ಸಬ್​ ರಿಜಿಸ್ಟ್ರಾರ್​ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ: ಮಧ್ಯವರ್ತಿಗಳ ವಿರುದ್ಧವೂ ಎಫ್​​ಐಆರ್ ದಾಖಲು, ವಿವರ ಇಲ್ಲಿದೆ – lokayukta raid Three FIR against middlemen at sub registrar office bangalore


ಸಬ್‌ ರಿಜಿಸ್ಟ್ರಾರ್ ಕಚೇರಿಗಳು ಆಸ್ತಿ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೋಂದಾಯಿಸುತ್ತವೆ ಮತ್ತು ಮುದ್ರಾಂಕ ಶುಲ್ಕ ಮತ್ತು ಇತರ ಶುಲ್ಕಗಳನ್ನು ಸಂಗ್ರಹಿಸುತ್ತವೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸೇವೆ ಒದಗಿಸಲು ಮಧ್ಯವರ್ತಿಗಳು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಸಬ್​ ರಿಜಿಸ್ಟ್ರಾರ್​ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ: ಮಧ್ಯವರ್ತಿಗಳ ವಿರುದ್ಧವೂ ಎಫ್​​ಐಆರ್ ದಾಖಲು, ವಿವರ ಇಲ್ಲಿದೆ

ಮಧ್ಯವರ್ತಿಗಳ ವಿರುದ್ಧವೂ ಎಫ್​​ಐಆರ್ ದಾಖಲು, ವಿವರ ಇಲ್ಲಿದೆ

ಬೆಂಗಳೂರು: ಸಬ್​ ರಿಜಿಸ್ಟ್ರಾರ್​ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಮಧ್ಯವರ್ತಿಗಳ ವಿರುದ್ಧವೂ ಮೂರು ಪ್ರತ್ಯೇಕ ಎಫ್​​ಐಆರ್ ಗಳು ದಾಖಲುಗೊಂಡಿವೆ. ಮಧ್ಯವರ್ತಿಗಳು ಮತ್ತು ಏಜೆಂಟ್​ಗಳ ಬಳಿಯಿದ್ದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಪತ್ತೆಯಾದ ದಾಖಲೆಗಳನ್ನು ಲೋಕಾ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದಾಖಲೆಗಳು ಮಧ್ಯವರ್ತಿಗಳ ಕೈಸೇರಿದ್ದು ಹೇಗೆ ಎಂದೂ ತನಿಖೆ ಮುಂದುವರಿದಿದೆ.

ಇದರಿಂದ ಸಬ್​ ರಿಜಿಸ್ಟ್ರಾರ್​ ಕಚೇರಿಯ ಕೆಲ ಅಧಿಕಾರಿಗಳಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ನಿವೇಶನ, ರಿಯಲ್ ಎಸ್ಟೇಟ್ ವ್ಯವಹಾರ ಸಂಬಂಧ ಕಡತ ಪತ್ತೆಯಾಗಿದೆ. ಸೇಲ್ ಡೀಡ್ ಪ್ರತಿಗಳು, ಜಿಪಿಎ ಪತ್ರ, ಟ್ಯಾಕ್ಸ್ ರಸೀದಿ ಜಪ್ತಿ ಮಾಡಲಾಗಿದೆ. ಲೋಕಾಯುಕ್ತ ತನಿಖಾಧಿಕಾರಿಗಳು ಸಬ್​ ರಿಜಿಸ್ಟ್ರಾರ್​ ಕಚೇರಿ ಅಧಿಕಾರಿಗಳ ಜೊತೆಗಿನ ನಂಟು ಪತ್ತೆ ಹಚ್ಚಲಿದ್ದಾರೆ. ಸದ್ಯ ಕಡತಗಳ ಪರಿಶೀಲನೆ ನಡೆಸಿ, ಇಂಚಿಂಚೂ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಕಳೆದ ವಾರ ಬೆಂಗಳೂರು ಮತ್ತು ಸುತ್ತಮುತ್ತ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾ ದಾಳಿ ನಡೆದಿತ್ತು:

ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಭ್ರಷ್ಟಾಚಾರದ ಆರೋಪದ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಕಳೆದವಾರ ಬೆಂಗಳೂರು ಮತ್ತು ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದದರು. ಸುಮಾರು 150 ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 15, ಬೆಂಗಳೂರು ಗ್ರಾಮಾಂತರದಲ್ಲಿ 4 ಮತ್ತು ರಾಮನಗರದ 2 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.

ಅಂದಹಾಗೆ, ಸಬ್‌ ರಿಜಿಸ್ಟ್ರಾರ್ ಕಚೇರಿಗಳು ಆಸ್ತಿ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೋಂದಾಯಿಸುತ್ತವೆ ಮತ್ತು ಮುದ್ರಾಂಕ ಶುಲ್ಕ ಮತ್ತು ಇತರ ಶುಲ್ಕಗಳನ್ನು ಸಂಗ್ರಹಿಸುತ್ತವೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸೇವೆ ಒದಗಿಸಲು ಮಧ್ಯವರ್ತಿಗಳು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಈ ದಾಳಿಯನ್ನು ಪೊಲೀಸ್ ವರಿಷ್ಠಾಧಿಕಾರಿ (ಲೋಕಾಯುಕ್ತ) ಅಶೋಕ್ ಕೆ ವಿ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಎಲ್ಲಿ ದಾಳಿಗಳು ನಡೆದಿದ್ದವು?

ಬೆಂಗಳೂರು ನಗರ: ಬನ್ನೇರುಘಟ್ಟ, ಯಲಹಂಕ, ಕಾಚರಕನಹಳ್ಳಿ, ಬಸವನಗುಡಿ, ಮಹದೇವಪುರ, ವರ್ತೂರು, ದೊಮ್ಮಲೂರು, ಬೊಮ್ಮನಹಳ್ಳಿ, ಬೇಗೂರು, ಜೆಪಿ ನಗರ, ಬನಶಂಕರಿ, ಬಾಣಸವಾಡಿ, ನಾಗರಭಾವಿ, ಕೆಂಗೇರಿ ಮತ್ತು ದೇವನಹಳ್ಳಿ.

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ, ನೆಲಮಂಗಲ, ಆನೇಕಲ್ ಮತ್ತು ಹೊಸಕೋಟೆ.

ರಾಮನಗರ: ರಾಮನಗರ ಮತ್ತು ಕನಕಪುರ.

ತಾಜಾ ಸುದ್ದಿ

TV9 Kannada


Leave a Reply

Your email address will not be published.