– ಗಣೇಶ್ ಶಿಪ್ಪಿಂಗ್ ಮೂಲಕ ಉಚಿತವಾಗಿ ಆಕ್ಸಿಜನ್ ಕಂಟೈನರ್ ಸಾಗಾಟ

ಮಂಗಳೂರು: ಕಿಲ್ಲರ್ ಕೊರೊನಾ ಹಾವಳಿಯಿಂದ ಇಡೀ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದೆ. ಎಲ್ಲೆಡೆ ಅಸಹಾಯಕತೆ ತಾಂಡವವಾಡುತ್ತಿದೆ. ಈ ನಡುವೆ ಸರ್ಕಾರಗಳು ಜನರ ಪ್ರಾಣರಕ್ಷಣೆಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅನೇಕ ಉದ್ಯಮಿಗಳು, ಜನಪ್ರತಿನಿಧಿಗಳು ಸರ್ಕಾರಗಳ ಪ್ರಯತ್ನಕ್ಕೆ ಸದ್ದಿಲ್ಲದೆ ವ್ಯಾಪಕವಾಗಿ ನೆರವಾಗುವ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಪೈಕಿ ಒಬ್ಬರು ದ.ಕ. ಜಿಲ್ಲೆಯ ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಪ್ರಯತ್ನದಿಂದ ವಿದೇಶದಲ್ಲಿರುವ ಭಾರತೀಯರು ಮತ್ತು ವಿದೇಶಿ ಸರ್ಕಾರಗಳು ವಿಶೇಷವಾಗಿ ಗಲ್ಫ್ ದೇಶಗಳು ದಾನದ ರೂಪದಲ್ಲಿ ಟ್ಯಾಂಕರ್ ಮತ್ತು ಸಿಲಿಂಡರ್ ಗಳಲ್ಲಿ ಆಕ್ಸಿಜನ್ ಪೂರೈಕೆ ಮಾಡುತ್ತಾ ಬರುತ್ತಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಸುಮಾರು 5 ಇಂಡಿಯನ್ ನೇವಿ ಶಿಪ್ ಗಳಲ್ಲಿ ನಿರಂತರವಾಗಿ ಆಮ್ಲಜನಕ ಕಂಟೈನರ್ಸ್ ಬರುತ್ತಿವೆ. ಇವುಗಳನ್ನು ಮಂಗಳೂರು ಮತ್ತು ನವಮಂಗಳೂರು ಬಂದರಿನ ಸಹಕಾರದೊಂದಿಗೆ ಇಂಡಿಯನ್ ನೇವಿಗೆ ಸಂಬಂಧಪಟ್ಟ ಹಡಗುಗಳಿಂದ ಧರ್ಮಾರ್ಥವಾಗಿ ಅನ್ ಲೋಡ್ ಮಾಡಿ ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸುವ ಜವಾಬ್ದಾರಿಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐ.ಒ.ಸಿ) ಪರವಾಗಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಂಬಂಧಪಟ್ಟ ರಾಜ್ಯ ಮತ್ತು ಜಿಲ್ಲೆಗಳಿಗೆ ಅಂದರೆ ಎಲ್ಲೆಲ್ಲಿ ಆಮ್ಲಜನಕದ ಕೊರತೆ ಇದೆಯೋ ಅಲ್ಲಲ್ಲಿಗೆ ಕಳುಹಿಸುವ ಜವಾಬ್ದಾರಿಯನ್ನು ಮಾಜಿ ಸಚಿವ ನಾಗರಾಜ ಶೆಟ್ಟಿಯವರು ಮಾಲಕತ್ವದ ಶ್ರೀ ಗಣೇಶ್ ಶಿಪ್ಪಿಂಗ್ ಏಜೆನ್ಸಿಯು ವಹಿಸಿಕೊಂಡಿದೆ. ಈ ಮೂಲಕ ಧರ್ಮಾರ್ಥವಾಗಿ ಕಂಟೈನರ್ ಗಳನ್ನು ಸಾಗಾಟ ಮಾಡಲಾಗುತ್ತಿದೆ.

ಈ ಮೂಲಕ ಒಬ್ಬ ಮಾಜಿ ಜನಪ್ರತಿನಿಧಿಯಾಗಿ ಸೇವಾರ್ಥವಾಗಿ ಆಕ್ಸಿಜನ್ ತಲುಪಿಸಿ ಅನೇಕ ಜನರ ಪ್ರಾಣವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ತಿಂಗಳಿಂದ ಈ ಎಲ್ಲಾ ಕೆಲಸವನ್ನು ಯಾವುದೇ ಪ್ರಚಾರ ಬಯಸದೆ ಮಾಡುವ ಮೂಲಕ ಬಿ. ನಾಗರಾಜ್ ಶೆಟ್ಟಿ ಯವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

The post ಸದ್ದಿಲ್ಲದೆ ಸರ್ಕಾರಕ್ಕೆ ಸಾಥ್ ನೀಡುತ್ತಿರುವ ಮಾಜಿ ಸಚಿವ ನಾಗರಾಜ್ ಶೆಟ್ಟಿ appeared first on Public TV.

Source: publictv.in

Source link