ಬೆಂಗಳೂರು: ನಗರದಲ್ಲಿ ಕೊರೊನಾ ಹೆಮ್ಮಾರಿಯ ಹಾವಳಿಯಿಂದ ಪ್ರತಿದಿನ ಒಂದಕ್ಕಿಂತ ಒಂದು ರಣಭೀಕರ ದೃಶ್ಯಗಳನ್ನ ನೋಡುತ್ತಲೇ ಇದ್ದೀವಿ. ಇದರ ಮಧ್ಯೆ ಕೆ.ಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿ, ಕೊರೊನಾ ಸೋಂಕಿತ ಕುಟುಂಬಸ್ಥರ ಮೇಲೆ ರೌಡಿಸಂ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಒಂದು ರೀತಿ ನರಕ ದರ್ಶನವಾಗ್ತಿದೆ. ಕೊರೊನಾ ಸೋಂಕಿತನನ್ನು ದಾಖಲು ಮಾಡಿಕೊಂಡ ಆಸ್ಪತ್ರೆ, ನಂತರ ಅವರಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ ಎನ್ನಲಾಗಿದೆ. ಈ ಬಗ್ಗೆ ಕುಟುಂಬಸ್ಥರು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇಲ್ಲಿ ಸರಿಯಾದ ಬೆಡ್, ಆಕ್ಸಿಜನ್ ಬೇಕು ಅಂದ್ರೆ ಕಾಸು ಕೊಡಬೇಕಂತೆ. ಇಲ್ಲಿನ ವಾರ್ಡ್​ ಬಾಯ್ ಗಳು ಸೋಂಕಿತ ವ್ಯಕ್ತಿಯನ್ನ ಎಳೆದುಕೊಂಡು ಹೋಗಿದ್ದಾರೆ. ಕೈಗೆ ಗಾಯವಾಗಿ ನೆತ್ತರು ಸೋರಿದ್ದು, ಅವರಿಗೆ ಚಿಕಿತ್ಸೆ ಕೊಡಿ ಅಂತ ಕೇಳಿದ್ರೂ ಕೇರ್ ಮಾಡದೆ ಎಳೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಸೆಕ್ಯೂರಿಟಿ ಇನ್ಚಾರ್ಜ್​​ ಗುರು ಹಾಗೂ ತಂಡ ರೌಡಿಸಂ ಮಾಡಿದ್ದಾರೆ ಎಂದು ಸೋಂಕಿತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇನ್ನು ಲಗ್ಗೆರೆಯ 55 ವರ್ಷದ ಮುನಿರಾಜು ಎಂಬವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ನಾನ್​-ಕೋವಿಡ್​ ರೋಗಿಯಾದ ಅವರು 35 ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಬೆಡ್ ಹಾಗೂ ಆಕ್ಸಿಜನ್​ ಸಿಕ್ಕಿರಲಿಲ್ಲ. ಕೊನೆಗೆ ಏಪ್ರಿಲ್​​ 24ರಂದು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೀಗ ಮುನಿರಾಜು ಮೃತಪಟ್ಟಿದ್ದಾರೆ.

The post ಸರ್ಕಾರಿ ಆಸ್ಪತ್ರೆಯಲ್ಲಿ ನಡೀತಿದ್ಯಾ ರೌಡಿಸಂ..? appeared first on News First Kannada.

Source: newsfirstlive.com

Source link