ಸಮಾನತೆ ಪ್ರತಿಮೆ ಉದ್ಘಾಟನೆ ಮಾಡಿದ ಮೋದಿ


ಹೈದರಾಬಾದ್​​: ಇಂದು ಹೈದರಾಬಾದ್​​ನ ಶಂಶಾಬಾದ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 216 ಅಡಿ ಎತ್ತರದ ಸಮಾನತೆ ಪ್ರತಿಮೆ ಅನಾವರಣೆ ಮಾಡಿದರು. ಇದು ಶ್ರೀ ರಾಮಾನುಜಾಚಾರ್ಯರ ಬೋಧನೆಗಳನ್ನು ಸ್ಮರಿಸುವ ಪ್ರತಿಮೆ ಆಗಿದೆ. ಸುಮಾರು 45 ಎಕರೆ ವಿಸ್ತೀರ್ಣದ ಆವರಣದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಇನ್ನು, ಶ್ರೀರಾಮಾನುಜಾಚಾರ್ಯರ ಪ್ರತಿಮೆಯನ್ನು ಬದ್ರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮತ್ತಿತರ ದೇಗುಲಗಳ ಮಾದರಿಗಳು ಸುತ್ತುವರಿದಿವೆ. ಶ್ರೀ ರಾಮಾನುಜಾಚಾರ್ಯರ 1000ನೇ ಜನ್ಮದಿನದ ಭಾಗವಾಗಿ ಸಮಾನತೆ ಪ್ರತಿಮೆ ಅನಾವರಣಗೊಂಡಿದೆ.

ಸಮಾನತೆ ಪ್ರತಿಮೆ ಉದ್ಘಾಟನೆ ಮಾಡೋಕೆ ತುಂಬಾ ಸಂತೋಷ ಆಗುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ನಿಜಕ್ಕೂ ಹೆಮ್ಮೆಯ ಕ್ಷಣ. ಶ್ರೀ ರಾಮಾನುಜಾಚಾರ್ಯರು ಎಲ್ಲಾ ಜಾತಿ, ಪಂಥ ಮತ್ತು ಲಿಂಗಗಳ ನಡುವಿನ ಸಮಾನತೆ ಪಾಠ ಕಲಿಸಿದರು ಎಂದರು.

News First Live Kannada


Leave a Reply

Your email address will not be published.