ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ರಾಜ್ಯದಲ್ಲಿ ಲಾಕ್​ಡೌನ್​ ಹೇರಲಾಗಿದ್ದು, ಈಗಾಗಲೇ ಸ್ಯಾಂಡಲ್​ವುಡ್​​ ನಟ-ನಟಿಯರು ಸಂಕಷ್ಟದಲ್ಲಿರುವವರಿಗೆ ನೆರವಾಗ್ತಿದ್ದಾರೆ. ಸಾವಿರಾರು ಜನರಿಗೆ ದಿನಸಿ, ತರಕಾರಿಗಳನ್ನ ನೀಡಿ ಸಹಾಯ ಮಾಡಿರುವ ನಟ ಉಪೇಂದ್ರ ಸದ್ಯ 10 ಲಕ್ಷ ಜನರ ಆಶೀರ್ವಾದ ಪ್ರಾಪ್ತಿಯಾಗಿದೆ. ಅದೇ.. ಇದೇನಿದು ಅಂತ ಕನ್​​ಫ್ಯೂಸ್​ ಆಗ್ಬೇಡಿ. ಕೋಟಿಗಟ್ಟಲೆ ಕನ್ನಡಾಭಿಮಾನಿಗಳ ಫೇವರೆಟ್​ ಆಗಿರುವ ಉಪೇಂದ್ರ ಟ್ವಿಟರ್​ನಲ್ಲಿ 10 ಲಕ್ಷ ಅಂದ್ರೆ 1 ಮಿಲಿಯನ್​ ಫಾಲೋವರ್ಸ್​​ಗಳನ್ನ ಸಂಪಾದಿಸಿದ್ದಾರೆ.

ಈ ಖುಷಿಯನ್ನ ಒಂದು ಕಲರ್​ಫುಲ್​ ಪೋಸ್ಟ್​ ಮೂಲಕ ಉಪ್ಪಿ ಅಭಿಮಾನಿಗಳ ಜೊತೆ ಹಂಚಿಕೊಂಡು ಧನ್ಯವಾದಗಳನ್ನೂ ತಿಳಿಸಿದ್ದಾರೆ. ಅಂದ್ಹಾಗೇ, ಸ್ಯಾಂಡಲ್​ವುಡ್​​ನಲ್ಲಿ ನಟ ಕಿಚ್ಚ ಸುದೀಪ್​ ನಂತರ ಟ್ವಿಟರ್​​ನಲ್ಲಿ ಹೆಚ್ಚು ಫಾಲೋವರ್ಸ್​​ಗಳನ್ನ ಉಪೇಂದ್ರ ಪಡೆದಿದ್ದಾರೆ. ಕಿಚ್ಚ ಸುದೀಪ್​​ 2 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​​​ಗಳೊಂದಿಗೆ ಮೊದಲ ಸ್ಥಾನದಲ್ಲಿದ್ರೆ, ಉಪ್ಪಿ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ.

ರಾಜ್ಯದಲ್ಲಿ ಲಾಕ್​ಡೌನ್​ ಹೇರಿದಾಗಿನಿಂದ ಜನರ ಸಹಾಯಕ್ಕೆ ನಿಂತಿರುವ ನಟ ಉಪೇಂದ್ರ ಈಗಾಗಲೇ ಸಾವಿರಾರು ಜನರಿಗೆ ನೆರವಾಗಿದ್ದಾರೆ. ಉಪ್ಪಿ ಸಮಾಜ ಸೇವೆಯಿಂದ ಜನರ ಮನಸ್ಸನ್ನೂ ಗೆದ್ದಿದ್ದಾರೆ. ಇದಕ್ಕೆ ಒಂದು ಉದಾಹರಣೆಯೇ, ಇದೀಗ ಟ್ವಿಟರ್​ನಲ್ಲಿ ಉಪ್ಪಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್​​​ಗಳನ್ನ ಪಡೆದಿರೋದು. ಇದನ್ನ ಹೊರತುಪಡಿಸಿ, ಉಪ್ಪಿ ಕೆಲಸಕ್ಕೆ ಅನೇಕ ರೈತರು ಉಚಿತವಾಗಿಯೇ ಯಾವು ಬೆಳೆದಿರುವ ಹಣ್ಣು-ತರಕಾರಿಗಳನ್ನ ತಂದೊಪ್ಪಿಸುತ್ತಿದ್ದಾರೆ.

The post ಸಮಾಜ ಸೇವಕ ಉಪೇಂದ್ರಗೆ ’10 ಲಕ್ಷ’ ಆಶೀರ್ವಾದ appeared first on News First Kannada.

Source: newsfirstlive.com

Source link