ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋದ ಟ್ರಕ್; ಭಯಾನಕ ವಿಡಿಯೋ ವೈರಲ್ | Viral Video: Truck Hits Uttar Pradesh Samajwadi Party Leader Car Drags It For 500 Metres


ದೇವೇಂದ್ರ ಸಿಂಗ್ ಅವರ ಕಾರನ್ನು ಮೈನ್​ಪುರಿಯ ಸದರ್ ಕೊಟ್ವಾಲಿ ಪ್ರದೇಶದ ಅವರ ಮನೆಯ ಬಳಿ ಟ್ರಕ್ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋದ ಟ್ರಕ್; ಭಯಾನಕ ವಿಡಿಯೋ ವೈರಲ್

ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋದ ಟ್ರಕ್

ನವದೆಹಲಿ: ಸಮಾಜವಾದಿ ಪಕ್ಷದ ಮೈನ್​ಪುರಿ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ (Devendra Singh) ಅವರ ಕಾರಿಗೆ ಟ್ರಕ್‌ ಡಿಕ್ಕಿ ಹೊಡೆದ ನಂತರ ಅವರ ಕಾರನ್ನು ಸುಮಾರು 500 ಮೀಟರ್‌ಗಳವರೆಗೆ ಎಳೆದ ಘಟನೆ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ನಡೆದಿದೆ. ಈ ಘಟನೆಯಿಂದ ಸಮಾಜವಾದಿ ಪಕ್ಷದ (Samajwadi Party) ನಾಯಕನಿಗೆ ಗಾಯಗಳಾಗಿದ್ದು, ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ (Video Viral) ಆಗಿದೆ.

ದೇವೇಂದ್ರ ಸಿಂಗ್ ಅವರ ಕಾರನ್ನು ಮೈನ್​ಪುರಿಯ ಸದರ್ ಕೊಟ್ವಾಲಿ ಪ್ರದೇಶದ ಅವರ ಮನೆಯ ಬಳಿ ಟ್ರಕ್ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ನಂತರ ಸ್ಥಳೀಯರು ಕಾರಿನಲ್ಲಿದ್ದ ದೇವೇಂದ್ರ ಸಿಂಗ್ ಅವರನ್ನು ರಕ್ಷಿಸಿದರು. ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ.

ಈ ಅಪಘಾತದ ವಿಡಿಯೋದಲ್ಲಿ ದೇವೇಂದ್ರ ಸಿಂಗ್ ಅವರ ವಾಹನವನ್ನು ನಿಲ್ಲಿಸುವ ಮೊದಲು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗುವುದನ್ನು ನೋಡಬಹುದು. ಕಾರು ನಿಂತ ತಕ್ಷಣ ರಸ್ತೆಯಲ್ಲಿದ್ದ ಹಲವರು ಸ್ಥಳಕ್ಕೆ ಧಾವಿಸಿ ಸಮಾಜವಾದಿ ಪಕ್ಷದ ನಾಯಕ ದೇವೇಂದ್ರ ಸಿಂಗ್ ಅವರನ್ನು ರಕ್ಷಿಸಲು ಯತ್ನಿಸಿದರು.

TV9 Kannada


Leave a Reply

Your email address will not be published. Required fields are marked *