ಸಫಾರಿ ವೇಳೆ ಆನೆ ನರಳಾಟ ಕಂಡು ಮರುಗಿದ ರಾಹುಲ್​ – ಸಿಎಂ ಬೊಮ್ಮಾಯಿಗೆ ಪತ್ರ | Congress leader Rahul Gandhi written a letter to CM Basavaraj Bommai to save baby elephant


ಮರಿ ಆನೆ ಕಾಪಾಡಿ ಅಂತಾ ರಾಹುಲ್​ ಗಾಂಧಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಸಫಾರಿ ವೇಳೆ ಆನೆ ನರಳಾಟ ಕಂಡು ಮರುಗಿದ ರಾಹುಲ್​ - ಸಿಎಂ ಬೊಮ್ಮಾಯಿಗೆ ಪತ್ರ

ರಾಹುಲ್ ಗಾಂಧಿ ಸಫಾರಿ

ಬೆಂಗಳೂರು: ಕರ್ನಾಟಕದಲ್ಲಿ ಭಾರತ ಜೋಡೊ (Bharat Jodo Yatra) ಯಾತ್ರೆ ಪ್ರಾರಂಭವಾಗಿ 5 ದಿನಗಳು ಕಳೆದಿವೆ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (Rahul Gandhi) ನೇತೃತ್ವದ ಭಾರತ ಜೋಡೊ ಯಾತ್ರೆಗೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಕೂಡ ಸಾಥ್​ ನೀಡಿದ್ದಾರೆ. ಭಾರತ ಜೋಡೊ ಯಾತ್ರೆಯನ್ನು 2 ದಿನಗಳ ಕಾಲ ಮೊಟಕುಗೊಳಿಸಿದ್ದು, ರಾಹುಲ್​ ಮತ್ತು ಸೋನಿಯಾ ಗಾಂಧಿ ನಿನ್ನೆ ಮತ್ತು ಇವತ್ತು ವಿಶ್ರಾಂತಿಯಲ್ಲಿದ್ದಾರೆ. ನಿನ್ನೆ ವಿಶ್ರಾಂತಿ ವೇಳೆ ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ನಾಗರಹೊಳೆ ಹುಲಿ ಸಂರಕ್ಷಿತ ಅಭಯಾರಣ್ಯ ಸಫಾರಿ ಮಾಡಿದ್ದಾರೆ.

ಈ ವೇಳೆ ಮರಿ ಆನೆ ಗಾಯವಾಗಿದ್ದನ್ನು ಕಂಡಿದ್ದಾರೆ. ಈ ಸಂಬಂಧ ರಾಹುಲ್​ ಗಾಂಧಿ ಮರಿ ಆನೆ ಕಾಪಾಡಿ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. “ನಾಗರಹೊಳೆ ಹುಲಿ ಸಂರಕ್ಷಿತ ಕಾಡಿನಲ್ಲಿ ಆನೆ ನೋಡಿದೆ. ತಾಯಿ ಆನೆ ಜೊತೆಗೆ ಗಾಯಗೊಂಡ ಮರಿ ಆನೆಯ ನರಳಾಟವನ್ನು ಕಂಡೆ. ನಾನು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿ ವೇಳೆ ಸೊಂಡಿಲು ಹಾಗೂ ಬಾಲದ ಭಾಗದ ಗಾಯದಿಂದ ಮರಿ ಆನೆ ನರಳಾಡುತ್ತಿತ್ತು. ಕಾಡಿನಲ್ಲಿ ನರಳಿತ್ತಿರುವ ಮರಿ ಆನೆಗೆ ತುರ್ತಾಗಿ ಚಿಕಿತ್ಸೆ ಅಗತ್ಯ ಇದೆ. ನೀವು ಸಹಾನುಭೂತಿ ಮನೋಭಾವನೆಯಿಂದ ಮರಿ ಆನೆ ಉಳಿಸಬೇಕು ಸೂಕ್ತ ಚಿಕಿತ್ಸೆ ಸಿಕ್ಕರೆ ಮರಿ ಆನೆ ಉಳಿಯುತ್ತೆ.ಸಕಾಲದಲ್ಲಿ ನೆರವಾಗಿ ಮರಿ ಆನೆ ಜೀವ ಉಳಿಸುತ್ತೀರೆಂದು ನಂಬಿದ್ದೇನೆ ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಟ್ವಿಟರ್​ನಲ್ಲಿ ಆನೆ ಫೋಟೋ ಪೋಸ್ಟ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.