ಸದ್ಯದಲ್ಲೇ ತೆರೆಗೆ ಪತ್ರಕರ್ತನ ಗೋರಿ; ನೋವುಂಡ ನಂಜುಂಡನಂತೆ ಬೆಂಬಲ ನೀಡಿದ ಶಿವಣ್ಣ


ಶಿವಣ್ಣ ಸಿನಿಮಾ ರಂಗದ ಪಾಲಿಗೆ ನಂಜನ್ನ ಕುಡಿದ ನಂಜುಡೇಶ್ವರ ಇದ್ದಂಗೆ.. ತನ್ನೊಡಲಲ್ಲಿ ಎಷ್ಟೇ ನೋವಿದ್ದರು ಹೊರ ಹಾಕದೆ ಬೇಡಿ ಬಂದ ಬಂಧುಗಳಿಗೆ ತನ್ನ ಕೈಲಾದ ಸೇವೆಯನ್ನ ಮಾಡ್ತಾ ಇರ್ತಾರೆ.. ತನ್ನ ಮುದ್ದಿನ ತಮ್ಮ ಅಪ್ಪು ಅಗಲಿಕೆಯ ನೋವಿನಲ್ಲೂ ಶಿವಣ್ಣ ಒಂದು ಮನಮೆಚ್ಚುವ ಕೆಲಸವನ್ನ ಮಾಡಿದ್ದಾರೆ.. ಅದೇನು?
ನಿಮ್ಮ ಸಂತೋಷ ನೋಡಿ ಸಂತೋಷ ಪಡುವ ಅಪ್ಪುಗಾಗಿ ಈ ಹಾಡು ಎಂದು ಶಿವಣ್ಣ ಮನಸಾರೆ ಅಪ್ಪು ಹಾಡುತ್ತಿದ್ದ ನೆಚ್ಚಿನ ಗೀತೆಯೊಂದನ್ನ ಹೇಳಿ ಎಲ್ಲರ ಕಂಗಳಲ್ಲಿ ಅಪ್ಪು ನೆನಪಿನ ಕಣ್ಣೀರಧಾರೆ ಬರುವಂತೆ ಮಾಡಿದ್ರು..ಹಾಗೆಯೇ ಹೊಸಬರ ಪ್ರಯತ್ನಕ್ಕೆ ಪ್ರೋತ್ಸಾಹ ಮಾಡಿದ್ದಾರೆ..

ಗೋರಿ ಸಿನಿಮಾದ ಹಾಡು ಬಿಡುಗಡೆ ಮಾಡಿ ಮನಮೆಚ್ಚಿನ ಹುಡ್ಗ ಶಿವಣ್ಣ ಮನಸಾರೆ ಮಾತನಾಡಿದ್ದ ಮಾತುಗಳು.. ಗೋರಿ.. ಸಿನಿಮಾ ಪತ್ರಕರ್ತ ಕಿರಣ್ ಎಸ್.ಕೆ ಹಾವೇರಿ ಹೀರೋ ಆಗಿ ನಟಿಸಿರುವ ಸಿನಿಮಾ ಇದು..

ಬೇರೆನೇ ಐತಿ ಹಾಡಿನ ಮೂಲಕ ಸದ್ದು ಮಾಡಿದ್ದ ಗೋರಿ ಸಿನಿಮಾ ಈಗ ಅಪ್ಪು ಇಲ್ಲದೆ ಇರೋ ಈ ಫೀಲಿಂಗ್ ಟೈಮ್​​ನಲ್ಲಿ ಫೀಲಿಂಗ್ ಸಾಂಗ್ ಹೊರ ಬಿಟ್ಟು ಸದ್ದು ಮಾಡುತ್ತಿದೆ.. ಶಿವಣ್ಣ ಬಿಡುಗಡೆ ಮಾಡಿರುವ ಈ ಹಾಡನ್ನ ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದು ಪ್ರೇಮ ಕವಿ ಕೆ.ಕಲ್ಯಾಣ ಸಾಹಿತ್ಯದಲ್ಲಿ ಸರಿಗಮಪ ಖ್ಯಾತಿಯ ಮೆಹಬೂಬ್ ಸಾಹೇಬ್ ಗಾಯನದಲ್ಲಿ ಮೂಡಿಬಂದಿದೆ..

ಗೋಪಾಲಕೃಷ್ಣ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗೋರಿ ಸಿನಿಮಾ ಈ ತಿಂಗಳ 26ನೇ ತಾರೀಖ್ ಪ್ರೇಕ್ಷಕರ ಮುಂದೆ ಬರುತ್ತಿದೆ.. ಸಿನಿಮಾ ಕನಸು ಹೊತ್ತು ಉತ್ತರ ಕರ್ನಾಟಕ ಸೀಮೆಯಿಂದ ಬಂದ ಸಿನಿಮಾ ಪತ್ರಕರ್ತ ಕಿರಣ್ ಎಸ್​.ಕೆ ಹಾವೇರಿ.. ಹೊಸಬರ ಒಳ್ಳೆಯ ಪ್ರಯತ್ನಕ್ಕೆ ಸದಾ ನಿಮ್ಮ ಭವ್ಯ ಬೆಂಬಲ ಇದ್ದೇ ಇರುತ್ತೆ.. ಈ ಹೊಸ ಪ್ರತಿಭೆಗಳ ಗೋರಿ ಚಿತ್ರಕ್ಕೆ ಚಿತ್ರಪ್ರೇಮಿಗಳ ಬೆಂಬಲಾರ್ಶಿವಾದವಿರ್ಲಿ.

The post ಸದ್ಯದಲ್ಲೇ ತೆರೆಗೆ ಪತ್ರಕರ್ತನ ಗೋರಿ; ನೋವುಂಡ ನಂಜುಂಡನಂತೆ ಬೆಂಬಲ ನೀಡಿದ ಶಿವಣ್ಣ appeared first on News First Kannada.

News First Live Kannada


Leave a Reply

Your email address will not be published. Required fields are marked *