ಸಮಂತಾರ ಹೊಸ ಚಿತ್ರದಲ್ಲಿ ಅರ್ಜುನ್​ ಪುತ್ರಿ -ಅಲ್ಲು ಫ್ಯಾಮಿಲಿಯ 4ನೇ ತಲೆಮಾರಿನ ಕಲಾವಿದೆ

ಸಮಂತಾರ ಹೊಸ ಚಿತ್ರದಲ್ಲಿ ಅರ್ಜುನ್​ ಪುತ್ರಿ -ಅಲ್ಲು ಫ್ಯಾಮಿಲಿಯ 4ನೇ ತಲೆಮಾರಿನ ಕಲಾವಿದೆ

ಕಲೆ ಅನ್ನೋದು ರಕ್ತದಲ್ಲೇ ಇರುತ್ತೆ ಅಂತಾರೆ. ಕೆಲವೊಬ್ಬರು ರಕ್ತಗತವಾಗಿ ಬಂದಿರುತ್ತೆ ಅಂತಾನು ಅಂತಾರೆ. ಟಾಲಿವುಡ್ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುದ್ದು ಮಗಳು ಅಲ್ಲು ಅರ್ಹಾ ಅಭಿನಯಕ್ಕೆ ಸಜ್ಜಾಗಿದ್ದಾರಂತೆ. ತನ್ನ ಮಗಳ ಸಿನಿ ಎಂಟ್ರಿಗೆ ಆರ್ಯ ಫುಲ್ ಹ್ಯಾಪಿ ಹ್ಯಾಪಿಯಾಗಿದ್ದಾರೆ. ಅಷ್ಟಕ್ಕೂ ಅಲ್ಲು ಅರ್ಜುನ್ ಅವರ ಮಗಳು ನಟಿಸುತ್ತಿರೋ ಸಿನಿಮಾ ಯಾವುದು..? ಇಲ್ಲಿದೆ ಮಾಹಿತಿ.

ಅಲ್ಲು ಅರ್ಜುನ್, ಸ್ನೇಹ ಅರ್ಜುನ್ ದಂಪತಿಗಳಿಗೆ ಆರ್ತಿಗೊಬ್ಬ, ಕೀರ್ತಿಗೊಬ್ಬ ಎನ್ನುವಂತೆ ಇಬ್ಬರು ಮಕ್ಕಳು. ಸ್ಟೈಲಿಶ್ ಸ್ಟಾರ್’ ನಟ ಅಲ್ಲು ಅರ್ಜುನ್ ಕುಟುಂಬಸ್ಥರೆಲ್ಲರೂ ಸಿನಿಮಾದಲ್ಲಿ ನಟನೆ, ನಿರ್ಮಾಣ ಮಾಡುತ್ತ ಸಿನಿ ರಂಗದಲ್ಲಿ ಬ್ಯುಸಿಯಿದ್ದಾರೆ. ಅಲ್ಲು ಅರ್ಜುನ್ ಮುದ್ದಿನ ಪುತ್ರಿ ಅರ್ಹಾ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೌದು, ಅಲ್ಲು ಅರ್ಜುನ್ ಅವರ ಪುತ್ರ ಅಲ್ಲು ಅರ್ಹಾ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಅಲ್ಲು ಅರ್ಜುನ್ ಅವರೇ ಸಂತೋಷ್ ದಿಂದ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘‘ಶಕುಂತಲಂ’’ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ಜನರೇಶನ್‌ ಚಿತ್ರರಂಗಕ್ಕೆ ಕಾಲಿಡುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಶಕುಂತಲಂ ಸಿನಿಮಾದಲ್ಲಿ ಅರ್ಹಾ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಗುಣಶೇಖರ್ ಹಾಗೂ ನೀಲಿಮಾಗೆ ಧನ್ಯವಾದ. ಈ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ಕೂಡ ನಟಿಸಲಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ

ಅಲ್ಲು ಅರ್ಜುನ್ , ನಟ

ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾಗೆ ಈಗ 4 ವರ್ಷ. ಮಗಳ ಮುದ್ದಾದ ಫೋಟೋ, ವಿಡಿಯೋಗಳನ್ನು ಅಲ್ಲು ಅರ್ಜುನ್ ಹಾಗೂ ಸ್ನೇಹಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತೆ.. ಅಲ್ಲು ಅರ್ಹಾ ಶಕುಂತಲಂ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದು ಕಳೆದ 10 ದಿನಗಳಿಂದ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದಾಳಂತೆ..ಸಿನಿಮಾ ಕಥೆ ಕೇಳಿ ಅರ್ಹಾ ಚಿತ್ರರಂಗಕ್ಕೆ ಕಾಲಿಡಲು ‘ಶಕುಂತಲಂ’ ಸಿನಿಮಾ ಸರಿಯಾಗಿದೆ ಎಂದು ಅಲ್ಲು ಕುಟುಂಬ ನಿರ್ಧಾರಕ್ಕೆ ಬಂದಿದೆ.

The post ಸಮಂತಾರ ಹೊಸ ಚಿತ್ರದಲ್ಲಿ ಅರ್ಜುನ್​ ಪುತ್ರಿ -ಅಲ್ಲು ಫ್ಯಾಮಿಲಿಯ 4ನೇ ತಲೆಮಾರಿನ ಕಲಾವಿದೆ appeared first on News First Kannada.

Source: newsfirstlive.com

Source link