ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆ ಉಪಾಸನಾ ಕೊನಿಡೆಲಾ ನಟಿ ಸಮಂತಾ ಬಗ್ಗೆ ಒಂದೊಳ್ಳೆ ಕಮೆಂಟ್ ಮಾಡಿದ್ದಾರೆ.
ಹೌದು, ನಟಿ ಸಮಂತಾ ಮತ್ತು ಉಪಾಸನಾ ಇಬ್ಬರೂ ಒಳ್ಳೆಯ ಸ್ನೇಹಿತರು. ಫಿಟ್ನೆಸ್ ಹಾಗೂ ಆರೋಗ್ಯದ ವಿಚಾರಕ್ಕೆ ಬಂದರೆ ಇಬ್ಬರಿಗೂ ಒಂದೇ ರೀತಿಯ ಅಲೋಚನೆಗಳಿವೆ. ಉಪಾಸನಾ ಅವರ ವೆಬ್ಸೈಟ್ ಒಂದರಲ್ಲಿ ಸಮಂತಾ ಅತಿಥಿ ಸಂಪಾದಕರಾಗಿದ್ದರು. ಆಗ ಸಮಂತಾ ಬರೆಯುತ್ತಿದ ಅರ್ಟಿಕಲ್ಸ್ ನೋಡಿ ಉಪಾಸನಾ ಮಾಂಸಾಹಾರ ಸೇವಿಸುವುದನ್ನ ಕಡಿಮೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು 20 ಸಾವಿರ ಕೊಟ್ಟರೆ ಅವರು 40-50 ಸಾವಿರದವರೆಗೆ ಕೊಟ್ಟು ಗೆದ್ದರು -ಶಿವಲಿಂಗೇಗೌಡ
ಸದ್ಯ ಸಂರ್ದಶನವೊಂದರಲ್ಲಿ ಮಾತನಾಡಿರುವ ಉಪಾಸನಾ.”ನಾನು ತೆಲಂಗಾಣದ ಹುಡುಗಿ. ದಸರಾದಂತಹ ಹಬ್ಬದಲ್ಲೂ ಮಾಂಸಹಾರವನ್ನು ನಾನು ಸೇವಿಸುತ್ತಿದ್ದೆ. ಆದ್ರೆ ಸಮಂತಾ ಅವರು ಬರೆದ ಆರ್ಟಿಕಲ್ಸ್ ಓದಿದ ನಂತರ ನಾನು ಮಾಂಸಾಹಾರ ಸೇವನೆ ಕಡಿಮೆ ಮಾಡಿದ್ದೇನೆ. ಸಮಂತಾರಿಗೆ ಸಹಾಯ ಮಾಡುವ ಗುಣವಿದೆ ನನಗೆ ಆನೇಕ ವಿಷಯಗಳಲ್ಲಿ ಸಮಂತಾ ಸಹಾಯ ಮಾಡಿದ್ದಾರೆ. ಸಮಂತಾ ಪ್ರೀತಿ ಪ್ರಾಮಾಣಿಕವಾದದ್ದು” ಎಂದು ಉಪಾಸನಾ ಹೇಳಿದ್ದಾರೆ.
ಇದನ್ನೂ ಓದಿ: ಟೆಸ್ಟ್ ತಂಡಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಯ್ಕೆ ಹಿಂದಿದೆ ಒಂದು ‘ವಿಶೇಷ ಕಾರಣ’
The post ‘ಸಮಂತಾ ಪ್ರೀತಿ ಪ್ರಾಮಾಣಿಕವಾದದ್ದು..’ ಮೆಗಾಸ್ಟಾರ್ ಸೊಸೆಯ ಇಂಟ್ರೆಸ್ಟಿಂಗ್ ಕಮೆಂಟ್ಸ್ appeared first on News First Kannada.