ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರ ತೆರವು: ಮನೆ ಕಳೆದುಕೊಂಡ 91ರ ಹರೆಯದ ಪದ್ಮಶ್ರೀ ಪುರಸ್ಕೃತ ಗುರು ಮಾಯಧರ್ ರಾವುತ್ | Padma Shri awardee Guru Mayadhar Raut removed from govt accommodation as eviction starts


ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರ ತೆರವು: ಮನೆ ಕಳೆದುಕೊಂಡ 91ರ ಹರೆಯದ ಪದ್ಮಶ್ರೀ ಪುರಸ್ಕೃತ ಗುರು ಮಾಯಧರ್ ರಾವುತ್

ಗುರು ಮಾಯಾಧರ್ ರಾವುತ್

ದೆಹಲಿ: 1970 ರ ದಶಕದಲ್ಲಿ ಏಷ್ಯಾಡ್ ಗ್ರಾಮದಲ್ಲಿ (Asiad village) ಮಂಜೂರು ಮಾಡಿದ್ದ ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರವು ಪ್ರಾರಂಭಿಸಿದೆ. ಇವರಲ್ಲಿ ಹಲವಾರು ಪದ್ಮ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಈ ಪೈಕಿ 91 ವರ್ಷದ ಒಡಿಸ್ಸಿ ನೃತ್ಯಪಟು ಗುರು ಮಾಯಧರ್ ರಾವುತ್ (Guru Mayadhar Raut) ಅವರು ಒಡಿಸ್ಸಿಗೆ (Odissi) ಶಾಸ್ತ್ರೀಯ ಸ್ಥಾನಮಾನವನ್ನು ನೀಡುವಲ್ಲಿ ಮಹತ್ವದ ಪಾತ್ರಕ್ಕಾಗಿ ರಾಷ್ಟ್ರಪತಿಗಳಿಂದ 2010 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು. ಮಂಗಳವಾರ ಮಧ್ಯಾಹ್ನ ತೆರವು ಕಾರ್ಯಾಚರಣೆ ವೇಳೆ ರಾಷ್ಟ್ರಪತಿ ಸಹಿ ಮಾಡಿದ ಪ್ರಮಾಣಪತ್ರ ಕೂಡಾ ಇತರ ವಸ್ತುಗಳ ಜೊತೆಗೆ ರಸ್ತೆಯ ಮೇಲೆ ಬಿದ್ದಿತ್ತು ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಅಧಿಕಾರಿಗಳು ಬಂದಾಗ ನಾನು ಊಟ ಬಡಿಸುತ್ತಿದ್ದೆ ಎಂದು ಅವರ ಮಗಳು, ಒಡಿಸ್ಸಿ ನೃತ್ಯಗಾರ್ತಿ ಮಧುಮಿತಾ ರಾವುತ್ ಹೇಳಿದರು. “ನನಗೆ ಇವತ್ತು ತುಂಬಾ ನೋವಾಗಿದೆ. ಸೋನಾಲ್ ಮಾನ್ಸಿಂಗ್ ಮತ್ತು ರಾಧಾ ರೆಡ್ಡಿಯಂತಹ ದೇಶದ ಕೆಲವು ಪ್ರಸಿದ್ಧ ನೃತ್ಯಗಾರರಿಗೆ ತರಬೇತಿ ನೀಡಿದ ನರ್ತಕ ಇಲ್ಲಿದ್ದಾರೆ. ಈ ಮಹಾನ್ ವ್ಯಕ್ತಿಯ ಜತೆ ನೀವು ಅದು ಹೇಗೆ ಈ ರೀತಿ ಕ್ರೂರವಾಗಿ ನಡೆದುಕೊಳ್ಳುತ್ತಿದ್ದೀರಿ? ಅವರು ದೆಹಲಿಯಲ್ಲಿ 50 ವರ್ಷಗಳ ಕಾಲ ಕಲಿಸಿದರು ಮತ್ತು ಎಲ್ಲಿಯೂ ಒಂದು ಇಂಚು ಭೂಮಿಯನ್ನ ಸಹ ಹೊಂದಿಲ್ಲ. ಅವರನ್ನು ಈ ರೀತಿ ಹೊರಹಾಕುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕರೂ ಮೂಲಭೂತ ಘನತೆಗೆ ಅರ್ಹರು ಎಂದು ಮಧುಮಿತಾ ಹೇಳಿದರು. ಅವರು ತಾತ್ಕಾಲಿಕವಾಗಿ ಸರ್ವೋದಯ ಎನ್‌ಕ್ಲೇವ್‌ನಲ್ಲಿರುವ ತನ್ನ ವಿದ್ಯಾರ್ಥಿಯ ಪೋಷಕರ ಒಡೆತನದ ನೆಲಮಾಳಿಗೆಗೆ ತೆರಳಿದ್ದಾರೆ.

70 ರ ದಶಕದಿಂದ, 40-70 ರ ನಡುವಿನ ವಯಸ್ಸಿನ ಕಲಾವಿದರಿಗೆ ಮೂರು ವರ್ಷಗಳ ಅವಧಿಗೆ ಮೂಲ ಬಾಡಿಗೆಗೆ ವಸತಿಗಳನ್ನು ನೀಡಲಾಯಿತು, ಅದನ್ನು ನಿಯಮಿತವಾಗಿ ವಿಸ್ತರಿಸಲಾಯಿತು.

(ಹೆಚ್ಚಿನ ಮಾಹಿತಿ ಅಪ್ಡೇಟ್ಆಗಲಿದೆ)

TV9 Kannada


Leave a Reply

Your email address will not be published.