ಬೆಂಗಳೂರು: ಮೇ 1 ರಿಂದ ಪ್ರಾರಂಭವಾಗಲಿರುವ ಮೂರನೇ ಹಂತದ ವ್ಯಾಕ್ಸಿನೇಷನ್​ನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 45 ವರ್ಷದವರೆಗಿನ ಜನರಿಗೆ ಉಚಿತ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಂದು ಕೊರೊನಾ ಹಿನ್ನೆಲೆ ಬಿಗಿಕ್ರಮಗಳನ್ನ ತೆಗೆದುಕೊಳ್ಳುವ ಕುರಿತು ಕರೆದಿದ್ದ ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಉಚಿತ ವ್ಯಾಕ್ಸಿನೇಷನ್ ನೀಡಲು ಸರ್ಕಾರ ನಿರ್ಧರಿಸಿದೆ. ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮತನಾಡಿದ ಸಿಎಂ.. ಸರ್ಕಾರಿ ಆಸ್ಪತ್ರೆಗಳಲ್ಲಿ 18-45 ವಯಸ್ಸಿನ ಅಂತರದವರಿಗೆ ಉಚಿತ ವ್ಯಾಕ್ಸಿನ್ ನೀಡಲಾಗುವುದು ಎಂದು ಘೋಷಿಸಿದ್ದಾರೆ.

The post ಸರ್ಕಾರಿ ಆಸ್ಪತ್ರೆಗಳಲ್ಲಿ 18-45 ವರ್ಷದವರಿಗೆ ಉಚಿತ ವ್ಯಾಕ್ಸಿನೇಷನ್- ರಾಜ್ಯ ಸರ್ಕಾರ appeared first on News First Kannada.

Source: News First Kannada
Read More