ಸರಗಳ್ಳತನ ಹಾಗೂ ನಕಲಿ ನೋಟುಗಳ ತಯಾರಿಕಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ | Police arrested the accused who were involved in theft and making fake notes


ಸರಗಳ್ಳತನ ಹಾಗೂ ನಕಲಿ ನೋಟುಗಳ ತಯಾರಿಸುತ್ತಿದ್ದ ಆರೋಪಿಗಳನ್ನು ಜೆ.ಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಸರಗಳ್ಳತನ ಹಾಗೂ ನಕಲಿ ನೋಟುಗಳ ತಯಾರಿಕಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ

ಬಂಧಿತ ಆರೋಪಿಗಳು

ಬೆಂಗಳೂರು: ಸರಗಳ್ಳತನ ಹಾಗೂ ನಕಲಿ ನೋಟುಗಳ ತಯಾರಿಸುತ್ತಿದ್ದ ಆರೋಪಿಗಳನ್ನು ಜೆ.ಪಿ ನಗರ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಪ್ರದೀಪ ಹಾಗೂ ಸನಲ್ ಬಂಧಿತ ಆರೋಪಿಗಳು. ಬಂಧಿತರು ಕೇರಳದಲ್ಲಿ 17 ಮತ್ತು ಬೆಂಗಳೂರಿನಲ್ಲಿ 7 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಇವರು ಬನ್ನೇರುಘಟ್ಟದ ಮನೆಯೊಂದರಲ್ಲಿ ಕಲರ್ ಪ್ರಿಂಟರ್ 2,000, 500, 200 ರೂ ಮುಖ ಬೆಲೆಯ ನಕಲಿ ನೋಟುಗಳನ್ನು ತಯಾರು ಮಾಡುತ್ತಿದ್ದರು.

ಆರೋಪಿಗಳು ಬನಶಂಕರಿ, ಜೆಪಿನಗರ, ಕೆ.ಎಸ್. ಲೇಔಟ್ ಸೇರಿದಂತೆ ಹಲವೆಡೆ ಸರಗಳ್ಳತನ ಮಾಡಿದ್ದರು. ಬಂಧಿತರಿಂದ 3.6 ಲಕ್ಷ ರೂ ಮುಖಬೆಲೆಯ ನಕಲಿ ನೋಟುಗಳು ಮತ್ತು 55 ಗ್ರಾಂ ಚಿನ್ನಾಭರಣ, ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೆ.ಪಿ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ಕಾರ್ ಪಾರ್ಕಿಂಗ್ ಕೆಲಸ ಮಾಡುತಿದ್ದ ಯುವಕ: ಕಾರ್ ಪಾರ್ಕಿಂಗ್ ಕೆಲಸ ಮಾಡುತಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್​ನ ಅಶೋಕ್ ಪುರಂನಲ್ಲಿ ನಡೆದಿದೆ. ಕೀರ್ತಿ (25) ಮೃತ ಯುವಕ. ಮೃತ ಕೀರ್ತಿ ಸುಬ್ರಮಣ್ಯ ನಗರ ಪೊಲೀಸರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಷಕರು ಆರೋಪಿಸುತ್ತಿದ್ದಾರೆ.

ಕೀರ್ತಿ ಖಾಸಗಿ ಕಂಪನಿಯಲ್ಲಿ ಕಾರ್ ಪಾರ್ಕರ್ ಆಗಿ ಕೆಲಸ ಮಾಡುತ್ತಿದ್ದನು. ಮೊನ್ನೆ ಕಾರ್ ವೊಂದರಲ್ಲಿ ಚಿನ್ನ ಕಳುವಾದ ಸಂಗತಿ ಕೇಳಿ ಬಂದಿತ್ತು. ಈ ವಿಚಾರವಾಗಿ ಕಾರ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದನು. ಸುಬ್ರಮಣ್ಯನಗರ ಪೊಲೀಸರು ಕೀರ್ತಿ ಹಾಗೂ ಮತ್ತೊರ್ವನ ಕರೆಸಿ ವಿಚಾರಣೆ ಮಾಡಿ ಕಳುಹಿಸಿದ್ದರು.

