‘ಸಮನ್ವಿ ಅಕ್ಕ ದೇವರ ಹತ್ತಿರ ಹೋಗಿದ್ದಾಳೆ’ ನನ್ನಮ್ಮ ಸೂಪರ್​ಸ್ಟಾರ್ ಮಹಿತಾ ಮುಗ್ಧ ನುಡಿ


ನನ್ನಮ್ಮ ಸೂಪರ್​ ಸ್ಟಾರ್​ ರಿಯಾಲಿಟಿ ಶೋ ಖ್ಯಾತಿಯ ಪುಟ್ಟ ಮಗು ಸಮನ್ವಿ ಇನ್ನಿಲ್ಲ ಎಂಬ ಸುದ್ದಿ ಹಲವರಿಗೆ ಅಘಾತ ತಂದಿತ್ತು. ಈ ಕುರಿತು ಮಾತನಾಡಿರೋ ಸಮನ್ವಿ ಗೆಳತಿ ಮಹಿತಾ, ಸಮನ್ವಿ ಅಕ್ಕ ದೇವರ ಬಳಿ ಹೋಗಿದ್ದಾಳೆ. ಅಕ್ಕ ನನ್ನೊಂದಿಗೆ ಆಟವಾಡುತ್ತಿದ್ದಳು, ಅಲ್ಲದೇ ಚೆನ್ನಾಗಿ ಆಟ ಆಡ್ತಿಯಾ ಎಂದು ಹೇಳುತ್ತಿದ್ದಳು ಎಂದು ಮುಗ್ಧವಾಗಿ ಪ್ರತಿಕ್ರಿಯೆ ನೀಡಿದ್ದಾಳೆ.

ಮಹಿತಾ, ಸಮನ್ವಿಯನ್ನು ಪ್ರೀತಿಯಿಂದ ಅಕ್ಕ ಎಂದು ಕರೆಯುತ್ತಿದ್ದಳು. ಸಮನ್ವಿ ಅಕ್ಕ ನಾನು ರಿಯಾಲಿಟಿ ಶೋನಲ್ಲಿ ಮಾಡಿದ ಅಧ್ಯಕ್ಷೆ ಪಾತ್ರ ಮತ್ತು ಹಾಗಲ ಕಾಯಿ ಪಾತ್ರ ತುಂಬಾ ಚೆನ್ನಾಗಿದೆ ಅಂತ ಹೇಳಿದ್ದಳು.

ಅಷ್ಟೇ ಅಲ್ಲದೆ ನಾವಿಬ್ಬರು ಜೊತೆಯಾಗಿ ಆಟವಾಡ್ತಿದ್ವಿ. ಅಕ್ಕ ಶೋಯಿಂದ ಎಲಿಮಿನೇಟ್​ ಆದಾಗ ಅಮ್ಮಗೆ ಹೇಳ್ದೆ.. ಅಕ್ಕ ಮನೆಗೆ ಕರ್ಕೊಂಡೊಗು ಅಂತ, ಆದ್ರೆ ನಾಳೆ ಕರೆದುಕೊಂಡು ಹೋಗ್ತೀನಿ ಅಂತಾ ಹೇಳಿದ್ರು. ಈಗ ಅಕ್ಕ ದೇವರ ಬಳಿ ಹೋಗಿದ್ದಾಳೆ. ನಾನು ಟಿವಿಯಲ್ಲಿ ನೋಡ್ದೆ ಅಕ್ಕಗೆ ವೈಟ್​ ಬಟ್ಟೆಯಲ್ಲಿ ಸುತ್ತಿ ಮಣ್ಣಲ್ಲಿ ಇಟ್ರು. ನನಗೆ ತುಂಬಾ ಬೇಜಾರಾಯ್ತು ಸಮನ್ವಿ ಅಕ್ಕ ಆಟ ಆಡೋಕೆ ಸಿಗ್ಲಿಲ್ಲ ಎಂದಿದ್ದಾಳೆ.

News First Live Kannada


Leave a Reply

Your email address will not be published. Required fields are marked *