ಸಮಯವೇ ಉತ್ತರಿಸುತ್ತದೆ: ಉತ್ತರಪ್ರದೇಶ ಚುನಾವಣೆ ಮುಂಚಿತವಾಗಿ ಮೈತ್ರಿ ಬಗ್ಗೆ ಒವೈಸಿ ಪ್ರತಿಕ್ರಿಯೆ | Time will tell if we form an alliance or not AIMIM chief Asaduddin Owaisi ahead of UP polls


ಸಮಯವೇ ಉತ್ತರಿಸುತ್ತದೆ: ಉತ್ತರಪ್ರದೇಶ ಚುನಾವಣೆ ಮುಂಚಿತವಾಗಿ ಮೈತ್ರಿ ಬಗ್ಗೆ ಒವೈಸಿ ಪ್ರತಿಕ್ರಿಯೆ

ಅಸಾದುದ್ದೀನ್​ ಓವೈಸಿ

ದೆಹಲಿ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh assembly polls) ಮೈತ್ರಿ ಮಾಡಿಕೊಳ್ಳಲು ಒಂದು ಅಥವಾ ಎರಡು ಪಕ್ಷಗಳೊಂದಿಗೆ ತಮ್ಮ ಪಕ್ಷವು ಮಾತುಕತೆ ನಡೆಸುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಭಾನುವಾರ ಹೇಳಿದ್ದಾರೆ. ಯೋಗಿ ಆದಿತ್ಯನಾಥ ನೇತೃತ್ವದ ಭಾರತೀಯ ಜನತಾ ಪಕ್ಷವು 2017 ರಿಂದ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿನ ಬಗ್ಗೆ ಒವೈಸಿ ವಿಶ್ವಾಸ ವ್ಯಕ್ತಪಡಿಸಿದರು.  ನಮ್ಮ ಪಕ್ಷ 100 ಸ್ಥಾನಗಳಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದೆ. ನಾವು ಇನ್ನೂ ಒಂದು ಅಥವಾ ಎರಡು ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ.  ನಾವು ಮೈತ್ರಿ ಮಾಡಿಕೊಳ್ಳುತ್ತೇವೆಯೇ ಅಥವಾ ಇಲ್ಲವೇ ಎಂಬುದನ್ನು ಸಮಯ ನಿರ್ಧರಿಸುತ್ತದೆ. ನಾವು ಚುನಾವಣೆಯಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದೇವೆ ಎಂದು ಒವೈಸಿ ಲಕ್ನೋದಲ್ಲಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ತಮ್ಮ ಪಕ್ಷವು ಪ್ರಗತಿಶೀಲ ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಓವೈಸಿ ಈ ಹಿಂದೆ ಹೇಳಿದ್ದರು. ಅದೇ ವೇಳೆ ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಜಾದ್ (Chandra Shekhar Azad)ಅವರೊಂದಿಗೆ ಮಾತುಕತೆ ನಡೆಸುವುದಾಗಿ ಸೂಚಿಸಿದ್ದರು.

ಶಿವಪಾಲ್ ಯಾದವ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಚಂದ್ರಶೇಖರ್ ಅವರನ್ನೂ ಒಮ್ಮೆ ಭೇಟಿಯಾಗಿದ್ದೆ. ನಾವು ಇತರ ಪಕ್ಷಗಳೊಂದಿಗೂ ಮಾತುಕತೆ ನಡೆಸುತ್ತಿದ್ದೇವೆ” ಎಂದು ಒವೈಸಿ ಅಕ್ಟೋಬರ್ 28 ರಂದು ಹೇಳಿರುವುದಾಗಿ ಎಎನ್ಐ  ವರದಿ ಮಾಡಿದೆ.

ಅಸೆಂಬ್ಲಿ ಚುನಾವಣೆಗೆ ಎಐಎಂಐಎಂ ಅಭ್ಯರ್ಥಿಗಳು ಕೇವಲ ಮುಸ್ಲಿಂ ಸಮುದಾಯದಿಂದಲ್ಲ, ಆದರೆ ಎಲ್ಲಾ ಸಮುದಾಯಗಳಿಂದ ಬಂದವರು ಎಂದು ಓವೈಸಿ ಹೇಳಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗಳಿಸುವ ಮೂಲಕ ಮತ್ತು ಶೇ 39.67 ಮತಗಳನ್ನು ಗಳಿಸುವ ಮೂಲಕ ಪ್ರಚಂಡ ವಿಜಯವನ್ನು ಪಡೆಯಿತು.

ಹಿಂದಿನ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 38 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಐಎಂಐಎಂ ಖಾಲಿಯಾಗಿದ್ದರೆ, ಸಮಾಜವಾದಿ ಪಕ್ಷವು 47 ಸ್ಥಾನಗಳನ್ನು ಗಳಿಸಿತು. ಬಿಎಸ್ ಪಿ 19 ಮತ್ತು ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

ಇದನ್ನೂ ಓದಿ: ಪಾಕ್ ಪ್ರಧಾನಿಯನ್ನು ಹಿರಿಯ ಅಣ್ಣ ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಬಿಜೆಪಿ, ಅಕಾಲಿದಳ  ವಾಗ್ದಾಳಿ

 

TV9 Kannada


Leave a Reply

Your email address will not be published. Required fields are marked *