ಸಮಂತಾ ವಾಟ್ಸಾಪ್​ ಸಂದೇಶದ ಸ್ಕ್ರೀನ್​ಶಾಟ್​ ಬಹಿರಂಗ; ಅರೆಬರೆ ಮುಚ್ಚಿಟ್ಟು ನಟಿ ಹೇಳಿದ್ದೇನು? | Samantha shares screenshot of WhatsApp chat with mother and hides some conversations


ಸಮಂತಾ ವಾಟ್ಸಾಪ್​ ಸಂದೇಶದ ಸ್ಕ್ರೀನ್​ಶಾಟ್​ ಬಹಿರಂಗ; ಅರೆಬರೆ ಮುಚ್ಚಿಟ್ಟು ನಟಿ ಹೇಳಿದ್ದೇನು?

ಸಮಂತಾ ವಾಟ್ಸಾಪ್​ ಸಂದೇಶದ ಸ್ಕ್ರೀನ್​ಶಾಟ್

ನಟಿ ಸಮಂತಾ (Samantha) ಅವರು ನಾಗ ಚೈತನ್ಯ (Naga Chaitanya) ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಡಿವೋರ್ಸ್​ (Divorce) ನೋವು ಮರೆಯಲು ಅವರು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅವರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ಬಗ್ಗೆ ಅಕ್ಕಿನೇನಿ ಕುಟುಂಬದವರೂ ಬಾಯಿ ಬಿಟ್ಟಿಲ್ಲ. ಈ ನಡುವೆ ಸಮಂತಾ ಅವರು ತಮ್ಮ ತಾಯಿಯ ಜತೆ ಮಾಡಿದ ವಾಟ್ಸಾಪ್​ (WhatsApp) ಸಂದೇಶದ ಸ್ಕ್ರೀನ್​ಶಾಟ್​ ಹಂಚಿಕೊಂಡಿದ್ದಾರೆ. ಅಮ್ಮನ ಜೊತೆ ನಡೆಸಿದ ಮಾತುಕತೆಯ ವಿವರ ಅದರಲ್ಲಿ ಇದೆ. ಹಾಗಂತ ಸಮಂತಾ ಎಲ್ಲವನ್ನೂ ಜಗಜ್ಜಾಹೀರು ಮಾಡಿಲ್ಲ. ಒಂದಷ್ಟು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ. ಸದ್ಯ ಈ ಸ್ಕ್ರೀನ್​ ಶಾಟ್​ ಇಮೇಜ್​ ವೈರಲ್​ ಆಗುತ್ತಿದೆ.

ಸಮಂತಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಅನೇಕ ಸ್ಟೋರಿಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಸ್ಫೂರ್ತಿ ತುಂಬುವಂತಹ ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿದಿನ ಅಂತಹ ಕೋಟ್​ಗಳನ್ನು ಸಮಂತಾಗೆ ಕಳಿಸಿಕೊಡುವುದು ಅವರ ತಾಯಿ ಎಂಬುದು ಈಗ ಗೊತ್ತಾಗಿದೆ. ಸಮಂತಾ ಶೇರ್​ ಮಾಡಿರುವ ವಾಟ್ಸಾಪ್​ ಮೆಸೇಜ್​ನ ಸ್ಕ್ರೀನ್​ಶಾಟ್​ನಲ್ಲಿ ಇದು ಗೊತ್ತಾಗಿದೆ. ಆ ಕಾರಣಕ್ಕಾಗಿಯೇ ಅವರು ‘ಅಮ್ಮ ಹೇಳಿದ್ದು’ ಎಂಬ ಹ್ಯಾಶ್​ಟ್ಯಾಗ್​ ಮೂಲಕ ಅವುಗಳನ್ನು ಪೋಸ್ಟ್​ ಮಾಡುತ್ತಾರೆ.

ಈ ಮಾತುಕತೆಗಿಂತಲೂ ಮುಂಚೆ ಮಾಡಿದ ಮೆಸೇಜ್​ಗಳನ್ನು ಸಮಂತಾ ಬ್ಲರ್​ ಮಾಡಿದ್ದಾರೆ. ಅವು ಜನರಿಗೆ ಗೊತ್ತಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಮುಚ್ಚಿಡುವಂತಹ ಸಂಭಾಷಣೆ ಏನು ನಡೆದಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಅದೇನೇ ಇರಲಿ, ಸದ್ಯಕ್ಕಂತಲೂ ಸಮಂತಾ ಫುಲ್​ ಜೋಶ್​ನಲ್ಲಿ ಇದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಮುನ್ನುತ್ತಿದ್ದಾರೆ. ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾದಲ್ಲಿ ಐಟಂ ಡ್ಯಾನ್ಸ್​ ಮಾಡುತ್ತಿದ್ದಾರೆ. ಫಿಲಿಪ್​ ಜಾನ್​ ನಿರ್ದೇಶನದ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾದಲ್ಲಿ ದ್ವಿಲಿಂಗಿ​ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸುಕುಮಾರ್​ ಅವರು ನಿರ್ದೇಶನ ಮಾಡಿದ್ದಾರೆ. ಅವರ ಬಹುತೇಕ ಸಿನಿಮಾಗಳಲ್ಲಿ ಒಂದು ಐಟಂ ಸಾಂಗ್​ ಇರುತ್ತದೆ. ಅದೇ ರೀತಿ ‘ಪುಷ್ಪ’ ಸಿನಿಮಾದಲ್ಲೂ ಒಂದು ಭರ್ಜರಿ ಐಟಂ ಸಾಂಗ್​ ಇಟ್ಟಿದ್ದಾರೆ. ಈ ಹಾಡಿನಲ್ಲಿ ನರ್ತಿಸಲು ಈ ಮೊದಲು ಪೂಜಾ ಹೆಗ್ಡೆ ಮತ್ತು ಸನ್ನಿ ಲಿಯೋನ್​ ಅವರಿಗೆ ಆಫರ್​ ನೀಡಲಾಗಿತ್ತು. ಆದರೆ ಆ ನಟಿಯರು ಒಪ್ಪಿಕೊಂಡಿಲ್ಲ. ಅಂತಿಮವಾಗಿ ಸಮಂತಾ ಅವರು ಒಪ್ಪಿಕೊಂಡರು. ಈ ಹಾಡಿಗಾಗಿ ಅವರು ಒಂದೂವರೆ ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಹಬ್ಬಿದೆ.

TV9 Kannada


Leave a Reply

Your email address will not be published. Required fields are marked *