ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ಬಾಬು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ‘ಸರ್ಕಾರು ವಾರಿ ಪಾಟ’. ಈ ಸಿನಿಮಾವನ್ನ ಇದೇ ವರ್ಷ ಏಪ್ರಿಲ್-1 ನೇ ತಾರೀಖು ಗ್ರ್ಯಾಂಡ್ ರಿಲೀಸ್ ಮಾಡಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ‘ಸರ್ಕಾರು ವಾರಿ ಪಾಟ’ ರಿಲೀಸ್ ಆಗಲು ಇನ್ನು ಉಳಿದಿರೋದು ಕೇವಲ 2 ತಿಂಗಳು ಮಾತ್ರ. ಈ ಸಂದರ್ಭದಲ್ಲಿ ಸಿನಿಮಾದಿಂದ ಒಂದು ಬಿಗ್ ಚೇಂಜಸ್ ಆಗೋ ಲಕ್ಷಣಗಳು ಕಾಣ್ತಿದೆ.
ಅದೇನಂದ್ರೆ ‘ಸರ್ಕಾರು ವಾರಿ ಪಾಟ’ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಮಾಡಲು ಚಿಂತನೆ ನಡೆಸಿದ್ದಾರಂತೆ. ಮೊನ್ನೆ ತಾನೆ ರಿಲೀಸ್ ಆದ ‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಎಲ್ಲಾ ಭಾಷೆಯಲ್ಲೂ ಸಖತ್ ಸೌಂಡ್ ಮಾಡಿದೆ. ಅದರಲ್ಲೂ ಬಾಲಿವುಡ್ನಲ್ಲಿ’ಪುಷ್ಪ’ ಸಿನಿಮಾ ಕಲೆಕ್ಷನ್ ಜೋರಾಗೇ ಆಗಿದೆ.
‘ಸರ್ಕಾರು ವಾರಿ ಪಾಟ’ ಸಿನಿಮಾ ಟೀಂ, ‘ಪುಷ್ಪ’ ಸಿನಿಮಾವನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡಲು ಚಿಂತನೆ ನಡೆಸಿದ್ದಾರಂತೆ. ‘ಪುಷ್ಪ’ ಸಿನಿಮಾ ರಿಲೀಸ್ ಗೂ ಮುನ್ನ ತನ್ನ ಅದ್ಭುತ ಹಾಡುಗಳಿಂದ ಬಾಲಿವುಡ್ನಲ್ಲಿ ಮೋಡಿ ಮಾಡಿತ್ತು. ಹಾಡುಗಳು ಸಿನಿಮಾದ ಅದ್ಭುತ ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ಸದ್ಯ ಫಿಲ್ಮ್ ಟೀಂ ಕೂಡ ಅದೇ ದಾರಿಯಲ್ಲಿ ಸಾಗಿದ್ದು, ಒಂದು ವೇಳೆ ‘ಸರ್ಕಾರು ವಾರಿ ಪಾಟ’ ಸಿನಿಮಾದ ಹಾಡುಗಳು ಬಾಲಿವುಡ್ನಲ್ಲಿ ಹಿಟ್ ಆದರೆ ಹಿಂದಿಯಲ್ಲಿ ರಿಲೀಸ್ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರಂತೆ.
ಇದು ಒಂದು ಕಡೆ ಆದರೆ, ‘ಸರ್ಕಾರು ವಾರಿ ಪಾಟ’ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಾಯಕ ಮಹೇಶ್ ಬಾಬು ಒಪ್ಪಿಗೆ ನೀಡಿಲ್ಲವಂತೆ. ಒಂದು ವೇಳೆ ಮಹೇಶ್ ಬಾಬು ಏನಾದ್ರೂ ಮನಸ್ಸು ಮಾಡಿ ಪ್ಯಾನ್ ಇಂಡಿಯಾ ಆಗಿ ‘ಸರ್ಕಾರು ವಾರಿ ಪಾಟ’ಸಿನಿಮಾವನ್ನು ಮಾಡೋಣ ಅಂತ ಏನಾದ್ರು ಹೇಳಿದ್ರೆ ನಂತರ ನಿರ್ಧಾರ ಮಾಡ್ತೀವಿ ಅಂತ ಸಿನಿಮಾದ ನಿರ್ದೇ0ಶಕ ಪರಶುರಾಮ್ ಮಾಹಿತಿ ನೀಡಿದ್ದಾರೆ.
ಆದರೆ ‘ಸರ್ಕಾರು ವಾರಿ ಪಾಟ’ಪ್ಯಾನ್ ಇಂಡಿಯಾ ಸಿನಿಮಾ ಆಗುವ ಅರ್ಹತೆ ಇದೆಯಾ ಎಂದು ಕೂಡ ನಿರ್ದೇಶಕರು ಯೋಚನೆ ಮಾಡಬೇಕಾಗುತ್ತದೆ. ‘ಸರ್ಕಾರು ವಾರಿ ಪಾಟ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ ಅಥವಾ ಕೇವಲ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಾ ಅಂತ ಏಪ್ರಿಲ್-1 ರ ವರೆಗೆ ಕಾದು ನೋಡ ಬೇಕಿದೆ.