ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಅನ್ನೋ ಚರ್ಚೆ ಸುನಾಮಿಯಂತೆ ಎದ್ದಿದೆ. ಹೈಕಮಾಂಡ್​ ಕೂಡ ಬದಲಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ತಿದೆ ಅಂತಾನೇ ಹೇಳಲಾಗ್ತಿದೆ. ಆದ್ರೆ ದೆಹಲಿ ನಾಯಕರ ಚೇಂಜ್ ಪ್ಲಾನ್ ಕೇವಲ ಸರ್ಕಾರಕಷ್ಟೇ ಸೀಮಿತವಾಗಿಲ್ಲ ಪಕ್ಷದಲ್ಲೂ ಮೇಜರ್ ಆಪರೇಷನ್ ಮಾಡೋದಕ್ಕೆ ಮೆಗಾ ಪ್ಲಾನ್ ರೂಪಿಸಿದೆ.

ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಪರ್ವಕ್ಕೆ ಕೌಂಟ್​ಡೌನ್ ಶುರುವಾಗಿದೆ. ಸಿಎಂ ಗದ್ದುಗೆಯಿಂದ ಬಿಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ, ಹೊಸ ನಾಯಕನಿಗೆ ಪಟ್ಟಾಭಿಷೇಕ ಮಾಡಲು ಕಮಲ ಪಾಳಯದಲ್ಲಿ ತೆರೆಮರೆಯ ಸಿದ್ಧತೆ ಜೋರಾಗಿದೆ. ಮುಂದಿನ ಸಿಎಂ ಸ್ಥಾನಕ್ಕೆ ಈಗಾಗಲೇ ಹಲವು ನಾಯಕರು ತೆರೆಮರೆಯ ಪ್ರಯತ್ನವನ್ನೂ ಆರಂಭಿಸಿದ್ದಾರೆ. ಇನ್ನು ಬದಲಾವಣೆ ಗಾಳಿ ಕೇವಲ ಸರ್ಕಾರದತ್ತ ಮಾತ್ರವಲ್ಲ. ಪಕ್ಷದತ್ತಲೂ ಬೀಸ್ತಿದೆ. ಅರ್ಥಾತ್ ಕಮಲಪಾಳಯದಲ್ಲೀ ಬಿಗ್ ಸರ್ಜರಿಗೆ ಹೈಕಮಾಂಡ್​ ಪ್ಲಾನ್​ ರೂಪಿಸಿದೆ.

2023ರ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಪಕ್ಷ ಸಂಘಟನೆ ಕೂಡ ಮುಖ್ಯ. ಈ ನಿಟ್ಟಿನಲ್ಲೂ ಒಂದಷ್ಟು ಯೋಜನೆಗಳನ್ನ, ಕಾರ್ಯತಂತ್ರಗಳನ್ನ ಹೆಣೆದಿರೋ ಕಮಲ ಹೈಕಮಾಂಡ್​ ಮೇಜರ್ ಆಪರೇಷನ್ ಮಾಡೋದಕ್ಕೆ ಪ್ಲಾನ್ ರೂಪಿಸಿದೆ. ತೆರೆಮರೆಯಲ್ಲೇ ಹೈಕಮಾಂಡ್​ನಿಂದ ಪ್ರಿಪರೇಷನ್ ಕೂಡ ಶುರುವಾಗ್ಬಿಟ್ಟಿದೆ.

ಸಿಎಂ ಬದಲಾವಣೆ ಕಸರತ್ತಿನ ಮಧ್ಯೆ ವರಿಷ್ಠರ ಪರ್ಯಾಯ ತಂತ್ರ

ಬಿಜೆಪಿಗೆ ಹೊಸ ಲುಕ್ ಕೊಡೋ ಚಿಂತನೆಯಲ್ಲಿರೋ ಹೈಕಮಾಂಡ್ ಸಿಎಂ ಬದಲಾವಣೆ ಕಸರತ್ತಿನ ನಡುವೆ ಪರ್ಯಾಯ ತಂತ್ರವನ್ನ ರೂಪಿಸಿದೆ. ಇದರನ್ವಯ ಸರ್ಕಾರದಲ್ಲಷ್ಟೇ ಅಲ್ಲ, ಬಿಜೆಪಿ ಪಕ್ಷದಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗಲಿದೆ. ಹೀಗಾಗಿ ಪಕ್ಷದ ಪ್ರಮುಖರ ಬದಲಾವಣೆಗೆ ತೆರೆಮರೆಯಲ್ಲಿ ಪ್ರಯತ್ನ ಆರಂಭವಾಗಿದ್ದು, ಸಂಘಟನಾತ್ಮಕ ಹುದ್ದೆಗಳ ಬದಲಾವಣೆಗೂ ಪ್ರಿಪರೇಷನ್ ನಡೆದಿದೆ. ಸಂಘಟನೆಯನ್ನ ಬಲಿಷ್ಠಗೊಳಿಸೋ ಉದ್ದೇಶದಿಂದ ವರಿಷ್ಠರು ಮೇಜರ್ ಆಪರೇಷನ್ ಅನ್ನೋ ಮಂತ್ರ ದಂಡ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇನ್ನು, ಪಕ್ಷದಲ್ಲೂ ಬದಲಾವಣೆ ಬಿರುಗಾಳಿ ಬೀಸೋದಕ್ಕೆ ಪ್ಲಾನ್​ ಸಿದ್ಧವಾಗಿದ್ದು, ಯಾವ ರೀತಿ ಸಮತೋಲನತ ಇರಬೇಕು ಅನ್ನೋ ನಿಟ್ಟಿನಲ್ಲಿ ಸೂತ್ರವೊಂದನ್ನೂ ಸಿದ್ಧಪಡಿಸಲಾಗಿದ್ಯಂತೆ. ಸಮುದಾಯವಾರು ಪ್ರಾತಿನಿಧ್ಯ ಫಾರ್ಮುಲಾವನ್ನ ಜಾರಿಗೊಳಿಸೋದು ಹೈಕಮಾಂಡ್​​.. ಮೆಗಾ ಪ್ಲಾನ್ ಎನ್ನಲಾಗ್ತಿದೆ.

