ಸಮಂತಾ ಮೇಲೆ ನೆಟ್ಟಿಗರು ಗರಂ ಆಗಿದ್ಯಾಕೆ?

ಟಾಲಿವುಡ್​ ಕ್ವೀನ್​ ಸಮಂತಾ ಏನೇ ಮಾಡಿದ್ರು ಅದು ಸುದ್ದಿಯಾಗುತ್ತಲೇ ಇರುತ್ತದೆ. ಮೊನ್ನೆ ತಾನೆ ”ಪುಷ್ಪ” ಸಿನಿಮಾದ ಐಟಂ ಹಾಡೊಂದರಲ್ಲಿ ಕುಣಿಯೋದು ಪಕ್ಕಾ ಆದ ನಂತರ ಮತ್ತಷ್ಟು ಪ್ರಚಾರಕ್ಕೆ ಬಂದಿದ್ದರು ಬ್ಯೂಟಿ ಕ್ವೀನ್​.

”ಪುಷ್ಪ” ಸಿನಿಮಾದ ಐಟಂ ಹಾಡೊಂದಕ್ಕೆ ಸಮಂತಾ ಬರೋಬ್ಬರಿ ಒಂದೂವರೆ ಕೋಟಿ ಸಂಭಾವನೆ ಪಡೆಯಲಿದ್ದಾರೆ. ಆದರೆ ಸಮಂತಾ ತೆಲುಗಿನ ಯಾವ ಸಿನಿಮಾಗಳಿಗೂ ಇನ್ನೂ ಒಪ್ಪಿಗೆ ನೀಡಿಲ್ಲ. ಆದರೆ ತಮಿಳಿನ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಗೆ ನೀಡಿರುವುದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ”ಪುಷ್ಪ” ಸಿನಿಮಾದ ಐಟಂ ಹಾಡಿಗೆ ಸಮಂತ ಓಕೆ ಅನ್ನೋ ಮೊದಲು ತೆಲುಗಿನ ಖ್ಯಾತ ನಟ ಶರ್ವಾನಂದ್​ ಜೊತೆ ನಟಿಸೊಕೆ ನಿರಾಕರಸಿದ್ದರಂತೆ ಸಮಂತಾ.

ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರು ಸಮಂತಾರನ್ನು ತರಾಟೆಗೆ ತೆಗೆದುಕೊಂಡಿದ್ದು, ಕೇವಲ ದುಡ್ಡಿಗಾಗಿ ಈ ರೀತಿ ಮಾಡಿರುವುದು ಸರಿಯಲ್ಲ, ಒಂದು ಐಟಂ ಹಾಡಿನಿಂದ ಬಹು ಬೇಗ ಪ್ರಚಾರ ಮತ್ತು ಹಣವನ್ನು ಸಂಪಾದನೆ ಮಾಡುವ ಯೋಚನೆ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸಮಂತಾ ಕೈಲಿರುವ ಏಕೈಕ ತೆಲುಗು ಸಿನಿಮಾ ಎಂದರೆ ಗುಣಶೇಕರ್​ ನಿರ್ದೇಶನದ ಮಹಾಕಾವ್ಯ ಪುರಾಣ ”ಶಾಕುಂತಲಂ” ಸಿನಿಮಾ ಇನ್ನೇನು ಸೆಟ್ಟೇರಲು ಸಿದ್ಧವಾಗಿದೆ.

ಇದನ್ನೂ ಓದಿ:‘ಸಿನಿಮಾ ಮಾಡೋಕೆ ಭಾಷೆ ಅಗತ್ಯವಿಲ್ಲ’ ಎಂದ ಸಮಂತಾ- ಬಾಲಿವುಡ್​​ಗೆ ಹಾರೋ ಸುಳಿವು ಕೊಟ್ರಾ?

News First Live Kannada

Leave a comment

Your email address will not be published. Required fields are marked *