ಈ ವೇಳೆ ಕೀರ್ತಿಗೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆಂದು ಆರೋಪಿಸಲಾಗಿದೆ. ಇಂದು ಮತ್ತೆ ಠಾಣೆಗೆ ಬರುವಂತೆ ಸಹ ಪೊಲೀಸರು ಸೂಚಿಸಿದ್ದರಂತೆ. ತಪ್ಪು ಮಾಡದೇ ಇದ್ದರು ಪೊಲೀಸರ ಕಿರುಕುಳ ನೀಡಿದ್ದಾರೆ ಆರೋಪವಿದೆ. ಜೊತೆಗೆ ಆತ ಕೆಲಸ ಮಾಡುತಿದ್ದ ಕಂಪನಿಯವರ ಬೇಜಾವಾಬ್ದಾರಿ ಬಗ್ಗೆನು ಆರೋಪಿಸಲಾಗಿದೆ.

ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಮೃತನ ಕುಟುಂಬಸ್ಥರ ದೂರಿಗಾಗಿ ಕಾಯುತ್ತಿದ್ದು, ದೂರಿನ ಆಧಾರದಲ್ಲಿ ಮಹಾಲಕ್ಷ್ಮಿಲೇಔಟ್ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.

ಕೆರೆಯಲ್ಲಿ ಈಜಲು ಹೋದ ಬಾಲಕ ಸಾವು

ಮೈಸೂರು: ಕೆರೆಯಲ್ಲಿ ಈಜಲು ಹೋದ ಬಾಲಕ ಸಾವನ್ನಪ್ಪಿರುವ ಘಟನೆ ಕೆ ಆರ್ ನಗರ ತಾಲ್ಲೂಕಿನ ಕೋಗಿಲೂರು ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (14) ಮೃತ ಬಾಲಕ. ಪ್ರಜ್ವಲ್ ಹಂಡಿತವಳ್ಳಿ ಗ್ರಾಮದ ಶಾಲೆಯ ವಿದ್ಯಾರ್ಥಿಯಾಗಿದ್ದು, ಸ್ನೇಹಿತನ ಜೊತೆ ದನ ತೊಳೆಯಲು ಕೆರೆಗೆ ಹೋಗಿದ್ದನು.

ಬಾಲಕರು ದನದ ತೊಳೆಯುತ್ತಾ ಈಜಲು ಮುಂದಾಗಿದ್ದಾರೆ. ಈ ವೇಳೆ ಪ್ರಜ್ವಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತನ ಜೊತೆ ಕರೆಗೆ ಇಳಿದಿದ್ದ ಮತ್ತೊಬ್ಬ ಬಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯಗೆ ಯತ್ನಿಸಿದ ಮಹಿಳೆ

ಬಾಗಲಕೋಟೆ: ಮನೆಯಲ್ಲಿನ ಕೌಟುಂಬಿಕ ಕಲಹ ಬೇಸತ್ತು ಮಹಿಳೆ ಹುನಗುಂದ ತಾಲ್ಲೂಕಿನ ರಾಮಥಾಳ ಗ್ರಾಮದ ಬಳಿಯ‌ ‌ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗುಳೇದಗುಡ್ಡ ಪಟ್ಟಣದ ಕಂಟಿಪೇಟೆ ನಿವಾಸಿ ಅನ್ನಪೂರ್ಣ ನಾಗರಾಳ(52) ಆತ್ಮಹತ್ಯಗೆ ಯತ್ನಿಸಿದ ಮಹಿಳೆ. ಮಹಿಳೆ ಓಡಿ ಬಂದು ನದಿಗೆ ಹಾರೋದನ್ನು ಗಮನಿಸಿದ ಸ್ಥಳೀಯ ಯುವಕರು, ತಕ್ಷಣ ನದಿಗೆ ಇಳಿದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.