ಉಡುಪಿ: ರಾಜ್ಯ ಕೊರೊನಾ ಸಂಕಷ್ಟದಲ್ಲಿದೆ. ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಎದುರಾಗಿದೆ. ಕೊರೊನಾ ಕಂಟ್ರೋಲ್ ಮಾಡೋಕೆ ಅಂತ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಮದುವೆ ಶುಭ ಸಮಾರಂಭಗಳಿಗೆ ಕೆಲವೊಂದು ನಿಯಮಗಳನ್ನು ಮಾಡಿದೆ. ಆದರೆ ಕೆಲವರು ಮಾತ್ರ ಸರ್ಕಾರದ ಆದೇಶದ ವಿರುದ್ಧವಾಗಿ ಮದುವೆ, ಗೃಹ ಪ್ರವೇಶ ಸೇರಿದಂತೆ ಹಲವು ಸಮಾರಂಭವನ್ನ ಅದ್ಧೂರಿಯಾಗಿ ನಡೆಸ್ತಾರೆ.

ಅಂಥವರ ವಿರುದ್ಧ ಕಠಿಣ ಕ್ರಮವೂ ಆಗಿದೆ. ಇದರ ನಡುವೆ ಕೆಲವು ಮಂದಿ ಸರಳ ಶುಭ ಸಮಾರಂಭ ನಡೆಸಿ ಕಾನೂನು ಪಾಲಿಸುತ್ತಿದ್ದಾರೆ. ಅದರಂತೆ ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆಯ ಪ್ರದೀಪ್ ಕುಮಾರ್ ಶೆಟ್ಟಿ ಅನ್ನೋರು ಸರಳವಾಗಿ ತಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನ ನಡೆಸಿ ಸುದ್ದಿಯಾಗಿದ್ದಾರೆ.

ಗೃಹ ಪ್ರವೇಶಕ್ಕೆ ಉಪಯೋಗಿಸಬೇಕಿದ್ದ ಹಣವನ್ನ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ನೀಡಿ ಮಾದರಿಯಾಗಿದ್ದಾರೆ. ಸುಮಾರು 50 ಸಾವಿರ ಮೌಲ್ಯದ ಔಷಧಗಳನ್ನು ಕುಂದಾಪುರದ ಕೋವಿಡ್ ನೋಡೆಲ್ ಅಧಿಕಾರಿ ಡಾ.ನಾಗೇಶ್ ಅವರಿಗೆ ಹಸ್ತಾಂತರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

The post ಸರಳವಾಗಿ ಗೃಹ ಪ್ರವೇಶ ಮಾಡಿ.. ₹50 ಸಾವಿರ ಮೌಲ್ಯದ ಔಷಧಿ ಆಸ್ಪತ್ರೆಗೆ ನೀಡಿದ ದಾನಿ appeared first on News First Kannada.

Source: newsfirstlive.com

Source link