ಸರಿಯಾದ ಸಮಯಕ್ಕೆ ಮಂಟಪಕ್ಕೆ ಬಾರದ ಮದುಮಗ; ಬೇರೆ ಯುವಕನೊಂದಿಗೆ ವಧುವಿನ ಮದುವೆ! | Bride married another man at wedding venue after groom fails to reach on time to Mantap


ಸರಿಯಾದ ಸಮಯಕ್ಕೆ ಮಂಟಪಕ್ಕೆ ಬಾರದ ಮದುಮಗ; ಬೇರೆ ಯುವಕನೊಂದಿಗೆ ವಧುವಿನ ಮದುವೆ!

ಮಂಟಪದಲ್ಲಿ ಬೇರೆ ಯುವಕನನ್ನು ಮದುವೆಯಾದ ವಧು

ಮುಂಬೈ: ಮದುವೆಯಲ್ಲಿ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ರೀತಿಯ ವಿಚಿತ್ರವಾದ ಘಟನೆಗಳು ಕೆಲವೊಮ್ಮೆ ಜೀವನವನ್ನೇ ಬದಲಾಯಿಸುತ್ತದೆ. ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಮದುವೆಯಾಗಬೇಕಿದ್ದ ವಧುವಿನ ತಂದೆ ತನ್ನ ಮಗಳನ್ನು ವರನ ಬದಲಿಗೆ ಬೇರೆ ಯುವಕನಿಗೆ ಮದುವೆ ಮಾಡಿಸಿದ್ದಾರೆ. ಕುಡುಕನಾಗಿದ್ದ ವರ ಸರಿಯಾದ ಸಮಯಕ್ಕೆ ಮದುವೆ ನಡೆಯುವ ಸ್ಥಳಕ್ಕೆ ತಲುಪದ ಕಾರಣ ಅದೇ ಮದುವೆಗೆ ಬಂದಿದ್ದ ಸಂಬಂಧಿಕರೊಬ್ಬರ ಮನೆಯ ಯುವಕನೊಂದಿಗೆ ಆ ವಧುವಿಗೆ ಮದುವೆ ಮಾಡಿಸಲಾಗಿದೆ.

ಏಪ್ರಿಲ್ 22ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಾಂಗ್ರಾ ಗ್ರಾಮದಲ್ಲಿ ವಿವಾಹ ನಡೆಯಬೇಕಿತ್ತು. ಮದುವೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಸಂಜೆ 4 ಗಂಟೆಗೆ ಮದುವೆ ಸಮಾರಂಭಕ್ಕೆ ಶುಭ ಮುಹೂರ್ತ ಇಡಲಾಗಿತ್ತು. ವಧು ಮತ್ತು ಆಕೆಯ ಕುಟುಂಬದವರು ವರ ಮದುವೆಯ ಸ್ಥಳಕ್ಕೆ ಬರುತ್ತಾನೆ ಎಂದು ಕಾಯುತ್ತಿದ್ದರು. ಆದರೆ ಅವರು ಸಂಜೆ 8 ಗಂಟೆಯಾದರೂ ಮಂಟಪಕ್ಕೆ ಬಂದಿರಲಿಲ್ಲ. ವರ ಮತ್ತು ಆತನ ಸ್ನೇಹಿತರು ಮದುವೆ ಮಂಟಪಕ್ಕೆ ಬರುವುದನ್ನು ಬಿಟ್ಟು ಕುಣಿದು ಕುಪ್ಪಳಿಸುತ್ತಿದ್ದರು ಎನ್ನಲಾಗಿದೆ.

“ವರ ಮತ್ತು ಅವರ ಸ್ನೇಹಿತರು ಕುಡಿದು 4 ಗಂಟೆಗೆ ಬದಲಾಗಿ ರಾತ್ರಿ 8 ಗಂಟೆಗೆ ಮಂಟಪಕ್ಕೆ ಬಂದು ಜಗಳವಾಡಲು ಪ್ರಾರಂಭಿಸಿದರು. ಹೀಗಾಗಿ, ಆತನಿಗೆ ಮದುವೆ ಮಾಡಿಕೊಡಲು ಇಷ್ಟವಿಲ್ಲದೆ ನಾವು ನಮ್ಮ ಮಗಳನ್ನು ನಮ್ಮ ಸಂಬಂಧಿಕರೊಬ್ಬರೊಂದಿಗೆ ಮದುವೆ ಮಾಡಿದ್ದೇವೆ” ಎಂದು ವಧುವಿನ ತಾಯಿ ಹೇಳಿದ್ದಾರೆ.

ವರನು ಮಂಟಪಕ್ಕೆ ಬಂದಾಗ, ವಧುವಿನ ತಂದೆ ತನ್ನ ಮಗಳನ್ನು ಆತನಿಗೆ ಮದುವೆ ಮಾಡಿಕೊಡಲು ನಿರಾಕರಿಸಿದರು. ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದರಿಂದ, ವಧುವಿನ ತಂದೆ ನಂತರ ಮದುವೆಗೆ ಬಂದಿದ್ದ ಸಂಬಂಧಿಕರನ್ನು ಸಂಪರ್ಕಿಸಿ ಮತ್ತು ನಂತರ ತನ್ನ ಮಗಳನ್ನು ಆತನಿಗೆ ಮದುವೆ ಮಾಡಿದರು.

TV9 Kannada


Leave a Reply

Your email address will not be published.