ಸಮುದ್ರದ ಮಧ್ಯೆ ಭಾರೀ ಸ್ಫೋಟ; ಅತ್ಯಾಧುನಿಕ ನೌಕೆಯ ಸಾಮರ್ಥ್ಯ ಪ್ರದರ್ಶಿಸಿದ ಅಮೆರಿಕಾ

ಸಮುದ್ರದ ಮಧ್ಯೆ ಭಾರೀ ಸ್ಫೋಟ; ಅತ್ಯಾಧುನಿಕ ನೌಕೆಯ ಸಾಮರ್ಥ್ಯ ಪ್ರದರ್ಶಿಸಿದ ಅಮೆರಿಕಾ

ಬಲಿಷ್ಠ ಸೇನಾ ಪ್ರಾಬಲ್ಯ ಹೊಂದಿರೋ ದೇಶಗಳ ಪೈಕಿ ನಂಬರ್ ಒನ್ ದೇಶ ಅಂದ್ರೆ ಅದು ಅಮೆರಿಕಾ ಮಾತ್ರ.. ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕಾ ಜಗತ್ತಿನ ಯಾವ ದೇಶದೊಂದಿಗೂ ಕಾದಾಟ ನಡೆಸಿ ಗೆಲುವು ಸಾಧಿಸಬಲ್ಲ ಶಕ್ತಿ ಹೊಂದಿದೆ. ಇದಕ್ಕೆ ಕಾರಣ ಅಮೆರಿಕಾ ಬಳಿ ಇರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.

ಟೆಕ್ನಾಲಜಿಯಲ್ಲೂ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕಾ ಈಗಾಗಲೇ ಎಂಥಾ ಯುದ್ಧವನ್ನೂ ಎದುರಿಸಬಲ್ಲ ಅತ್ಯಾಧುನಿಕ ಶಸ್ತ್ರಾಶ್ತ್ರಗಳನ್ನ ತಯಾರು ಮಾಡಿಟ್ಟುಕೊಂಡಿದೆ. ಈ ತಯಾರಿ ಮುಂದುವರೆಯುತ್ತಲೇ ಇದ್ದು ಮತ್ತಷ್ಟು ಬಲಿಷ್ಟ ಆಯುಧಗಳನ್ನ ತನ್ನ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತಿದೆ.

ಅದರಂತೆ ಸದ್ಯ ಅಮೆರಿಕಾ ನೌಕಾ ಸೇನೆ ಸದ್ಯ ಏರ್​ಕ್ರಾಫ್ಟ್ ಕ್ಯಾರಿಯರ್ ಒಂದನ್ನ ಅಭಿವೃದ್ಧಿಪಡಿಸಿದೆ. ಈ ವಾರ್​ಶಿಪ್​ ಅದೆಷ್ಟು ಬಲಿಷ್ಠ ಅನ್ನೋದನ್ನ ಇಡೀ ಜಗತ್ತು ಕಂಡು ಅಚ್ಚರಿಗೊಂಡಿದೆ. ಯಾಕಂದ್ರೆ ಬರೋಬ್ಬರಿ 20 ಟನ್ ತೂಕದ ಸ್ಫೋಟಕಗಳನ್ನ ನೌಕೆಯ ಪಕ್ಕದಲ್ಲಿ ಸ್ಫೋಟಿಸಿದ್ರೂ ಈ ನೌಕೆ ಅಲುಗಾಡದೇ ನಿಂತಿತ್ತು.

ಹೌದು ಇಂದು ಸಮುದ್ರದ ಮಧ್ಯದಲ್ಲಿ ಅಮೆರಿಕಾ ನೌಕಾ ಸೇನೆ ತನ್ನ ಅತ್ಯಾಧುನಿಕ R.Ford ಹೆಸರಿನ ನೌಕೆಯನ್ನ ಪರೀಕ್ಷೆಗೊಳಪಡಿಸಿದೆ. 20 ಟನ್ ತೂಕದ ಸ್ಫೋಟಕವನ್ನ ಸ್ಫೋಟಿಸುವ ಮೂಲಕ ನೌಕೆಯ ಸಾಮರ್ಥ್ಯವನ್ನ ಪರೀಕ್ಷೆಗೊಳಪಡಿಸಿದಾಗ ಸ್ಫೋಟದ ತೀವ್ರತೆಗೆ ಫ್ಲೋರಿಡಾದಲ್ಲಿ 3.9 ರಷ್ಟು ತೀವ್ರತೆಯ ಭೂಕಂಪವೇ ಸಂಭವಿಸಿದೆ. ಆದ್ರೆ R.Ford ವಾರ್​ಶಿಪ್​ ಮಾತ್ರ ಅಂಥ ಬೃಹತ್ ಸ್ಫೋಟವನ್ನು ತಡೆದುಕೊಂಡಿದೆ.

The post ಸಮುದ್ರದ ಮಧ್ಯೆ ಭಾರೀ ಸ್ಫೋಟ; ಅತ್ಯಾಧುನಿಕ ನೌಕೆಯ ಸಾಮರ್ಥ್ಯ ಪ್ರದರ್ಶಿಸಿದ ಅಮೆರಿಕಾ appeared first on News First Kannada.

Source: newsfirstlive.com

Source link