ಬೆಂಗಳೂರು: ಕೆಲವು ದಿನಗಳ ಹಿಂದೆ ಭಾರೀ ಬೇಡಿಕೆಯಲ್ಲಿದ್ದ ರೆಮ್​ಡಿಸಿವಿರ್ ಔಷಧಿಗೆ ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚಿನ ರೆಮ್​ಡಿಸಿವಿರ್ ಇರುವ ಹಿನ್ನೆಲೆ ಆಸ್ಪತ್ರೆಗಳಿಂದ ಆನ್ಲೈನ್ ಇಂಡೆಂಟ್ ಪಡೆದು ರೆಮ್ಡಿಸಿವಿರ್ ಹಂಚಿಕೆ ಮಾಡೋದನ್ನ ಸರ್ಕಾರ ನಿಲ್ಲಿಸಿದೆ.

ಇನ್ಮುಂದೆ ಸರ್ಕಾರದಿಂದ ಆಸ್ಪತ್ರೆಗಳಿಗೆ ರೆಮ್ಡಿಸಿವಿರ್ ಪೂರೈಕೆ ಸ್ಥಗಿತ ಮಾಡಲಾಗಿದೆ. ಔಷಧ ವಿತರಕರು ನೇರವಾಗಿ ರೆಮ್ಡಿಸಿವಿರ್ ಸಂಸ್ಥೆಗಳಿಂದ ನಿಯಮಾನುಸಾರ ಪಡೆದು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆಸ್ಪತ್ರೆಗಳು, ಸಾರ್ವಜನಿಕರು ಔಷಧ ವಿತರಕರಿಂದ ಖರೀದಿಸಬಹುದು. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ರೆ ಕಠಿಣ ಕ್ರಮ ಜರುಗಿಸೋ ಎಚ್ಚರಿಕೆಯನ್ನ ಇದೇ ವೇಳೆ ಸರ್ಕಾರ ನೀಡಿದೆ.

The post ಸರ್ಕಾರದಿಂದ ಆಸ್ಪತ್ರೆಗಳಿಗೆ ರೆಮ್ಡಿಸಿವಿರ್ ಪೂರೈಕೆ ಸ್ಥಗಿತ: ಹಾಗಾದ್ರೆ ಎಲ್ಲಿ ಸಿಗುತ್ತೆ..? appeared first on News First Kannada.

Source: newsfirstlive.com

Source link