Rajoshi Vidyarthi: ಆಶಿಷ್ ವಿದ್ಯಾರ್ಥಿ ಅವರು ರೂಪಾಲಿ ಅವರನ್ನು ಮದುವೆ ಆಗಿರುವ ಬಗ್ಗೆ ಮೊದಲ ಪತ್ನಿ ರಾಜೋಶಿ ಪರೋಕ್ಷವಾಗಿ ಮಾತನಾಡಿದ್ದಾರೆ.

ಆಶಿಷ್ ವಿದ್ಯಾರ್ಥಿ,ರೂಪಾಲಿ-ರಾಜೋಶಿ
ಹಿರಿಯ ನಟ ಆಶಿಷ್ ವಿದ್ಯಾರ್ಥಿ (Ashish Vidyarthi) ಅವರು 60ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ರೂಪಾಲಿ ಬರುವಾ ಅವರನ್ನು ಇತ್ತೀಚೆಗೆ ಮದುವೆ ಆಗಿದ್ದಾರೆ. ಇದು ಕೋರ್ಟ್ ಮ್ಯಾರೇಜ್ ಆಗಿದ್ದು, ಕೆಲವೇ ಕೆಲವು ಆಪ್ತರು ಈ ವಿವಾಹಕ್ಕೆ ಹಾಜರಿ ಹಾಕಿದ್ದರು. ಈ ಮದುವೆ ಆಶಿಷ್ ವಿದ್ಯಾರ್ಥಿ ಅವರ ಮೊದಲ ಪತ್ನಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅವರು ಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಹಿಂದಿರೋ ಅರ್ಥ ಏನು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.
ಆಶಿಷ್ ವಿದ್ಯಾರ್ಥಿ ಹಾಗೂ ರಾಜೋಶಿ ವಿದ್ಯಾರ್ಥಿ ಮದುವೆ ಆಗಿದ್ದರು. ರಾಜೋಶಿ ಅವರು ಬೆಂಗಾಲಿ ನಟಿ ಶಾಕುಂತಲಾ ಬರುವಾ ಅವರ ಮಗಳು. ಇವರು ಆಶಿಷ್ ವಿದ್ಯಾರ್ಥಿ ಆ್ಯಂಡ್ ಅಸೋಸಿಯೇಟ್ನ ಸಹಸಂಸ್ಥಾಪಕಿ ಕೂಡ ಹೌದು. ಇಬ್ಬರೂ ನಂತರ ಬೇರೆ ಆಗಿದ್ದಾರೆ. ಆಶಿಷ್ ವಿದ್ಯಾರ್ಥಿ ಅವರು ರೂಪಾಲಿ ಅವರನ್ನು ಮದುವೆ ಆಗಿರುವ ಬಗ್ಗೆ ರಾಜೋಶಿ ಪರೋಕ್ಷವಾಗಿ ಮಾತನಾಡಿದ್ದಾರೆ.