ಇದು ಸಿನಿಮಾ ಕಥೆಯಲ್ಲ. ನಿಜಕ್ಕೂ ನಡೆದಿರುವ ಪ್ರಸಂಗ. ಎಲ್ಲೆಲ್ಲಿ ಎಂತೆಂಥಾ ಜನಾ ಇರ್ತಾರೆ ಅನ್ನೋದಕ್ಕೆ ಈ ಕೇಸ್ ಒಂದು ಉದಾಹರಣೆ. ಒಬ್ಬರಿಗೆ ಸಿಕ್ಕಿದ ಸರ್ಕಾರಿ ಕೆಲಸವನ್ನು ಬೇರೊಬ್ಬರು ಬರೋಬ್ಬರಿ 5 ವರ್ಷ ನಿರ್ವಹಿಸಿ ಕೊನೆಗೆ ಸಿಕ್ಕಿಬಿದ್ದ ಕಥೆ ಇದು. ಪೊಲೀಸ್ ಇಲಾಖೆಯನ್ನೇ ದಂಗು ಬಡಿಸಿದ ಸ್ಟೋರಿ.

ಈತ 5 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ. ತಾನಾಯ್ತು ತನ್ ಪಾಡಾಯ್ತೆಂದು ಇಲಾಖೆಯಲ್ಲಿ ಕೆಲ್ಸ ಮಾಡ್ಕೊಂಡು ಹೋಗ್ತಿದ್ದ. ಆದ್ರೆ ಅದೊಂದು ಕೌಟುಂಬಿಕ ಕಲಹ ಸೋದರ ಮಾವ-ಅಳಿಯನ ಅದಲು ಬದಲು ಆಟವನ್ನು ಬಿಚ್ಚಿಟ್ಟಿದೆ. ಅಸಲಿಯತ್ತನ್ನು ತೆರೆದಿಟ್ಟಿದೆ. ತೆರೆಯಲ್ಲಿ ಮರೆಯಾಗಿದ್ದ ರಹಸ್ಯ ಬಯಲಾದ್ಮೇಲೆ ಇಡೀ ಪೊಲೀಸ್ ಇಲಾಖೆಯೇ ದಂಗಾಗಿ ಹೋಗಿದೆ. ಅಷ್ಟಕ್ಕೂ ಏನಿದು ಮಾವ ಅಳಿಯನ ಕಳ್ಳ ಪೊಲೀಸ್ ಆಟ ಎಂಬುದನ್ನು ಹೇಳ್ತೀವಿ ನೋಡಿ.

ಈತನ ಲುಕ್ ನೋಡಿ, ಈತನ ಖದರ್ ನೋಡಿ. ಪೊಲೀಸ್ ಅಂದ್ರೆ ಹೀಗೇ ಇರಬೇಕು. ಗತ್ತು ಗೈರತ್ತು ಎಲ್ಲಾ ಇರಬೇಕು. ಮುಖದಲ್ಲೊಂದು ಸ್ಪೆಕ್ಸ್, ಕೈಯಲ್ಲೊಂದು ಗನ್. ಸೊಂಟದಲ್ಲಿರುವ ಬೆಲ್ಟ್ ಈ ಪೊಲೀಸ್ ಲುಕ್ ಗೆ ಮತ್ತಷ್ಟು ಹೊಳಪು ತುಂಬುತ್ತೆ. ಈತನ ಟಾಪ್ ಟು ಬಾಟಂ ಲುಕ್ ನೋಡಿದ್ರೆ ಮುಂದಿನ ಸಿಂಗಂ ಸಿರೀಸ್ ಗೆ ಈತನೇ ಪರ್ಫೆಕ್ಟ್ ಹೀರೋ ಅನ್ಸಿದ್ರು ಅಚ್ಚರಿ ಇಲ್ಲ. ಅರೇ ಇದೇನಪ್ಪಾ ಈ ಪೊಲೀಸಪ್ಪನನ್ನು ಇಷ್ಟೊಂದು ಗುಣಗಾನ ಮಾಡ್ತಿದ್ದಾರೆ ಅನ್ಕೊಂಡ್ರಾ..? ಆ ಇಂಟ್ರೆಸ್ಟಿಂಗ್ ರೋಚಕ ಕಹಾನಿಯನ್ನು ನಿಮ್ಮ ಮುಂದೆ ಬಿಚ್ಚಿಡ್ತೀವಿ ನೋಡಿ. ಈ ಸ್ಟೋರಿ ನೋಡ್ತಿದ್ದಂಗೆ ನಿಮ್ಮ ಮನದಲ್ಲಿ ನೂರಾರು ಸಿನಿಮಾ ದೃಶ್ಯಗಳು ಹಾದು ಹೋಗುವುದು ಗ್ಯಾರೆಂಟಿ.

ಇದು ನಡೆದಿರೋದು ಉತ್ತರ ಪ್ರದೇಶದಲ್ಲಿ. ಈ ಮಾವ-ಅಳಿಯನ ಆಟ ಬಯಲಾಗ್ತಾ ಇದ್ದಂತೆ ನಿಜಕ್ಕೂ ಇಲಾಖೆಯ ಅಧಿಕಾರಿಗಳೇ ಹುಬ್ಬೇರಿಸಿದ್ದಾರೆ.

 

ಕೆಲಸ ಸಿಕ್ಕಿದ್ದು ಮಾವನಿಗೆ, ಸೇರಿಕೊಂಡಿದ್ದು ಅಳಿಯ
ಐದು ವರ್ಷ ವ್ಯವಸ್ಥೆಯನ್ನೇ ಯಾಮಾರಿಸಿದ್ದ ಜೋಡಿ
ಫ್ಯಾಮಿಲಿ ಜಗಳದಿಂದ ಹೊರಬಂತು ಕಿಲಾಡಿಗಳ ರಹಸ್ಯ

ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಅನಿಲ್ ಎಂಬಾತ 2016 ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ನೇಮಕಗೊಂಡಿದ್ದ. ಅನಿಲ್ ಪೊಲೀಸ್ ಆಗಿ ಕೆಲ್ಸ ಮುಂದುವರೆಸಿದ್ರೆ ಇವ್ತು ನಾವು ಈ ಸ್ಟೋರಿ ಮಾಡುವ ಅಗತ್ಯ ಇರ್ತಿಲಿಲ್ವೇನೋ..? ಆದ್ರೆ ಕಾನ್ಸೇಬಲ್ ಆಗಿ ನೇಮಕ ಗೊಂಡಿದ್ದಿ ಅನಿಲ್ ಆದ್ರೂ ಕೆಲ್ಸ ಮಾಡಿದ್ದು ಮಾತ್ರ ಸುನಿಲ್. ಅಷ್ಟಕ್ಕೂ ಏನಿದು ಅನಿಲ್ ಸುನಿಲ್ ನಡುವಿನ ಅದಲು ಬದಲು ಕಳ್ಳಾ ಪೊಲೀಸ್ ಆಟ ಅಂತ್ತೀರಾ..? ಅದನ್ನು ಹೇಳ್ತೀವಿ ನೋಡಿ..

ದೈಹಿಕ ಪರೀಕ್ಷೆಯಲ್ಲಿ ನಾಲ್ಕು ಬಾರಿ ಅನಿಲ್ ವಿಫಲ
ಛಲ ಬಿಡದ ಆತ ಕಡೆಗೂ ಅಂದ್ಕೊಂಡಿದ್ದನ್ನು ಸಾಧಿಸಿದ್ದ

