ಸಮವಸ್ತ್ರಕ್ಕೆ ಸಂಬಂಧಿಸಿದಂತೆ ತಲೆದೋರಿರುವ ಸ್ಥಿತಿ ಕೊವಿಡ್-19 ಸೃಷ್ಟಿಸಿದ ಸ್ಥಿತಿಗಿಂತ ಭಯಾನಕ: ಡಾ ಶಿವಮೂರ್ತಿ ಮುರುಘಾ ಶರಣರು | Prevailing situation over uniform row is deadlier than situation caused by Covid 19: Dr Shivamurthy Murughashree ARB


ಚಿತ್ರದುರ್ಗ ಮುರುಘಾ ಮಠದ ಡಾ ಶಿವಮೂರ್ತಿ ಮುರುಘಾಶ್ರೀಗಳು (Dr Shivamurthy Murughashree) ಅವರು ಶಾಲಾ-ಕಾಲೇಜುಗಳಲ್ಲಿ ಧರಿಸುವ ಸಮವಸ್ತ್ರಕ್ಕೆ (uniform) ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ಸೃಷ್ಟಿಯಾಗಿರುವ ತಲ್ಲಣದ ಹಿನ್ನೆಲೆಯಲ್ಲಿ ಬುಧವಾರ ಟಿವಿ9 ವಾಹಿನಿ ಮೂಲಕ ವಿದ್ಯಾರ್ಥಿ ಸಮೂಹಕ್ಕೆ, ಪೋಷಕರಿಗೆ, ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಮತ್ತು ಸಮಾಜಕ್ಕೆ ಒಂದು ಸಂದೇಶವನ್ನು ನೀಡಿದ್ದಾರೆ. ಶಾಲೆಗಳಲ್ಲಿ ಸಮವಸ್ತ್ರ ಸಮಾನತೆಯ (equality) ಪ್ರತೀಕವಾಗಿದೆ ಎಂದು ಹೇಳಿರುವ ಅವರು ಅದು ವಿದ್ಯಾರ್ಥಿಗಳಲ್ಲಿ ದರ್ಮ-ಜಾತಿ, ಬಡವ-ಬಲ್ಲಿದ ಮೇಲು-ಕೀಳು ಮೊದಲಾದ ಅಂತರಗಳನ್ನು ಹೋಗಲಾಡಿಸಲು ಜಾರಿಗೊಳಿಸಿರುವ ಪರಿಕಲ್ಪನೆಯಾಗಿದೆ ಎಂದರು. ಆದರೆ ಸಮಾನತೆಯ ಪ್ರತೀಕವಾಗಿದ್ದ ಸಮವಸ್ತ್ರ ಇಂದು ಸಮಾಜದಲ್ಲಿ ತಲ್ಲಣ ಸೃಷ್ಟಿಸಿದೆ. ವಿದ್ಯಾರ್ಥಿಗಳ ಮುಗ್ಧ ಮನಸ್ಸಿನಲ್ಲಿ ರಾಜಕೀಯದ ಭಾವನೆಗಳು ನುಸುಳಬಾರದು. ಯಾರೂ ಅವರಲ್ಲಿ ಅಂಥ ಭಾವನಗೆಳನ್ನು ಬಿತ್ತಬಾರದು, ಸಾಮಾಜಿಕ ಶಾಂತಿ (social harmony) ಕಾಪಾಡಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಅಂತ ಅವರು ಹೇಳಿದರು. ಸಮವಸ್ತ್ರದ ವಿಷಯ ಇಂದು ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿದೆ. ಅದನ್ನು ಸರಿಪಡಿಸಿ ಸಾಮರಸ್ಯ ಮೂಡಲು ಪ್ರಯತ್ನಿಸಬೇಕು ಎಂದು ಶ್ರೀಗಳು ಹೇಳಿದರು.

ಕಳೆದೆರಡು ಮೂರು ವರ್ಷಗಳಿಂದ ಕೊರೋನಾ ಮನುಕುಲದಲ್ಲಿ ಹಾಹಾಕಾರ ಹುಟ್ಟುವಂತೆ ಮಾಡಿದೆ. ಆದರೆ ಸಮವಸ್ತ್ರದ ಹಿನ್ನೆಲೆಯಲ್ಲಿ ತಲೆದೋರಿರುವ ಅಶಾಂತಿ ಮತ್ತು ಪ್ರಕ್ಷುಬ್ಧ ವಾತಾವರಣ ಅದಕ್ಕಿಂತ ಭಯಂಕರವಾದದ್ದು. ಇದಕ್ಕಾಗಿಯೂ ಲಾಕ್ ಡೌನ್ ಹೇರುವ ಪರಿಸ್ಥಿತಿ ಎದುರಾದರೆ ಆಶ್ಚರ್ಯಪಡಬೇಕಾಗಿಲ್ಲ. ಆದರೆ ಅಂಥ ಸ್ಥಿತಿ ತಂದುಕೊಳ್ಳುವುದು ಬೇಡ ಎಂದು ಶ್ರೀಗಳು ಕರೆ ನೀಡಿದರು.

‘ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದೆಂದು ಮತ್ತೊಂದು ಸಲ ವಿನಂತಿಸುತ್ತೇವೆ. ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳಲು ಎಲ್ಲರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯ ಯತ್ನಿಸಬೇಕು ಅತ್ಯಂತ ವಿನೀತನಾಗಿ ಕೇಳಿಕೊಳ್ಳುತ್ತೇವೆ,’ ಎಂದು ಮುರುಘಾ ಮಠದ ಡಾ ಶಿವಮೂರ್ತಿ ಮುರುಘಾಶ್ರೀಗಳು ಹೇಳಿದರು.

TV9 Kannada


Leave a Reply

Your email address will not be published.