ನಟನೆ, ನಿರ್ದೇಶನ, ನಿರ್ಮಾಣ, ಗಾಯನ, ಕಥೆ, ನಿರೂಪಣೆ, ಕ್ರೀಡೆ, ಸಮಾಜ ಸೇವೆ ಹೀಗೆ ಏನಾದ್ರೊಂದು ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎರಡನೇ ಕೊರೊನಾ ಅಲೆಯಲ್ಲಿ ಮಂಕಾಗಿದ್ದರು. ಕಾರಣ ಅವರಿಗೂ ಕೋವಿಡ್ ಪಾಸಿಟಿವ್ ಆಗಿ ಮೂರ್ನಾಲ್ಕು ವಾರ ವಿಶ್ರಾಂತಿ ಪಡೆಯ ಬೇಕಾಯ್ತು. ಆದ್ರೆ ಈಗ ಕಿಚ್ಚ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಪ್ರತಿಕ್ಷಣವನ್ನ ಅಮೂಲ್ಯವನ್ನಾಗಿಸಿಕೊಂಡು ಬಾಳಲು ಪ್ರಯತ್ನಿಸುವ ರನ್ನ ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.

ಕೋಟಿಗೊಬ್ಬ-3 ಸಿನಿಮಾದ ನಂತರ ಕಿಚ್ಚ ಸುದೀಪ್ ನಟಿಸುತ್ತಿರುವ ಸಿನಿಮಾ ವಿಕ್ರಾಂತ್ ರೋಣ. ಈ ನಿರೀಕ್ಷಿತ ಆಲ್ ಮೋಸ್ಟ್ ಆಲ್ ಎಲ್ಲಾ ಕೆಲಸ ಕಾರ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದ್ವು. ಆದ್ರೆ ಕೊರೊನಾ ಕಾರಣ ವಿಕ್ರಾಂತ್ ರೋಣ ನಿರ್ಮಾಣ ಕಾರ್ಯಕ್ಕೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ವಿಕ್ರಾಂತ್ ರೋಣ ಸಿನಿಮಾದ ಕೆಲಸಗಳು ಶುರುವಾಗಿವೆ. ಮುಂದಿನವಾರದಿಂದ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಕಿಚ್ಚ ಸುದೀಪ್ ನಿರ್ಧರಿಸಿದ್ದಾರೆ.

3ಡಿ ಟೆಕ್ನಾಜಲಿಯಲ್ಲಿ ನಿರ್ಮಾಣವಾಗುತ್ತಿರುವ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯನ್ ಮೂವಿ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ತೆರೆಕಾಣಲಿದೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಭಾಷೆಗಳನ್ನ ಸ್ವತಃ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ.

ವಿಕ್ರಾಂತ್ ರೋಣ ಭಾರತೀಯ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೆ ಫ್ರೆಂಚ್, ಅರೇಬಿಕ್, ಸ್ಪ್ಯಾನಿಷ್, ಮ್ಯಾಂಡರಿನ್ ಮತ್ತು ರಷ್ಯನ್ ಭಾಷೆಗಳಲ್ಲಿ 55 ದೇಶಗಳಲ್ಲಿ ಬಿಡುಗಡೆಯಾಗಲಿದೆ ಅನ್ನೋದು ಚಿತ್ರತಂಡದ ಇನ್​ಸೈಡ್ ಸ್ಟೋರಿ..

ಇನ್ನು ಬಿಗ್ ಬಾಸ್ ಸೀಸನ್ 8 ಕೂಡ ಇದೇ ಬುಧವಾರದಿಂದ ಶುರುವಾಗುತ್ತಿದೆ. ಡೆಫಿನೆಟ್​ ಆಗಿ ವಾರದ ಕಥೆ ಕಿಚ್ಚನ ಜೊತೆ ಇದ್ದೇ ಇರುತ್ತೆ. ಕ್ರಿಕೆಟ್, ಕಥೆ ಡಿಸ್ಕ್​ಕಷನ್​ ಇತ್ಯಾದಿ ಕೆಲಸಗಳಲ್ಲಿ ಸುದೀಪ್ ಬ್ಯುಸಿಯಾಗೋದು ಪಕ್ಕಾ.. ಮೊದಲಿನಂತ ಅಭಿನಯ ಚಕ್ರವರ್ತಿ ಸಮಯದ ಹಿಂದೆ ಓಡೋದು ಗ್ಯಾರಂಟಿ..

The post ಸಮಯದ ಹಿಂದೆ ಓಡಲು ನಿಂತ ವಿಕ್ರಾಂತ್ ರೋಣ.. ಫುಲ್​ ಟೈಟ್​ ಆಗಿದೆ ಸುದೀಪ್ ಶೆಡ್ಯೂಲ್ appeared first on News First Kannada.

Source: newsfirstlive.com

Source link