ಮದುವೆಯಾದ ಮೇಲೆ ಲಕ್ ಕುದುರುತ್ತೆ ಎಂಬ ಗಾದೆ ಇದೆ. ಈ ಲಕ್ ಇತ್ತೀಚೆಗೆ ನಟ ಚಂದನ್ ಅವರಿಗೆ ಕುಲಾಯಿಸಿದೆ. ಲಾಕ್ಡೌನ್ ಸಂದರ್ಭದಲ್ಲಿ ಮದುವೆಯಾಗಿ ಲಾಕ್ ಆಗಿದ್ದ ಚಂದನ್ ಈಗ ಎಲ್ಲರಿಗೂ ಸಿಹಿಸುದ್ದಿ ಕೊಟ್ಟಿದ್ದಾರೆ. ಗುಂಡ್ ನ್ಯೂಸ್ ಅಂದರೆ ತಂದೆ ಆಗುತ್ತಿದ್ದಾರೆ ಎಂದರ್ಥವಲ್ಲ, ಬದಲಿಗೆ ಮತ್ತೊಂದು ಸೀರಿಯಲ್ ನಾಯಕರಾಗಿ ತೆರೆ ಮೇಲೆ ಬರುತ್ತಿದ್ದಾರೆ.

ಮರಳಿ ಮನಸ್ಸಾಗಿದೆ
ಹೌದು.. ಮರಳಿ ಮನಸ್ಸಾಗಿದೆ. ಇದೊಂದು ಹೊಚ್ಚ ಹೊಸ ಸೀರಿಯಲ್. ಈ ಸೀರಿಯಲ್​​ನಲ್ಲಿ ನಮ್ಮ ಚಂದನ್ ಕುಮಾರ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಕ್ಕು ವಿತ್ ಕಿರಿಕ್ಕು’; ಕನ್ನಡಕ್ಕೊಂದು ವಿಭಿನ್ನ ರಿಯಾಲಿಟಿ ಶೋ ಮೂಲಕ ರಂಜಿಸುತ್ತಿರೋ ಚಂದನ್ ಹೊಸ ವೆಂಚರ್ ಈ ಮರಳಿ ಮನಸ್ಸಾಗಿದೆ.

ಸರ್ವಮಂಗಳ ಮಾಂಗಲ್ಯೇ, ಸಾವಿತ್ರಮ್ಮಗಾರಿ ಅಬ್ಬಾಯಿ ಸೀರಿಯನ್ ನಂತರ ಮಾಡುತ್ತಿರುವ ಹೊಸ ಧಾರವಾಹಿ ಮರಳಿ ಮನಸ್ಸಾಗಿದೆ. ಮಾತು ಕೊಟ್ಟ ಮನಸುಗಳ ನಡುವೆ ಪ್ರೀತಿಯ ಸೇತುವೆ ಎಂಬುದು ಈ ಸೀರಿಯಲ್ ಟ್ಯಾಗ್ಲೈನ್.

ವರ್ಕೌಟ್ ಮೇಲೆ ವರ್ಕೌಟ್​
ಮರಳಿ ಮನಸ್ಸಾಗಿದೆ ಸೀರಿಯಲ್ ಪ್ರೋಮೋ ಶೂಟ್​ಗಾಗಿ ಚಂದನ್ ಭಾರೀ ವರ್ಕೌಟ್ ಮಾಡಿದ್ದರಂತೆ. ಪ್ರತೀದಿನ ನೂರು ಕಿಲೋ ಮೀಟರ್ ಮ್ಯಾರಥನ್ ಮಾಡುತ್ತಿದ್ದರಂತೆ. ಒಂದು ವಾರ ಪೂರ್ತಿ ಡಯಟ್ ಮಾಡಿದ ಪರಿಣಾಮ 5 ಕೆ.ಜಿ ತೂಕ ಇಳಿಸಿಕೊಂಡು ಈ ಪ್ರೋಮೋ ಶೂಟ್ ಮಾಡಿದ್ದಾರೆ.

100 ಕಿಲೋ ಮೀಟರ್ ಓಡೋದು ಥ್ರೆಟ್ ಮಿಲ್ ಮಾಡೋದು ಸುಲಭವಾಗಿರಲಿಲ್ಲ. ಆದರೆ, ನಿಮ್ಮನ್ನು ರಂಜಿಸಲು ನಾನು ಹೀಗೆ ಮಾಡಿದೆ ಎಂದು ತಮ್ಮ ಅಭಿಮಾನಿಗಳಿಗಾಗಿ ಚಂದನ್ ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸದ್ಯ ಪ್ರೋಮೋ ಶೂಟ್ ಮುಗಿಸಿರೋ ತಂಡ ಬೆಂಗಳೂರಿನಲ್ಲಿ ತನ್ನ ಸೀರಿಯಲ್ ಎಪಿಸೋಡ್ ಚಿತ್ರೀಕರಣ ಮುಂದುವರಿಸಿದೆ. ದಿವ್ಯಾ ಮತ್ತು ಶಿಲ್ಪಾ ಈ ಸೀರಿಯಲ್​​ನ ಫೀಮೇಲ್ ಲೀಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹಿಂದಿಯ ಘುಮ್ ಹೈ ಕಿಸಿಕೇ ಪ್ಯಾರ್ ಮೇ ರೀಮೇಕ್.

The post ಸದ್ಯದಲ್ಲೇ ತೆರೆ ಮೇಲೆ ಚಂದನ್ ಹೊಸ ಸೀರಿಯಲ್ –ಪ್ರೋಮೋ ಶೂಟ್​​​ಗೆ ನೂರು ಕಿ.ಮೀ ಓಡಿದ ನಟ appeared first on News First Kannada.

Source: newsfirstlive.com

Source link