ಸಮಾಜದ ಸ್ವಾಸ್ಥ್ಯ ಕದಡುವವರು ಯಾವುದೇ ಸಂಘಟನೆಗೆ ಸೇರಿದವರಾಗಿರಲಿ, ಅವರ ವಿರುದ್ಧ ಕ್ರಮ ಜರುಗಿಸಬೇಕು: ಯುಟಿ ಖಾದರ್, ಶಾಸಕ | People creating unrest in the society should be punished irrespective of organisation they represent: UT Khader, MLAಆದರೆ ಸರ್ಕಾರಗಳು ತಾರತಮ್ಯದ ಧೋರಣೆ ಪ್ರದರ್ಶಿಸದೆ, ತಮ್ಮ ಜವಾಬ್ದಾರಿಯನ್ನು ನ್ಯಾಯಸಮ್ಮತವಾಗಿ ಮೆರೆಯಬೇಕು ಎಂದು ಖಾದರ್ ಹೇಳಿದರು.

TV9kannada Web Team


| Edited By: Arun Belly

Sep 27, 2022 | 1:38 PM
ಮಂಗಳೂರು: ಪಿಎಫ್ಐ (PFI) ಸಂಘಟನೆ ಮತ್ತು ಅದರ ಕಾರ್ಯಕರ್ತರ ಮನೆಗಳ ಮೇಲೆ ನಡೆಯುತ್ತ್ತಿರುವ ಕಾರ್ಯಾಚರಣೆಗಳಿಗೆ ಮಂಗಳೂರಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಶಾಸಕ ಯುಟಿ ಖಾದರ್ (UT Khader), ಸಮಾಜದಲ್ಲಿ ದ್ವೇಷ ಹಬ್ಬಿಸುವ, ಅಶಾಂತಿ ಸೃಷ್ಟಿಸುವವರು ಯಾವುದೇ ಸಂಘಟನೆಗೆ ಸಂಬಂಧಪಟ್ಟವರಾಗಿರಲಿ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕೆನ್ನುವುದೇ ಎಲ್ಲರ ಆಗ್ರಹವಾಗಿದೆ ಎಂದು ಹೇಳಿದರು. ಆದರೆ ಸರ್ಕಾರಗಳು ತಾರತಮ್ಯದ ಧೋರಣೆ ಪ್ರದರ್ಶಿಸದೆ, ತಮ್ಮ ಜವಾಬ್ದಾರಿಯನ್ನು ನ್ಯಾಯಸಮ್ಮತವಾಗಿ ಮೆರೆಯಬೇಕು ಎಂದು ಖಾದರ್ ಹೇಳಿದರು.

TV9 Kannada


Leave a Reply

Your email address will not be published.