ಬೆಂಗಳೂರು:  ಖರ್ತಾನಕ್ ಖದೀಮರು ಸಬ್​​​ ಇನ್ಸ್​ಪೆಕ್ಟರ್​​​ರನ್ನೇ ದರೋಡೆ ಮಾಡಲು ಯತ್ನಿಸಿದ  ಘಟನೆ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ

ಬಾಲು, ಆಶಿತ್ ಗೌಡ ಹಾಗೂ ರವಿ ಕುಮಾರ್ ಬಂಧಿತರು. ಇಷ್ಟು ದಿನ ಜನ ಸಾಮಾನ್ಯರನ್ನು ಟಾರ್ಗೆಟ್​ ಮಾಡುತ್ತಿದ್ದ ಆರೋಪಿಗಳು ಎಂದಿನಂತೆ ತಮ್ಮ ಕೃತ್ಯ ಮುಂದುವರಿಸಿದ್ದರು. ರಾತ್ರಿ ಪಾಳಿ ಕಾದು ಕುಳಿತು ದರೋಡೆಗಿಳಿಯುತ್ತಿದ್ದ ಈ ತಂಡ ಜುಲೈ 3ರಂದು, ಆರ್.ಟಿ ನಗರ ಸಬ್ ಇನ್ಸ್​ಪೆಕ್ಟರ್ ಅವರನ್ನೇ ಅಟ್ಯಾಕ್ ಮಾಡಲು ಯತ್ನಿಸಿದ್ದರು. ಆದರೆ ದರೋಡೆ ವೇಳೆ ಪೊಲೀಸ್ ಹೆಲ್ಮೆಟ್ ಕಾಣುತ್ತಿದಂತೆ ಸ್ಥಳದಿಂದ ಪರಾರಿಯಾಗಿದ್ದರು.

ಏನಿದು ಪ್ರಕರಣ..?
ಆರ್.​ಟಿ ನಗರ ಸಬ್ ಇನ್ಸ್​​ಪೆಕ್ಟರ್ ಆಗಿದ್ದ ಹೆಚ್.ಎಲ್.ಕೃಷ್ಣ ಅವರು ಎಂದಿನಂತೆ ತಮ್ಮ ಕರ್ತವ್ಯ ಮುಗಿಸಿ ರಾತ್ರಿ 9:10ರ ಸುಮಾರಿಗೆ ಮನೆ ಕಡೆ ತಮ್ಮ ಹೀರೋ ಹೊಂಡಾ ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ್ದ ಮೂರು ಜನ ದರೋಡೆಕೋರರ ತಂಡ, ‘ಏ ಏನಿದೆ ನಿನ್ನ ಹತ್ತಿರ ತೆಗೆದು ಕೊಡು’ ಎಂದು ಕೇಳಿದ್ದಾರೆ. ಶರ್ಟ್ ಮೇಲಿನ ಜೇಬಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೆಲ್ಮೆಟ್ ನೋಡಿ ಗಾಬರಿಗೊಂಡ ಕಳ್ಳರು, ಬೈಕ್ ಮೇಲಿದ್ದಿದ್ದು ಪೊಲೀಸ್ ಎಂದು ಗೊತ್ತಾಗುತ್ತಿದಂತೆ ಗಾಬರಿಗೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಮೂವರಲ್ಲಿ ಒಬ್ಬ ದರೋಡೆಗೆ ಬಳಸುತ್ತಿದ್ದ ಗಾಡಿಯನ್ನ ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದ. ನಂತರ ಸಬ್​ ಇನ್ಸ್​ಪೆಕ್ಟರ್ ಕೃಷ್ಣ ಅವರು ದರೋಡೆಕೋರರ ಸ್ಕೂಟರ್ ಠಾಣೆಗೆ ತಂದು ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಖದೀಮರು ಬಿಟ್ಟು ಹೋಗಿದ್ದ ಸ್ಕೂಟರ್ ಮತ್ತು ದೂರಿನ ಅನ್ವಯ ಕ್ರಮಕೈಗೊಂಡ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಬಾಲು, ಆಶಿತ್ ಗೌಡ ಹಾಗೂ ರವಿ ಕುಮಾರ್, ಪ್ರತಿ ದಿನ ರಾತ್ರಿಯಾಗುತ್ತಿದಂತೆ ಒಂಟಿಯಾಗಿ ಓಡಾಡುವ ವಾಹನ ಸವಾರರು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ . ಇನ್ನು ಸಬ್ ಇನ್ಸ್​​ಪೆಕ್ಟರ್​​ ಅವರನ್ನೇ ದರೋಡೆ ಮಾಡಲು ಯತ್ನಿಸಿದ ಮೂವರು ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಬೇರೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನದ ಮೇರೆಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

The post ಸಬ್​​ ಇನ್ಸ್​​ಪೆಕ್ಟರನ್ನೇ ದರೋಡೆ ಮಾಡಲು ಯತ್ನಿಸಿದ ಖದೀಮರು..​​ ಹೆಲ್ಮೆಟ್​ ನೋಡಿ​ ಶಾಕ್ appeared first on News First Kannada.

Source: newsfirstlive.com

Source link