ಈ ಅನಿಲ್ ಉತ್ತರ ಪ್ರದೇಶದ ಮುಜಾಫರ್ನಗರದ ಖತೌನಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ. ಇವನು ಪೊಲೀಸ್ ಆಫೀಸರ್ ಆಗಬೇಕೆಂದು ಸದಾ ಒಂದಿಲ್ಲೊಂದು ರೀತಿಯಲ್ಲಿ ಪ್ರಯತ್ನ ಮಾಡ್ತಾನೆ ಇದ್ದ. ಪೊಲೀಸ್ ಇಲಾಖೆ ದೈಹಿಕ ಪರೀಕ್ಷೆಯಲ್ಲಿ ನಾಲ್ಕು ಸಲ ಫೈಲೂರ್ ಆಗಿದ್ದ. ಆದ್ರೂ ಪ್ರಯತ್ನ ಮಾತ್ರ ಮುಂದುವರೆಸಿದ್ದ. ಕಡೆಗೂ ಆತನ ಕನಸು ನನಸಾಗುವ ಸುದಿನ ಬಂದಿತ್ತು.
ಅದರಂತೆ 2016 ರಲ್ಲಿ ಕಡೆಗೂ ದೈಹಿಕ ಪರೀಕ್ಷೇ ಮಾತ್ರವಲ್ಲ ಲಿಖಿತ ಪರೀಕ್ಷೆ ಕೂಡ ಪಾಸ್ ಆಗಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ನೇಮಕಗೊಂಡಿದ್ದ. ಅನಿಲ್ ನನ್ನು ಠಾಕೂರ್ದ್ವಾರದಲ್ಲಿ ಕೆಲಸಕ್ಕೆ ನೇಮಕ ಮಾಡಲಾಗಿತ್ತು. ಆದರೆ ಅನಿಲ್ ಕುಮಾರ್ ತನ್ನ ಕಷ್ಟ ಪಟ್ಟು ಗಿಟ್ಟಿಸಿಕೊಂಡ ಕೆಲಸವನ್ನ ತಮ್ಮ ಅಳಿಯ ಸುನಿಲ್ಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ.

ಅಳಿಯನ ಮೇಲೆ ಮೋಹ, ಪೊಲೀಸ್ ಇಲಾಖೆಗೆ ದ್ರೋಹ
ಉಡುಗೊರೆಯಾಗಿ ಸಿಕ್ಕಿದ ಕೆಲಸವನ್ನು ಸತತ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದಾನೆ. 5 ವರ್ಷಗಳ ಕಾಲ ಸೋದರ ಮಾವನ ಹೆಸ್ರಲ್ಲಿ ಯಾರಿಗೂ ಕಿಂಚಿತ್ತು ಅನುಮಾನ ಬಾರದಂತೆ ಕೆಲ್ಸ ಮಾಡಿದ್ದ. ಈ ಮೂಲಕ ಇಡೀ ಪೊಲೀಸ್ ಇಲಾಖೆಗೆ ದ್ರೋಹ ಬಗೆದಿದ್ದ.

ಅಷ್ಟಕ್ಕೂ ಪ್ರಕರಣ ಹೊರಬಂದಿದ್ದೇಗೆ ಗೊತ್ತಾ?
ರಹಸ್ಯ ಬಯಲಾಗುತ್ತಿದ್ದಂಗೆ ಪೊಲೀಸರೇ ಶಾಕ್!

ಸತ್ಯವನ್ನು ಹೆಚ್ಚು ದಿನ ಮುಚ್ಚಿಡಕ್ಕಾಗಲ್ಲ, ಒಂದಿಲ್ಲೊಂದು ದಿನ ಹೊರಬರಲೇ ಬೇಕಲ್ವಾ..? ಯಾವುದಕ್ಕೂ ಒಂದು ಅಂತ್ಯ ಅನ್ನೋದು ಇರುತ್ತಲ್ವಾ..? ಅದರಂತೆ ಬಿಟ್ಟಿಯಾಗಿ ಪೊಲೀಸ್ ಅಧಿಕಾರಿಯಾದ ಸುನಿಲ್ ಕೆಲ್ಸಕ್ಕೂ ಪುಲ್ ಸ್ಟಾಪ್ ಬೀಳುವ ಸಮಯ ಬಂದಿತ್ತು. ಅದ್ಕೆ ಕಾರಣವಾಗಿದ್ದು ಕುಟುಂಬದ ಕಲಹ.

