ಮುಂಬೈ: ಬಟ್ಟೆ ಇಲ್ಲದೆ ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರ 2021ರ ಕ್ಯಾಲೆಂಡರ್ ಶೂಟ್‍ಗೆ ಸನ್ನಿ ಪೋಸ್ ಕೊಟ್ಟಿದ್ದಾರೆ. ಕಾಲಲ್ಲಿ ಹೈ ಹೀಲ್ಸ್, ದೇಹ ಮುಚ್ಚಿಕೊಳ್ಳೋಕೆ ಒಂದು ಹ್ಯಾಟ್ ಬಿಟ್ಟರೆ ಬೇರೇ ಯಾವುದೇ ಉಡುಗೆ ಅವರ ದೇಹದ ಮೇಲಿಲ್ಲ. ಈ ಫೋಟೋವನ್ನು ಸನ್ನಿ ಲಿಯೋನ್ ಇನ್‍ಸ್ಟಾಗ್ರಾಮ್‍ನಲ್ಲಿ ಸಮ್ಮರ್ ಬಂತು ಎಂದು ಕ್ಯಾಪ್ಶನ್ ಕೊಟ್ಟು ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ

 

View this post on Instagram

 

A post shared by Sunny Leone (@sunnyleone)

ಈ ಮೊದಲು ಡಬ್ಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್‍ಗೆ ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಮತ್ತು ವಿಕ್ಕಿ ಕೌಶಲ್ 2021ರ  ಕ್ಯಾಲೆಂಡರ್ ಭಾಗವಾಗಿದ್ದರು. ಈಗ ಸನ್ನಿ ಲಿಯೋನ್ ಭಾನುವಾರ ಈ ಕ್ಲಬ್ ಸೇರಿಕೊಂಡಿದ್ದು, ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯವಾಗಿದೆ – ಅಪೋಲೋ ವೈದ್ಯರು

 

View this post on Instagram

 

A post shared by Dabboo Ratnani (@dabbooratnani)

ಡಬ್ಬೂ ಕೂಡ ಈ ಫೋಟೋ ಹಂಚಿಕೊಂಡಿದ್ದಾರೆ. ಸೂರ್ಯನ ಬೆಳಕಿನ ಜತೆ ಸನ್ನಿ ಶೂಟ್ ಎಂದು ಡಬ್ಬು ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಡಬ್ಬೂ ರತ್ನಾನಿ ಕ್ಯಾಲೆಂಡರ್‌ನಲ್ಲಿ ಸನ್ನಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿಯೂ ಸನ್ನಿ ಡಬ್ಬು ರತ್ನಾನಿ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಫೋಟೋ ಕೂಡ ಸಾಕಷ್ಟು ವೈರಲ್ ಆಗಿತ್ತು.

ಸೆಲೆಬ್ರಿಟಿಗಳು ಖ್ಯಾತಿ ಹೆಚ್ಚಿಸಿಕೊಳ್ಳೋಕೆ ಹಾಗೂ ಎಲ್ಲರ ಗಮನ ತಮ್ಮೆಡೆ ಸೆಳೆಯೋಕೆ ನಾನಾ ರೀತಿಯ ಫೋಟೋಶೂಟ್ ಮಾಡಿಸುತ್ತಾರೆ. ಕೆಲವೊಂದು ಫೋಟೋಗಳು ಟ್ರೋಲ್ ಆದರೆ, ಇನ್ನೂ ಕೆಲವು ಫೋಟೋಗಳು ಮೆಚ್ಚುಗೆ ಗಳಿಸಿಕೊಳ್ಳುತ್ತವೆ. ಈಗ ನಟಿ ಸನ್ನಿ ಲಿಯೋನ್ ಹೊಸ ಫೋಟೋಶೂಟ್ ಒಂದನ್ನು ಮಾಡಿಸಿದ್ದು ಸಾಕಷ್ಟು ವೈರಲ್ ಆಗಿದೆ.

The post ಸನ್ನಿ ಲಿಯೋನ್ ಸಮ್ಮರ್ ಫೋಟೋ- ನಿದ್ದೆಗೆಡಿಸಿಕೊಂಡ ತುಂಡ್ ಹೈಕ್ಳು appeared first on Public TV.

Source: publictv.in

Source link