ಸರ್ಕಾರದ ವಿರುದ್ಧ ಸಿಟ್ಟಿಗೆದ್ದ ವಿಧಾನಸಭೆ ಸಚಿವಾಲಯ! ಮೇ 27ರಂದು ಸಾಮೂಹಿಕ ರಜೆ ಹಾಕಿ ಬಂದ್: ಅಸಲಿ ಕಾರಣ ಏನು? | Karnataka legislative Secretariat staff to go on strike on May 27, what are the demands


ಸರ್ಕಾರದ ವಿರುದ್ಧ ಸಿಟ್ಟಿಗೆದ್ದ ವಿಧಾನಸಭೆ ಸಚಿವಾಲಯ! ಮೇ 27ರಂದು ಸಾಮೂಹಿಕ ರಜೆ ಹಾಕಿ ಬಂದ್: ಅಸಲಿ ಕಾರಣ ಏನು?

ವಿಧಾನಸೌಧ

542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ. ನಿವೃತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದುಪಡಿಸಬೇಕು. ಸಚಿವಾಲಯ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶ ಮರುಸ್ಥಾಪಿಸಲು ಒತ್ತಾಯ ಕೇಳಿ ಬಂದಿದೆ.

TV9kannada Web Team

| Edited By: Ayesha Banu

May 25, 2022 | 5:07 PM
ಬೆಂಗಳೂರು: ಮೇ 27ರಂದು ವಿಧಾನಸಭೆ ಸಚಿವಾಲಯ ಬಂದ್ ಮಾಡಲು ಸಚಿವಾಲಯ ನೌಕರರ ಸಂಘ ನಿರ್ಧಾರ ಮಾಡಿದ್ದು ಬಂದ್ಗೆ ಕರೆ ಕೊಟ್ಟಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27ರಂದು ಸಾಮೂಹಿಕ ರಜೆ ಹಾಕುವ ಮೂಲಕ ಬಂದ್ಗೆ ಮುಂದಾಗಿದ್ದಾರೆ.

542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ. ನಿವೃತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದುಪಡಿಸಬೇಕು. ಸಚಿವಾಲಯ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶ ಮರುಸ್ಥಾಪಿಸಲು ಒತ್ತಾಯ ಕೇಳಿ ಬಂದಿದೆ. ಹಾಗೂ ಎಲ್ಲಾ ಇಲಾಖೆಗಳ ಹುದ್ದೆಗಳ ಕಡಿತ ಪ್ರಸ್ತಾವನೆ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವಾಲಯ ಬಂದ್ಗೆ ನೌಕರರ ಸಂಘ ಮುಂದಾಗಿದೆ. ನೌಕರರು ಶುಕ್ರವಾರ ಸಾಮೂಹಿಕ ರಜೆ ಹಾಕುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *