
ಆಜಂ ಖಾನ್
ಅಜಂ ಖಾನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆಯುವ ಕೆಲವೇ ದಿನಗಳ ಮೊದಲು ಮೇ 6 ರಂದು ಇತ್ತೀಚಿನ ಪ್ರಕರಣವನ್ನು ದಾಖಲಿಸಲಾಗಿದೆ.
ದೆಹಲಿ: ವಂಚನೆ ಪ್ರಕರಣದಲ್ಲಿ (cheating case) ಫೆಬ್ರವರಿ 2020 ರಿಂದ ಬಂಧಿತರಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ಗೆ (Azam Khan) ಸುಪ್ರೀಂಕೋರ್ಟ್ (Supreme Court) ಗುರುವಾರ ಮಧ್ಯಂತರ ಜಾಮೀನು ನೀಡಿದೆ, ಇದು ಅವರ ವಿರುದ್ಧ ದಾಖಲಾಗಿರುವ 88 ನೇ ಪ್ರಕರಣವಾಗಿದೆ. ಈ ಹಿಂದೆ 87 ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ಪಡೆದಿರುವುದರಿಂದ ಸಮಾಜವಾದಿ ಪಕ್ಷದ ನಾಯಕ ಈಗ ಜೈಲಿನಿಂದ ಹೊರಬರಬಹುದು. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಬಿ.ಆರ್.ಗವಾಯಿ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಸುಪ್ರೀಂಕೋರ್ಟ್ ನ ನ್ಯಾಯ ಪೀಠವು ಅಜಂ ಖಾನ್ ವಿರುದ್ಧ ರಾಜ್ಯ ಸರ್ಕಾರವು ಒಂದರ ನಂತರ ಒಂದರಂತೆ ದಾಖಲಾದ ಪ್ರಕರಣಗಳ ಕಾಲಾನುಕ್ರಮವನ್ನು ಗಣನೆಗೆ ತೆಗೆದುಕೊಂಡು ಮಧ್ಯಂತರ ಜಾಮೀನು ನೀಡುವುದು ಸೂಕ್ತ ಪ್ರಕರಣ ಎಂದು ಹೇಳಿದೆ. ಅಜಂ ಖಾನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆಯುವ ಕೆಲವೇ ದಿನಗಳ ಮೊದಲು ಮೇ 6 ರಂದು ಇತ್ತೀಚಿನ ಪ್ರಕರಣವನ್ನು ದಾಖಲಿಸಲಾಗಿದೆ.