ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದ್ದಂತೆಯೇ ಆಸ್ಪತ್ರೆಗೆ ತೆರಳಿ 5 ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಮೊಕ್ಕಾ ಹೂಡಿ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಲಭ್ಯವಾಗುವಂತೆ ನೋಡಿಕೊಳ್ಳುವ ಜಿಲ್ಲೆಯ ಜಿಲ್ಲಾಧಿಕಾರಿ 100 ಕ್ಕೂ ಅಧಿಕ ರೋಗಿಗಳ ಪ್ರಾಣ ಉಳಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗುವ ಆತಂಕ ಎದುರಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆಗೆ ಬಂದ ಜಿಲ್ಲಾಧಿಕಾರಿ ಹಲವು ಖಾಸಗಿ ಏಜೆನ್ಸಿಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಫೋನ್ ಮಾಡಿ ಆಕ್ಸಿಜನ್ ತರುವಂತೆ ಹೇಳಿದ್ದಾರೆ. ಆಸ್ಪತ್ರೆಗೆ ಆಕ್ಸಿಜನ್ ಬಂದಿಳಿಯುವವರೆಗೂ ಅಂದ್ರೆ ಸತತ 5 ಗಂಟೆಗವರೆಗೂ ಆಸ್ಪತ್ರೆಯಲ್ಲೇ ಮೊಕ್ಕಾಂ ಹೂಡಿದ್ದಾರೆ.

ಕೆಲ ಹೊತ್ತಿನಲ್ಲಿ ಎಸ್ಕಾರ್ಟ್ ಮೂಲಕ ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಆಕ್ಸಿಜನ್ ಬಂದಿಳಿದಿದೆ. ಆಕ್ಸಿಜನ್ ಬರುತ್ತಲೇ ಆತಂಕಕ್ಕೊಳಗಾಗಿದ್ದ ಜಿಲ್ಲಾಧಿಕಾರಿ ನಿಟ್ಟುಸಿರುಬಿಟ್ಟಿದ್ದಾರೆ. ಜಿಲ್ಲಾಧಿಕಾರಿ ಆಸ್ಪತ್ರೆಗೆ ಬರುವುದು ಸ್ವಲ್ಪ ತಡವಾಗಿದ್ದರೂ ದುರಂತವೇ ಸಂಭವಿಸಬಹುದಿತ್ತು ಎನ್ನಲಾಗಿದೆ.

The post ಸಮಯಕ್ಕೆ ಸರಿಯಾಗಿ ಆಕ್ಸಿಜನ್ ತರಿಸಿ 100 ಕ್ಕೂ ಹೆಚ್ಚು ರೋಗಿಗಳ ಜೀವ ಉಳಿಸಿದ ಡಿಸಿ appeared first on News First Kannada.

Source: newsfirstlive.com

Source link