರ ಬದುಕು ಹಸನಾಗಿಸಲು ಸುಧಾಮೂರ್ತಿಯವರು ಮಾಡುತ್ತಿರುವ ಕೆಲಸಗಳು ಒಂದೆರಡಲ್ಲ. ನಿಸ್ವಾರ್ಥ ಮನೋಭಾವದೊಂದಿಗೆ ಅನೇಕ ವಿಧಗಳಲ್ಲಿ ಅವರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅದಕ್ಕೆ ಮತ್ತೊಂದು ಸಾಕ್ಷಿಯೆಂದರೆ ಜಯದೇವ ಹೃದ್ರೋಗ ಸಂಸ್ಥೆ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಸುಸಜ್ಜಿತ 350 ಬೆಡ್ ಸಾಮರ್ಥ್ಯದ ಈ ಹೆಚ್ಚುವರಿ ಹೃದ್ರೋಗ ಘಟಕ.

ಹಿಂದೊಮ್ಮೆ ಸುಧಾಮೂರ್ತಿ ಅವರು ತಮ್ಮ ಪತಿ ಹಾಗೂ ಇನ್ಫೋಸಿಸ್ ಸಂಸ್ಥೆ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಬೇರೆ ಬೇರೆ ಊರುಗಳಿಂದ ಬಂದಿದ್ದ ಅನೇಕ ಬಡ ಜನರಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವುದನ್ನು ಗಮನಿಸಿದ್ದರು. ಆಗಲೇ ಅವರು ಒಂದು ಹೆಚ್ಚುವರಿ ಘಟಕ ಸ್ಥಾಪಿಸಲು ನಿರ್ಧರಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಅದರ ಫಲವೇ ಈ ಆಸ್ಪತ್ರೆ.

ಎಮರ್ಜೆನ್ಸಿ ಆಬ್ಸರ್ವೇಷನ್ ಯುನಿಟ್, ಓಪಿಡಿ, ಲ್ಯಾಬ್ ಸೇರಿದಂತೆ ಅನೇಕ ಸೌಲಭ್ಯಗಳು ಕೇಂದ್ರದಲ್ಲಿವೆ. ಜಯದೇವ ಹೃದ್ರೋಗ ಸಂಸ್ಥೆಯ ಚೀಫ್ ಡಾ ಸಿ ಎನ್ ಮಂಜುನಾಥ ಅವರು ಸೋಮವಾರ ಈ ಘಟಕವನ್ನು ಮಾಧ್ಯಮದವರಿಗೆ ತೋರಿಸಿದರು.

ಇದನ್ನೂ ಓದಿ:    ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್​ಗೆ ದೃಷ್ಟಿ ತೆಗೆದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಜೋಗತಿ ಮಂಜಮ್ಮ; ವಿಡಿಯೋ ಫುಲ್ ವೈರಲ್

TV9 Kannada


Leave a Reply

Your email address will not be published. Required fields are marked *