ಸಮನ್ವಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ;​ ಯಮಸ್ವರೂಪಿಯಾಗಿ ಬಂತು ಟಿಪ್ಪರ್​ ಲಾರಿ | Samanvi Death: Here is the CCTV video of Samanvi accident


‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Superstar) ರಿಯಾಲಿಟಿ ಶೋ ಖ್ಯಾತಿಯ ಪ್ರತಿಭಾವಂತ ಬಾಲಕಿ ಸಮನ್ವಿ ಬದುಕಿನಲ್ಲಿ ಈ ರೀತಿ ದುರಂತ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ತಾಯಿ ಅಮೃತಾ ನಾಯ್ಡು (Amrutha Naidu) ಜೊತೆ ಆಕೆ ಸ್ಕೂಟರ್​ನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿತು. ಬೆಂಗಳೂರಿನ ಕೋಣನಕುಂಟೆ ಬಳಿ ಗುರುವಾರ (ಜ.13) ವೇಗವಾಗಿ ಬಂದ ಟಿಪ್ಪರ್​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಮನ್ವಿ (Samanvi Death) ಮೃತಪಟ್ಟಳು. ಆ ಭೀಕರ ದೃಶ್ಯ ಸಿಸಿಟಿವಿಯಲ್ಲಿ (Samanvi Accident CCTV video) ಸೆರೆಯಾಗಿದೆ. ಮನರಂಜನಾ ಲೋಕದಲ್ಲಿ ಸಾಧನೆ ಮಾಡಬೇಕಾಗಿದ್ದ ಸಮನ್ವಿ (Samanvi) ಚಿಕ್ಕ ವಯಸ್ಸಿನಲ್ಲೇ ಮೃತಳಾಗಿರುವುದು ಅವರ ಕುಟುಂಬದವರಿಗೆ ತೀವ್ರ ನೋವುಂಟುಮಾಡಿದೆ. ಅನೇಕ ಸೆಲೆಬ್ರಿಟಿಗಳು ಮತ್ತು ಕಿರುತೆರೆ ವೀಕ್ಷಕರು ಸಮನ್ವಿ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಗಾಯಗೊಂಡಿರುವ ಅಮೃತಾ ನಾಯ್ಡು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

TV9 Kannada


Leave a Reply

Your email address will not be published. Required fields are marked *