ಸಮನ್ವಿ ಸಾವಿನ ಬಗ್ಗೆ ಹಿರಿಯ ನಟಿ ತಾರಾ ಅನುರಾಧ ಮಾತನಾಡಿ.. ನಿನ್ನೆ ಈ ಸುದ್ದಿ ತಿಳಿದಾಗ ನನಗೆ ನಿಜಕ್ಕೂ ಆಘಾತವಾಯ್ತು. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನ ಇಡೀ ಕರ್ನಾಟಕ ಮೆಚ್ಚಿಕೊಂಡು ನೋಡುತ್ತಿತ್ತು. ತಾಯಿ ಮಕ್ಕಳ ಸಂಬಂಧವನ್ನ ಹೇಳುತ್ತ, ತಾಯಿ ತನ್ನ ಸಂಭ್ರಮಿಸುವ ಕಾರ್ಯಕ್ರಮ ಅದಾಗಿದೆ.
ಈ ಸುದ್ದಿ ಬರುತ್ತಿದ್ದಂತೆ ನನಗೆ ನಂಬಲು ಆಗಲಿಲ್ಲ. ಸಣ್ಣಪುಟ್ಟ ಗಾಯಗಳಾಗಿರಬಹುದು, ಆಸ್ಪತ್ರೆಗೆ ಸೇರಿರಬಹುದು ಅನ್ಕೊಂಡೆ. ಆದರೆ ಇಲ್ಲ, ಆಕೆ ಸ್ಪಾಟ್ ಅಲ್ಲೇ ಹೋಗಿದ್ದಾರೆ ಅಂದರು. ಅಮೃತಾ ಅವರಿಗೂ ಗಂಭೀರ ಗಾಯಗಳಾಗಿದೆ ಅಂದರು. ಆಮೇಲೆ ಗೊತ್ತಾಯ್ತು ಅಮೃತಾಗೆ ತೀರಾ ಪೆಟ್ಟು ಬಿದ್ದಿಲ್ಲ ಎಂದು. ಮಗು ಸ್ಪಾಟ್ ಅಲ್ಲೇ ಹೋಗಿರೋದು ನಮಗೆ ತುಂಬಾ ನೋವು ತಂದಿದೆ. ನಮ್ಮ ಇಡೀ ತಂಡಕ್ಕೂ ನೋವು ಆಗಿದೆ. ನಮ್ಮ ಇಡೀ ತಂಡ ಕಣ್ಣೀರು ಹಾಕಿಕೊಂಡು ಕುಟುಂಬಕ್ಕೆ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ವಿ.
ಅವಳ ಆತ್ಮಕ್ಕೆ ಶಾಂತಿ ಸಿಗಲಿ. ಸಮನ್ವಿ ಇಲ್ಲ ಅನ್ನೋದು ನಮ್ಮ ಸೂಪರ್ ಸ್ಟಾರ್ ತಂಡದ ಎಲ್ಲಾ ತಾಯಂದಿರಗೂ ನೋವು ತಂದಿದೆ. ಎಲ್ಲಾ ತಾಯಂದಿರರಿಗೂ ತುಂಬಾ ದುಃಖ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
The post ಸಮನ್ವಿ ಸಾವು; ಎಲ್ಲಾ ಅಮ್ಮಂದಿರರಿಗೂ ತುಂಬಾ ನೋವಾಗಿದೆ – ಕಣ್ಣೀರಿಟ್ಟ ತಾರಮ್ಮ appeared first on News First Kannada.