ಇಬ್ಬರು ಸಂಬಂಧಿಗಳಾದ್ರು ಅದ್ಯಾಕೋ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ಅದರಂತೆ ಸಂಬಂಧಿಯೊಬ್ಬರು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ದೂರಿನಲ್ಲಿ ಅನಿಲ್ ಬದಲು ಸುನಿಲ್ ಪೊಲೀಸ್ ಇಲಾಖೆಯಲ್ಲಿ ಕೆಲ್ಸ ಮಾಡ್ತಿದ್ದಾನೆಂದು ಉಲ್ಲೇಖ ಮಾಡಿದ್ದಾರೆ. ಇದ್ರಿಂದ ಪೊಲೀಸ್ ಗೆ ಪೊಲೀಸರೇ ಒಂದು ಕ್ಷಣ ದಿಗಿಲುಗೊಂಡಿದ್ದಾರೆ.

ಕೂಡಲೇ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಕೂಡಲೇ ಅನಿಲ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಇಬ್ಬರು ಸತ್ಯವನ್ನು ಒಪ್ಪಿದ್ದಾರೆ. ಪೊಲೀಸರು ಇದೀಗ ಅನಿಲ್ ನನ್ನು ಬಂಧಿಸಿದ್ದು, ಸುನಿಲ್ ಗಾಗಿ ಬಲೆ ಬೀಸಿದ್ದಾರೆ.

ಒಟ್ಟಿನಲ್ಲಿ 5 ವರ್ಷಗಳ ಕಾಲ ಇಡೀ ಪೊಲೀಸ್ ಇಲಾಖೆಯಲ್ಲೇ ಇದ್ದ ಕಳ್ಳಾಟವಾಡಿದ್ದ ಈ ಕಿಲಾಡಿ ಜೋಡಿ ಸಿಕ್ಕಿ ಬಿದ್ದಿದೆ. ಇದು ಬೆಳಕಿಗೆ ಬಂದ ಪ್ರಕರಣವೊಂದಷ್ಟೇ.. ಇನ್ನೂ ಬೆಳಕಿಗೆ ಬರದೆ ಮರೆಯಲ್ಲಿ ರಹಸ್ಯವಾಗಿರುವ ಪ್ರಕರಣಗಳು ಅದೆಷ್ಟಿದ್ಯೋ.

5 ವರ್ಷಗಳ ಕಾಲ ಸಾಮಾನ್ಯ ವ್ಯಕ್ತಿಯೊಬ್ಬ ಇಲಾಖೆಯಲ್ಲೇ ಇದ್ದುಕೊಂಡು ಟೋಪಿ ಹಾಕ್ತಾನೇ ಅಂದ್ರೆ ಅದೆಷ್ಟು ವ್ಯವಸ್ಥೆ ಕೆಟ್ಟಿರಬೇಕು. ಈ ಪ್ರಕರಣದಲ್ಲಿ ಮಾವ ಅಳಿಯನಿಗೆ ಕೆಲಸ ಕೊಟ್ಟಿದ್ದ. ಇನ್ಯಾರಿಗೋ ದೇಶ ದ್ರೋಹಿಗಳಿಗೆ ಮಾರಿಕೊಂಡಿದ್ರೆ ಗತಿ ಏನಾಗ್ತಿತ್ತು.

The post ಸರ್ಕಾರಿ ಕೆಲಸ ಸಿಕ್ಕಿದ್ದು ಮಾವನಿಗೆ, ಸೇರಿಕೊಂಡಿದ್ದು ಅಳಿಯ- 5 ವರ್ಷ ವ್ಯವಸ್ಥೆಯನ್ನೇ ಯಾಮಾರಿಸಿದ್ದ ಜೋಡಿ appeared first on News First Kannada.

Source: newsfirstlive.com

Source link