ಯಾದಗಿರಿ: ಅನಾರೋಗ್ಯದಿಂದ ಅಪರಿಚಿತ ವ್ಯಕ್ತಿಯೋರ್ವ ನರಳಾಡಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಸ್ಟೇಶನ್ ರಸ್ತೆಯ ಪಶು ಆಸ್ಪತ್ರೆಯ ಎದುರು ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿಯ ಮೃತದೇಹದ ಬಳಿ ಟ್ಯಾಬ್ಲೆಟ್ ಗಳು ಪತ್ತೆಯಾಗಿದ್ದು ಕೊರೊನಾ ಶಂಕೆಯಿಂದ ಜನರು ಮೃತದೇಹದ ಸಮೀಪ ಸುಳಿಯುತ್ತಿಲ್ಲ ಎನ್ನಲಾಗಿದೆ.ಇನ್ನು ಅಪರಿಚಿತ ವ್ಯಕ್ತಿ ಜೀವಂತ ಇದ್ದಾಗ 108 ಗೆ ಕಾಲ್ ಮಾಡಿದ್ರೂ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿಲ್ಲವಂತೆ. ಎದ್ದು ಹೋಗಲೂ ಆಗದ ಸ್ಥಿತಿಯಲ್ಲಿದ್ದ ಆತ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ..ಸ್ಥಳಕ್ಕೆ ಯಾದಗಿರಿ ಟೌನ್ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಸಮಯಕ್ಕೆ ಬಾರದ ಆ್ಯಂಬುಲೆನ್ಸ್: ರಸ್ತೆಯಲ್ಲೇ ಕೊನೆಯುಸಿರೆಳೆದ ರೋಗಿ appeared first on News First Kannada.

Source: newsfirstlive.com

Source link