ಸಿಎಂ ಬದಲಾವಣೆ ಮಾಡಿದ್ದೇ ಆದ್ರೆ, ಇದರ ಬೆನ್ನಲ್ಲೇ ಸಮುದಾಯವಾರು ಪ್ರಾತಿನಿಧ್ಯ ಫಾರ್ಮುಲಾ ಜಾರಿಗೊಳಿಸೋದು ಹೈಕಮಾಂಡ್​ ತಂತ್ರ. ಎರಡು ಪ್ರಬಲ ಸಮುದಾಯಗಳ ಬ್ಯಾಲೆನ್ಸ್ ಮಾಡೋ ಲೆಕ್ಕಾಚಾರದಲ್ಲಿರೋ ಬಿಜೆಪಿ ವರಿಷ್ಠರು, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಓಲೈಕೆಗೆ ತಂತ್ರ ಹೆಣೆದಿದ್ದಾರೆ ಎನ್ನಲಾಗ್ತಿದೆ. ಸಮುದಾಯಗಳ ಆಧಾರದಲ್ಲಿ ನಾಯಕರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸ್ಥಾನಮಾನ ನೀಡೋ ಸಾಧ್ಯತೆ ಇದೆ. ಒಕ್ಕಲಿಗ ಸಮುದಾಯದ ನಾಯಕರುಗಳಾದ ಅಶ್ವತ್ಥ್​ ನಾರಾಯಣ್​​​, ಆರ್. ಅಶೋಕ್, ಸಿ.ಟಿ‌ ರವಿ ಹಾಗೂ ಡಿ.ವಿ ಸದಾನಂದ ಗೌಡರಿಗೆ ಆದ್ಯತೆ ನೀಡೋ ಲೆಕ್ಕಚಾರ ಮಾಡಲಾಗಿದ್ಯಂತೆ.. ಸದ್ಯ, ಲಿಂಗಾಯುತ ಸಮುದಾಯದಿಂದ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಹೆಸರು ಮುಂಚೂಣಿಯಲ್ಲಿದೆ.

ಒಟ್ಟಿನಲ್ಲಿ ಸಮುದಾಯವಾರು ಬ್ಯಾಲೆನ್ಸ್ ಮಾಡೋ ನಿಟ್ಟಿನಲ್ಲಿ ಕೇಸರಿ ಹೈಕಮಾಂಡ್ ಸಂಕಲನ, ವ್ಯವಕಲನ ಮಾಡೋದಕ್ಕೆ ಮುಂದಾಗಿದೆ. ಸರ್ಕಾರದಲ್ಲಿ ಉನ್ನತ ಸ್ಥಾನ ಸಿಗದವರಿಗೆ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ಕೊಡೋ ಆಲೋಚನೆ ಮಾಡಲಾಗ್ತಿದೆ. ಇದು ರಾಜ್ಯದ ಕೆಲ ನಾಯಕರಿಗೆ ಶಾಕ್​ ಕೊಡಲಿದೆ. ಯಾಕಂದ್ರೆ ಆಯಕಟ್ಟಿನ ಸ್ಥಾನದಲ್ಲಿರೋರು ತಮ್ಮ ಹುದ್ದೆ ಕಳೆದುಕೊಳ್ಳಬೇಕಾಗಬಹುದು. ಆದ್ರೆ, ಎಲ್ಲರಿಗೂ ಸಮಾನ ಆದ್ಯತೆ ಕೊಡೋ ಲೆಕ್ಕಾಚಾರದಲ್ಲಿ ಹೈಕಮಾಂಡ್​ ಇದೆ. ಸೋ ಮುಂದೆ ಏನಾಗುತ್ತೆ ಅನ್ನೋದನ್ನ ಬಿಜೆಪಿ ದೆಹಲಿ ಲೀಡರ್ಸ್​ ತೀರ್ಮಾನಿಸಲಿದ್ದಾರೆ. ಆದ್ರಿದು ಪಕ್ಷದ ಮೇಲೆ ಯಾವ್ ರೀತಿ ಪರಿಣಾಮ ಬೀರುತ್ತೆ ಅನ್ನೋದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.

ವಿಶೇಷ ಬರಹ: ವೀರೇಂದ್ರ ಉಪ್ಪುಂದ, ನ್ಯೂಸ್​ಫಸ್ಟ್

The post ಸರ್ಕಾರದಲ್ಲಷ್ಟೇ ಅಲ್ಲ, ಬಿಜೆಪಿಯಲ್ಲೂ ಬದಲಾವಣೆಯ ಪರ್ವಕ್ಕೆ ಕೌಂಟ್​ಡೌನ್ appeared first on News First Kannada.

Source: newsfirstlive.com

Source link