ಸರಳ ಸಜ್ಜನ ವ್ಯಕ್ತಿತ್ವದ ಬಿಜೆಪಿ ಮುಖಂಡ ಶಿವಲಿಂಗಪ್ಪ ಚಿಕ್ಕಣ್ಣನವರ ವಿಧಿವಶ

ಸರಳ ಸಜ್ಜನ ವ್ಯಕ್ತಿತ್ವದ ಬಿಜೆಪಿ ಮುಖಂಡ ಶಿವಲಿಂಗಪ್ಪ ಚಿಕ್ಕಣ್ಣನವರ ವಿಧಿವಶ

ಧಾರವಾಡ: ಮಾಜಿ ಜಿಲ್ಲಾ ಪಂಚಾಯತ್​​​​ ಸದಸ್ಯ ಮತ್ತು ಹಾಕಿಯಾಳ ಪಿಎಲ್​​ಡಿ ಬ್ಯಾಂಕ್​​​ ಮಾಜಿ ನಿರ್ದೇಶಕರಾದ ಬಿಜೆಪಿ ಮುಖಂಡ ಶಿವಲಿಂಗಪ್ಪ ಚಿಕ್ಕಣ್ಣನವರ ಇಂದು ಬೆಳಗ್ಗೆ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಶಿವಲಿಂಗಪ್ಪ ಚಿಕ್ಕಣ್ಣನವರನ್ನು ಧಾರವಾಡದ ಜರ್ಮನ್​​​​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಇನ್ನು, ಸರಳ ಸಜ್ಜನ ವ್ಯಕ್ತಿತ್ವದ ಶಿವಲಿಂಗಪ್ಪ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದರು.. ಬಿಜೆಪಿ ಸಂಘಟನೆಗೆ ಶಿವಲಿಂಗಪ್ಪ ಅಪಾರ ಕೊಡುಗೆ ನೀಡಿದ್ದಾರೆ.

ಬಿಜೆಪಿ ಹಿರಿಯ ನಾಯಕರು ಸೇರಿದಂತೆ ಹಲವು ಕಾಂಗ್ರೆಸ್ಸಿಗರು ಕೂಡ ಶಿವಲಿಂಗಪ್ಪ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಸ್ವಗ್ರಾಮದಲ್ಲಿ ಇವರ ಅಂತಿಮ ಸಂಸ್ಕಾರ ನಡೆಯಲಿದೆ.

The post ಸರಳ ಸಜ್ಜನ ವ್ಯಕ್ತಿತ್ವದ ಬಿಜೆಪಿ ಮುಖಂಡ ಶಿವಲಿಂಗಪ್ಪ ಚಿಕ್ಕಣ್ಣನವರ ವಿಧಿವಶ appeared first on News First Kannada.

Source: newsfirstlive.com

Source link