ಸಮಂತಾ ಅನಾರೋಗ್ಯದಿಂದ ವಿಜಯ್ ದೇವರಕೊಂಡ ಕನಸು ಭಗ್ನ; ಬೇಸರ ಹೊರಹಾಕಿದ ನಟ – Kushi Movie update vijay devarakonda hint about his upcoming movie release date with Samantha


ವಿಜಯ್ ದೇವರಕೊಂಡ ಹಾಗೂ ಸಮಂತಾ ‘ಖುಷಿ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಒಂದು ಹಂತದ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿದೆ. ಇನ್ನೂ ಕೆಲವು ಹಂತದ ಶೂಟಿಂಗ್ ಬಾಕಿ ಇದೆ.

ಸಮಂತಾ ಅನಾರೋಗ್ಯದಿಂದ ವಿಜಯ್ ದೇವರಕೊಂಡ ಕನಸು ಭಗ್ನ; ಬೇಸರ ಹೊರಹಾಕಿದ ನಟ

ಸಮಂತಾ-ವಿಜಯ್

ನಟಿ ಸಮಂತಾ (Samantha) ಅವರು ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಸಮಂತಾ ಇತ್ತೀಚೆಗೆ ಘೋಷಣೆ ಮಾಡಿದ್ದರು. ಸಮಂತಾಗೆ ಅನಾರೋಗ್ಯ ಕಾಡಿರುವುದರಿಂದ ನಟ ವಿಜಯ್ ದೇವರಕೊಂಡ (Vijay Devarakonda) ಕೂಡ ತೊಂದರೆಗೆ ಸಿಲುಕಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ವಿಜಯ್ ಅವರ ಹೊಸ ಘೋಷಣೆಯಿಂದ ಫ್ಯಾನ್ಸ್​ಗೆ ಸಖತ್ ಬೇಸರ ಆಗಿದೆ.

ವಿಜಯ್ ದೇವರಕೊಂಡ ಹಾಗೂ ಸಮಂತಾ ‘ಖುಷಿ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಒಂದು ಹಂತದ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿದೆ. ಇನ್ನೂ ಕೆಲವು ಹಂತದ ಶೂಟಿಂಗ್ ಬಾಕಿ ಇದೆ. ಈಗಾಗಲೇ ಶೂಟಿಂಗ್ ಆರಂಭಗೊಳ್ಳಬೇಕಿತ್ತು. ಆದರೆ, ಸಮಂತಾಗೆ ಅನಾರೋಗ್ಯ ಕಾಡಿರುವುದರಿಂದ ಚಿತ್ರೀಕರಣ ಮುಂದೂಡುವುದು ಅನಿವಾರ್ಯ ಆಗಿದೆ.

ಸಮಂತಾ ಅವರಿಗೆ ಸ್ನಾಯುಗಳಲ್ಲಿ ಸೆಳೆತ ಶುರುವಾಗಿದೆ. ಇದಕ್ಕಾಗಿ ಅವರು ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ಇಷ್ಟೇ ಅಲ್ಲ ಸಮಂತಾ ಅವರಿಗೆ ಚರ್ಮದ ಅಲರ್ಜಿ ಕೂಡ ಆಗಿದೆ. ಈ ಎಲ್ಲಾ ಕಾರಣದಿಂದ ಸಮಂತಾ ಅವರಿಗೆ ಸಾಕಷ್ಟು ವಿಶ್ರಾಂತಿ ಬೇಕಿದೆ. ಇತ್ತೀಚೆಗೆ ಡ್ರಿಪ್ ಹಾಕಿಕೊಂಡು ಅವರು ‘ಯಶೋದ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದರು. ಹೀಗಾಗಿ, ಸದ್ಯಕ್ಕಂತೂ ಅವರ ‘ಖುಷಿ’ ಚಿತ್ರದ ಕೆಲಸ ಪೂರ್ಣಗೊಳ್ಳಲ್ಲ.

ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟ ಬಗ್ಗೆ ವಿಜಯ್ ದೇವರಕೊಂಡ ಅವರು ಇಂಗ್ಲಿಷ್ ವೆಬ್​ಸೈಟ್ ನ್ಯೂಸ್18ಗೆ ಮಾಹಿತಿ ನೀಡಿದ್ದಾರೆ. ‘ನಾವು ಶೇ.60 ಶೂಟಿಂಗ್ ಪೂರ್ಣಗೊಳಿಸಿದ್ದೀವಿ. ಆರಂಭದಲ್ಲಿ ಚಿತ್ರವನ್ನು ಡಿಸೆಂಬರ್​​ನಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ಇತ್ತು. ಆದರೆ, ಹಲವು ಕಾರಣದಿಂದ ಚಿತ್ರ ಫೆಬ್ರವರಿಗೆ ಮುಂದೂಡಲ್ಪಟ್ಟಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published.