ನಿರ್ದೇಶಕ ಕೆ.ಮಾದೇಶ್​ ಆ್ಯಕ್ಷನ್​ ಕಟ್​ ಹೇಳ್ತಿರುವ ‘ಲಗಾಮ್​’ ಚಿತ್ರ ಏಪ್ರಿಲ್​ 19ರಂದು ಮುಹೂರ್ತ ಕಾರ್ಯಕ್ರಮ ನೆರವೇರಿಸಿದೆ. ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಫಸ್ಟ್​ ಶಾಟ್​ಗೆ ಕ್ಲಾಪ್​ ಮಾಡುವ ಮೂಲಕ ‘ಲಗಾಮ್’​​ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಇದೀಗ ಕೋವಿಡ್​ ಕಷ್ಟಕಾಲದಲ್ಲಿ ಜನರಿಗೆ ನೆರವಾಗ್ತಿದ್ದ ಉಪೇಂದ್ರ ತಮ್ಮ ಶೂಟ್​ ಕಡೆಗೂ ಸ್ವಲ್ಪ ಗಮನ ಹರಿಸಿದ್ದಾರೆ. ಹೌದು.. ಸಮಾಜ ಸೇವೆಯ ಜೊತೆಗೆ ಲಗಾಮ್​ ಸಿನಿಮಾದ ಫೋಟೋ ಶೂಟ್​ನಲ್ಲಿ ನಟ ಉಪೇಂದ್ರ ಭಾಗಿಯಾಗಿದ್ದಾರೆ.

ಉಪೇಂದ್ರ ಅಭಿನಯದ ಲಗಾಮ್​ ಚಿತ್ರತಂಡ, ಇಂದಿನಿಂದ ಶೂಟಿಂಗ್​ ಕೂಡ ಶುರು ಮಾಡಿಕೊಂಡಿದೆ. ಅದಕ್ಕಾಗಿಯೇ ಸದ್ಯ ಎಲ್ಲಾ ಸಿದ್ಧತೆ ಮಾಡಿಕೊಳ್ತಿರುವ ಚಿತ್ರತಂಡ, ಇದೀಗ ಉಪೇಂದ್ರ ಹಾಗೂ ನಾಯಕಿ ಹರಿಪ್ರಿಯಾರ ಫೋಟೋ ಶೂಟ್​​ ನಡೆಸಿದೆ ವಿಡಿಯೋ ಹರಿಬಿಟ್ಟಿದೆ. ಏಪ್ರಿಲ್​ 26ರಿಂದ ಲಗಾಮ್​ ಚಿತ್ರತಂಡ ಶೂಟಿಂಗ್​ ಶುರು ಮಾಡಬೇಕಿತ್ತು. ಆದ್ರೆ ಲಾಕ್​ಡೌನ್​ ಆದ ಕಾರಣ ಎಲ್ಲವೂ ಸ್ಥಗಿತವಾಗಿತ್ತು. ಇಡೀ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದ್ದು, ಸದ್ಯ ಚಿತ್ರತಂಡ ಅಲ್ಲೇ ಬೀಡು ಬಿಟ್ಟಿದೆ.

ಬಹಳ ವರ್ಷಗಳ ಬಳಿಕ ನಿರ್ದೇಶಕ-ಸಂಗೀತ ನಿರ್ದೇಶಕ ಸಾಧು ಕೋಕಿಲಾ ಉಪೇಂದ್ರ ಈ ಸಿನಿಮಾದ ಮೂಲಕ ಜೊತೆಯಾಗಿ ಕೆಲಸ ಮಾಡಲಿದ್ದಾರೆ. ಲಗಾಮ್​ಗೆ ಸಾಧು ಕೋಕಿಲಾ ಸಂಗೀತ ನೀಡಲಿದ್ದು, ಎಂ.ಆರ್​ ಗೌಡ ಬಂಡವಾಳ ಹೂಡ್ತಿದ್ದಾರೆ. ಖ್ಯಾತ ಹಾಸ್ಯ ನಟ ಸಾಧು ಕೋಕಿಲಾ, ರಂಗಾಯಣ ರಘು ಹಾಗೂ ಶೋಭರಾಜ್​ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಸಿನಿಮಾವನ್ನ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲೂ ಡಬ್​ ಮಾಡುವ ಯೋಜನೆ ಚಿತ್ರತಂಡದ್ದು.

The post ಸಮಾಜ ಸೇವೆಯ ಮಧ್ಯೆ ‘ಲಗಾಮ್’​ ಸಿನಿಮಾದ ಫೋಟೋ ಶೂಟ್​ಗೂ ಟೈಮ್​ ಕೊಟ್ಟ ಉಪೇಂದ್ರ appeared first on News First Kannada.

Source: newsfirstlive.com

Source link