‘ಸಮಂತಾ ಎಲ್ಲವನ್ನೂ ಮರೆತು ಮುಂದೆ ಹೋಗಿದ್ದಾರೆ’; ನಾಗ ಚೈತನ್ಯ ನೇರ ಮಾತು | Me and Samantha Move on Says Naga Chaitanya


ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ಅವರು ಪ್ರಮುಖ ಪಾತ್ರ ಒಂದನ್ನು ನಿಭಾಯಿಸಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ ಅವರಿಗೆ ವಿಚ್ಛೇದನದ ಬಗ್ಗೆ ಪ್ರಶ್ನೆ ಎದುರಾಗಿದೆ.

ಸಮಂತಾ (Samantha) ಹಾಗೂ ನಾಗ ಚೈತನ್ಯ (Naga Chaitanya) ವಿಚ್ಛೇದನಕ್ಕೆ ಇನ್ನು ಕೆಲವೇ ತಿಂಗಳಲ್ಲಿ ಒಂದು ವರ್ಷ ತುಂಬಲಿದೆ. ಆದರೆ, ಈ ಬಗ್ಗೆ ಟಾಕ್ ಮಾತ್ರ ನಿಂತಿಲ್ಲ. ಅನೇಕರು ಅನೇಕ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಇವರ ವಿಚ್ಛೇದನಕ್ಕೆ ಅಸಲಿ ಕಾರಣ ಮಾತ್ರ ಈವರೆಗೆ ತಿಳಿದು ಬಂದಿಲ್ಲ. ಕೆಲವರು ಇದನ್ನು ಸಮಂತಾ ಅವರ ನಿರ್ಧಾರ ಎಂದು ಹೇಳಿದರೆ, ಇನ್ನೂ ಕೆಲವರು ನಾಗ ಚೈತನ್ಯ ಅವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಈ ಬಗ್ಗೆ ನಾಗ ಚೈತನ್ಯ ಅವರಿಗೆ ಈಗಲೂ ಪ್ರಶ್ನೆ ಎದುರಾಗುತ್ತಿದೆ. ಆದರೆ, ಈ ಬಗ್ಗೆ ಮಾತನಾಡಲು ಅವರು ನಿರಾಕರಿಸಿದ್ದಾರೆ.

ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ಅವರು ಪ್ರಮುಖ ಪಾತ್ರ ಒಂದನ್ನು ನಿಭಾಯಿಸಿದ್ದಾರೆ. ಈ ಸಿನಿಮಾ ಆಗಸ್ಟ್​ 11ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ ಅವರಿಗೆ ವಿಚ್ಛೇದನದ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ.

ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಾಗ ಚೈತನ್ಯ, ‘ನಾವಿಬ್ಬರೂ ಏನು ಹೇಳಬೇಕು ಎಂದುಕೊಂಡಿದ್ದೆವೋ ಅದನ್ನು ಪ್ರಕಟಣೆ ಮೂಲಕ ತಿಳಿಸಿದ್ದೇವೆ. ಅದು ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ ನಾನು ಏನು ಹೇಳಬೇಕು ಎಂದುಕೊಂಡಿದ್ದೇನೋ ಅದನ್ನು ಹೇಳಿದ್ದೇನೆ. ನಾನು ಹಾಗೂ ಸಮಂತಾ ಇಬ್ಬರೂ ಎಲ್ಲವನ್ನೂ ಮರೆತು ಮುಂದೆ ಬಂದಿದ್ದೇವೆ. ಆ ಬಗ್ಗೆ ನಾನು ವಿಶ್ವದ ಎದುರು ಮಾತನಾಡುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ ನಾಗ ಚೈತನ್ಯ.

‘ನನ್ನ ಗೆಳೆಯರು, ಕುಟುಂಬದವರು ನನ್ನ ಆಪ್ತರಿಗೆ ಈ ಬಗ್ಗೆ ಗೊತ್ತಿದೆ. ಒಂದು ಸುದ್ದಿ ಮತ್ತೊಂದು ಸುದ್ದಿಯನ್ನು ರಿಪ್ಲೇಸ್ ಮಾಡುತ್ತದೆ. ವದಂತಿಗಳು ಕೇವಲ ತಾತ್ಕಾಲಿಕ. ನಾನು ಆ ಬಗ್ಗೆ ಪ್ರತಿಕ್ರಿಯಿಸಿದರೆ ಮತ್ತೊಂದಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಜೀವನದಲ್ಲಿ ಘಟಿಸಿದ ಎಲ್ಲವೂ ಒಂದು ದಿನ ಮಾಸುತ್ತದೆ’ ಎಂದಿದ್ದಾರೆ ನಾಗ ಚೈತನ್ಯ.

TV9 Kannada


Leave a Reply

Your email address will not be published. Required fields are marked *