– ಉಕ್ಕಿ ಹರಿಯುತ್ತಿರುವ ಭೀಮಾ, ಕಂಗಳೇಶ್ವರ ದೇವಸ್ಥಾನ ಜಲಾವೃತ

ಯಾದಗಿರಿ: ಮಹಾರಾಷ್ಟ್ರದ ಮಹಾಮಳೆಗೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿಗಳು ಉಕ್ಕಿ ಹರಿಯುತ್ತಿದ್ದು, ಭೀಮಾ ನದಿಗೆ ಸಹ ಹೆಚ್ಚಿನ ನೀರು ಹರಿದು ಬರುತ್ತಿದೆ.

ಸನ್ನತ್ತಿ ಬ್ಯಾರೇಜ್ ನಿಂದ ಭೀಮಾ ನದಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಹರಿ ಬಿಡಲಾಗಿದ್ದು, ಜಿಲ್ಲೆಯ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಯಾದಗಿರಿ ನಗರದ ಹೊರ ಭಾಗದ ಭೀಮಾ ನದಿಯು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ನದಿ ಪಾತ್ರದಲ್ಲಿರುವ ವಿರಾಂಜನೇಯ ಹಾಗೂ ಕಂಗಳೇಶ್ವರ ದೇಗುಲಗಳು ಜಲಾವೃತಗೊಂಡಿವೆ. ಪ್ರವಾಹವನ್ನು ಲೆಕ್ಕಿಸದೆ ಜನರು ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ನದಿ ಬಳಿ ತೆರಳುತ್ತಿದ್ದಾರೆ.

The post ಸನ್ನತ್ತಿ ಬ್ಯಾರೇಜ್ ನಿಂದ ಭೀಮಾನದಿಗೆ 15 ಸಾವಿರ ಕ್ಯೂಸೆಕ್ಸ್ ನೀರು appeared first on Public TV.

Source: publictv.in

Source link